ಪಾಲಿಕೆ ಅನುಧಾನ ಕಾಮಗಾರಿ ದಕ್ಷಿಣ ಕ್ಷೇತ್ರಕ್ಕೆ ತಾರತಮ್ಯ ನೀತಿ : ಅಭಯ ಪಾಟೀಲ 

Hasiru Kranti
ಪಾಲಿಕೆ ಅನುಧಾನ ಕಾಮಗಾರಿ ದಕ್ಷಿಣ ಕ್ಷೇತ್ರಕ್ಕೆ ತಾರತಮ್ಯ ನೀತಿ : ಅಭಯ ಪಾಟೀಲ 
WhatsApp Group Join Now
Telegram Group Join Now
ಬೆಳಗಾವಿ : ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಯುಜಿಡಿ ಕಾಮಗಾರಿಗಳಲ್ಲಿ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಕಾಮಗಾರಿಗಳ ಒದಗಿಸುವಲ್ಲಿ ಉತ್ತರ ಕ್ಷೇತ್ರಕ್ಕೆ 85% ಕಾಮಗಾರಿ ದಕ್ಷಿಣ ಕ್ಷೇತ್ರದ ಕೆಲಸ ಕಾಮಗಾರಿಗೆ 15% ಅನುಧಾನ ನೀಡಿ    ತಾರತಮ್ಮ ಮಾಡುತ್ತಿರುವುದನ್ನು ಖಂಡಿಸಿ ದಕ್ಷಿಣ  ಕ್ಷೇತ್ರದ ಶಾಸಕ ಅಭಯ ಪಾಟೀಲ್ ಪಾಲಿಕೆ ಅಧಿಕಾರಿಗಳ ವಿರುದ್ಧ ಮಹಾನಗರ ಪಾಲಿಕೆಯ ಸಾಮನ್ಯ ಸಭೆಯಲ್ಲಿ ಆಕ್ರೋಶವನ್ನು ಹೋರ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
      ಅವರು    ಸೋಮವಾರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ  ಮಾತನಾಡಿ  ಪಾಲಿಕೆಗೆ ಕೇವಲ ರಾಜ್ಯ ಸರ್ಕಾರದ ಅನುಧಾನ ಮಾತ್ರ ಬರುವದಿಲ್ಲ, ಕೇಂದ್ರದ ಅನುಧಾನವು ಬರುತ್ತದೆ, ಅದನ್ನು ಅರಿತು ಅಧಿಕಾರಿಗಳು ಅಧಿಕಾರ ಇರುವ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಪಾಲಿಕೆ ಅಧಿಕಾರಿಗಳು ಕೆಲಸ ಮಾಡಬಾರದು ಮತ್ತು  ಪಾಲಿಕೆ ಸದಸ್ಯರು ಮಾಹಿತಿ ಕೋರಿ ಪತ್ರ ಬರೆದರೇ, ಹಿಂಬರಹ ನೀಡಬೇಕು. ಆದರೇ, ಅಧಿಕಾರಿಗಳಿಂದ ಪಾಲಿಕೆಯ ಸದಸ್ಯರಿಗೆ ಸರಿಯಾದ ಮಾಹಿತಿ ಸಿಗದೇ ಅಧಿಕಾರಿಗಳಿಂದ  ಸ್ಪಂದನೆ ದೊರೆಯುತ್ತಿಲ್ಲ. ಶಿವಚರಿತ್ರದ ಬಳಿಯಲ್ಲಿ ಬಂದ ಮಾಡಲಾದ ರಸ್ತೆಯಲ್ಲಿ ಒಂದು ಬದಿಯಿಂದ ಆರಂಭಿಸಿ ಜನರಿಗೆ ಅನುಕೂಲ ಮಾಡಲು ಮಹಾನಗರ ಪಾಲಿಕೆ ವಿಶೇಷ ಸಮಿತಿಯನ್ನು ರಚಿಸಿ ವರದಿ ನೀಡಬೇಕೆಂದು ಆಗ್ರಹಿಸಿದರು.
ಕಾರ್ಪೊರೇಟರ್ ಗಳಿಗೆ ಪಾಲಿಕೆಯಲ್ಲಿ ಅಧಿಕಾರಿಗಳು ಸರಿಯಾಗಿ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಎಂದು  ದಕ್ಷಿಣ  ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅಧಿಕಾರಿಗಳ ವಿರುದ್ದ ಆಕ್ರೋಶವನ್ನು ಹೋರ ಹಾಕಿದರು. ದಕ್ಷಿಣ ಕ್ಷೇತ್ರದ ಸಾಕಷ್ಟು ಸ್ಮಾರ್ಟ್ ಸಿಟಿ ಅನುಧಾನದಡಿ ಸಾಕಷ್ಟು ಅಭಿವೃಧಿ ಕೆಲಸಗಳನ್ನು ಮಾಡಬೇಕಾಗಿದೆ. ಆದರೆ ಇಲ್ಲಿನ ಅಧಿಕಾರಿಗಳು ಯಾವುದಕ್ಕೂ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಇದೇ ರೀತಿ ಮುಂದು ವರೆದರೆ ಪಾಲಿಕೆಯ ಅಧಿಕಾರಿಗಳ  ವಿರುದ್ದ ಹೋರಾಟ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.
ಅದರಂತೆಯೇ ಎನ್.ಜಿ.ಟಿ ಯೋಜನೆಯ ಅನುದಾನವನ್ನು ಉತ್ತರಕ್ಕೆ 60% ಇಟ್ಟುಕೊಳ್ಳಿ ಆದರೆ 80% ಕ್ಕಿಂತ ಹೆಚ್ಚಿನ ಅನುಧಾನವನ್ನು ನೀಡಿ ಬೆಳಗಾವಿ ದಕ್ಷಿಣ ಕ್ಷೇತ್ರದ ಜನರಿಗೆ ಮಲತಾಯಿ ಧೋರಣೆ ಮಾಡುತ್ತೀರಿ , ಸರಕಾರಕ್ಕೆ ತಪ್ಪು ಮಾಹಿತಿ ನೀಡಿ, ಯುಜಿಡಿ ಕಾಮಗಾರಿಗಳಿಗೆ ಅನುದಾನವನ್ನು ಸರಿಯಾಗಿ ನೀಡದೆ ಇರುವ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಬೆಳಗಾವಿಯ ಮಹಾನಗರ ಪಾಲಿಕೆಯ ವ್ಯಕ್ತಿಯಲ್ಲಿ ನಗರಾಧ್ಯಂತ ಇನ್ನು ಸಾಕಷ್ಟು ಅಭಿವೃಧಿ ಕಾಮಗಾರಿಗಳು ಮಾಡಬೇಕಾಗಿದೆ, ಆದರೆ ಈಗಿನ ಸರಕಾರ ಪರಿಸ್ಥಿಯಲ್ಲಿ ಅರಿಯಾಗಿ ಅನುಧಾನ ಬಾರದೇ ಇರುವುದರಿಂದ ಸರಿಯಾಗಿ ಯಾವುದೇ ಕೆಲಸಗಳು ಯಾಗುತ್ತಿಲ್ಲ, ಸ್ಥಳೀಯರಿಗೆ ನಾವುಗಳು ಉತ್ತರಿಸುವುದಕ್ಕೆ ಕಷ್ಟವಾಗುತ್ತಿದೆ ಎಂದರು.
ಒಟ್ಟಾರೆಯಾಗಿ ಸೋಮವಾರ ಮಹಾನಗರ ಪಾಲಿಕೆಯಲ್ಲಿನ ಸಾಮಾನ್ಯ ಸಭೆಯಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ ಪಾಲಿಕೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
    ಸಭೆಯಲ್ಲಿ  ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು (ಆಸೀಫ್ ) ಸೇಠ್ ಮಾತನಾಡಿ ನಿಮ್ಮ ಸರ್ಕಾರ ಇದ್ದಾಗ 80% ಕೆಲಸ ನೀವೇ ತೆಗೆದುಕೊಂಡಿದ್ದೀರಿ ಆದರೆ ನಾವು ಆ ತರಹ ಮಾಡಿಲ್ಲ ಸರಿಯಾಗಿ ದಕ್ಷಿಣ ಉತ್ತರದಲ್ಲಿ ಕೆಲಸ ನಡೆಯುತ್ತಿದ್ದು ಈ ವಿಚಾರವನ್ನು ನಾವು, ನೀವು ಕುಳಿತು ಅಧಿಕಾರಿಗಳ ಸಮ್ಮುಖದಲ್ಲಿ ಕುಳಿತು ಮಾತನಾಡಿ ಸಮಸ್ಯ ಬಗೆಹರಿಸೋಣ ಎಂದರು.
    ಆಡಳಿತ ಪಕ್ಷದ ಎಲ್ಲ ಸದಸ್ಯರೂ ಪಾಲಿಕೆಯಲ್ಲಿ ಎದ್ದು ನಿಂತು ಅಲ್ಲಿ ಕೆಲಸ ಮಾಡುವ ಡಿ ಗ್ರೂಪ್ ಮಹಿಳಾ ಕೆಲಸ ಮಾಡುವ ವ್ಯಕ್ತಿ ಎಲ್ಲ ಅಧಿಕಾರಿಗಳು ಪಾಸ್ ಮಾಡಿದ ಕಾಮಗಾರಿಗಳನ್ನು, ಬಿಲ್ಲುಗಳನ್ನು  ತಿರಸ್ಕಾರ ಮಾಡುತ್ತಿದ್ದು  ಅವಳನ್ನು ಕೆಲಸದಿಂದ ತೆಗೆದು ಬೇರೆಯವರನ್ನು ಹಾಕಬೇಕು ಎಂದು ಪ್ರತಿಭಟನೆ ಮಾಡಿದರು.ಈ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ತಮ್ಮ ವಾರ್ಡಗಳ ಕೆಲಸ, ಕಾಮಗರಿಗಳ ಕುರಿತು ಚರ್ಚೆ ಮಾಡಿದರು.
   ಈ ಸಭೆಯಲ್ಲಿ  ಪಾಲಿಕೆ ಮಹಾಪೌರರಾದ ಮಂಗೇಶ ಪವಾರ, ಉಪ ಮಹಾಪೌರ ವೀಣಾ ಜೋಶಿ, ಆಯುಕ್ತರಾದ ಕಾರ್ತಿಕ, ಪಾಲಿಕೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article