ಪೋಲೀಯೊ ನಿರ್ಮೂಲನೆಯಿಂದ ದೇಶದಲ್ಲಿ ವಿಕಲಚೇತನರ ಸಂಖ್ಯೆ ಕಡಿಮೆಯಾಗಲು ಸಾದ್ಯವಾಗಿದೆ : ಯಶವಂತರಾಯಗೌಡ ಪಾಟೀಲ

Hasiru Kranti
ಪೋಲೀಯೊ ನಿರ್ಮೂಲನೆಯಿಂದ ದೇಶದಲ್ಲಿ ವಿಕಲಚೇತನರ ಸಂಖ್ಯೆ ಕಡಿಮೆಯಾಗಲು ಸಾದ್ಯವಾಗಿದೆ : ಯಶವಂತರಾಯಗೌಡ ಪಾಟೀಲ
WhatsApp Group Join Now
Telegram Group Join Now

ಇಂಡಿ: ನಿಮ್ಮ ಅನೇಕ ಸಮಸ್ಯಗಳಿಗೆ ಸರ್ಕಾರ ಸ್ಪಂದಿಸಿ ಸಮಾಜದಲ್ಲಿ ನಿಮಗೆ ಅನುಕೂಲವಾಗು ನಿಟ್ಟಿನಲ್ಲಿ ಕಾರ್ಯವನ್ನು ಮಾಡುತ್ತಿದೆ. ಜಗತ್ತಿನಲ್ಲಿ ಶೇಕಡಾ ೬೦ರಷ್ಟು ಜನ ವಿಕಲಚೇತನರಿದ್ದು ಭಾರತ ದೇಶದಲ್ಲಿ ಕೇವಲ ೨.೨ರಷ್ಟು ಜನ ಮಾತ್ರ ಜನ ಸಂಖ್ಯೇ ಹೊಂದಿದೆ. ಪೋಲೀಯೊ ನಿರ್ಮೂಲನೆಯಿಂದ ನಮ್ಮ ದೇಶದಲ್ಲಿ ವಿಕಲಚೇತನರ ಸಂಖ್ಯೆ ಕಡಿಮೆಯಾಗಲು ಸಾದ್ಯವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಶನಿವಾರರಂದು ನಗರದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಅಖಿಲ ಕರ್ನಾಟಕ ವಿಕಲಚೇತನರ ಒಕ್ಕೂಟ ಇಂಡಿ ಇವರ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡ ೨೦೨೫-೨೬ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬುದ್ದಿ ಮಾಂದ್ಯ, ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಕಿಲ ಸಮಾಜದಲ್ಲಿ ಪ್ರೊತ್ಸಾಹ ನೀಡಿ ಉತ್ತೇಜನ ಕೊಡುವುದು ಮುಖ್ಯವಾಗಿದ್ದು ನಾಗರಿ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳುವಂತಾಗಬೇಕು. ಅವರಿಗಾಗಿ ಸರ್ಕಾರ ಮಾಡದಿರುವ ಕಾರ್ಯಗಳನ್ನು ಸರ್ಕಾರದ ಜೊತೆ ಜೊತೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಸಾಕಷ್ಟು ವಿಕಲಚೇತನರ ಏಳಿಗೆಗಾಗಿ ಶ್ರಮಿಸುತ್ತ್ತಿವೆ. ನಿಮ್ಮ ಬದುಕು ರೂಪಿಸುವ ಕಾರ್ಯಕ್ರಮಗಳು ಜಾರಿಗೆ ತಂದಾಗ ಮಾತ್ರ ಸಾದ್ಯ. ಆ ನಿಟ್ಟಿನಲ್ಲಿ ಸರ್ಕಾರಗಳು ವಿಕಲಚೇತನರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದು ಅತಿ ಅವಶ್ಯಕವಾಗಿದ್ದು ಅಂದಾಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ತಾಪಂ ಇಓ ಡಾ|| ಭೀಮಾಶಂಕರ ಕನ್ನೂರ, ಶಿವಲಿಂಗಪ್ಪ ನಾಯ್ಕೊಡಿ ಪ್ರಾಸ್ತಾವಿಕವಾಗಿ, ಮಹಾಂತೇಶ ಹಿರೇಮಠ ಸಾನಿದ್ಯ ವಹಿಸಿ ಮಾತನಾಡಿದರು.
ವೇದಿಕೆ ಮೇಲೆ ಪೊಲೀಸ ಉಪವಿಭಾಗಾಧಿಕಾರಿ ಸದಾಶಿವ ಕಟ್ಟಿಮನಿ, ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಶಿವಯೋಗೆಪ್ಪ ಚನ್ನಗೊಂಡ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ಡಿ.ಎ. ಮುಜಗೊಂಡ, ಎಸ್.ಎಮ್ ಮಕಾನಂದಾರ, ಮಹಾನಂದ ಬಂಡಿವಡ್ಡರ, ಬಾಬುಶಾ ಹೊಸಮನಿ, ಸಿದ್ದಪ್ಪ ಗುಳೆ, ಶಿವಾನಂದ, ಶಿವಕಾಂತಪ್ಪ ಕುಂಬಾರ ಸೇರಿದಂತೆ ಅನೇಕರಿದ್ದರು. ಬಸವರಾಜ ಗೊರನಾಳ ನೀರೂಪಿಸಿ ವಂದಿಸಿದರು.
ಪೋಟೊ ಕ್ಯಾಪ್ಸನ್ ೧೧ ಇಂಡಿ ೦೧: ನಗರದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಅಖಿಲ ಕರ್ನಾಟಕ ವಿಕಲಚೇತನರ ಒಕ್ಕೂಟ ಇಂಡಿ ಇವರ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡ ೨೦೨೫-೨೬ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.

WhatsApp Group Join Now
Telegram Group Join Now
Share This Article