ಬಳ್ಳಾರಿ 12.: 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ರಾಯಚೂರಿನ ಬದಲಾಗಿ ಕಾರಣಾಂತರಗಳಿಂದ ಬೀದರ್ನಲ್ಲಿ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಇದೇ ಫೆಬ್ರವರಿಯೊಳಗೆ ಸಮ್ಮೇಳನ ನಡೆಸುವ ಅನಿವಾರ್ಯತೆ ಇರುವುದರಿಂದ ಈ ಬಾರಿ ಬೀದರ್ ನಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವನ ತಗಡೂರು ತಿಳಿಸಿದ್ದಾರೆ.


