ಬಳ್ಳಾರಿ. ಜ. 12: ಮಾಜಿ ಸಚಿವ ಗಂಗಾವತಿಯ ಶಾಸಕ ಗಾಲಿ ಜನಾರ್ಧನ್ ರೆಡ್ಡಿ 59ನೇ ಜನ್ಮದಿನದ ಅಂಗವಾಗಿ ಹುಂಡೇಕರ್ ರಾಜೇಶ್ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯ (ಘೋಷ್ ಆಸ್ಪತ್ರೆ) ಆವರಣದಲ್ಲಿ ಅನ್ನ ದಾಸೋಹ ಕಾರ್ಯಕ್ರಮ ಹಾಗೂ ಗರ್ಭಿಣಿ ಹೆಣ್ಣು ಮಕ್ಕಳಿಗೆ ಬ್ರೆಡ್ ಮತ್ತು ಹಣ್ಣು ಹಂಪಲ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹುಂಡೆಕರ್ ರಾಜೇಶ್ ಮಾತನಾಡಿ, ನಮ್ಮ ನೆಚ್ಚಿನ ನಾಯಕ ಶಾಸಕ ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಅವರಿಗೆ ದೇವರು ಇನ್ನೂ ಹೆಚ್ಚಿನ ಆಯುಷ್ಯ ಮತ್ತು ಅಧಿಕಾರವನ್ನು ನೀಡಿ ಜನ ಸೇವೆ ಮಾಡುವ ಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾಗಳಾದ ಹುಂಡೇಕರ್ ರಾಕೇಶ್, ಸ್ವಾಮಿ ನಾಯಕ್, ವಲಿ, ರಮಲಿ ನಾಯಕ್, ದಸ್ತಗಿರಿ, ಕೆದರ್ನಾಥ್, ಬಸವ, ಆಟೋ ಮಾರೇಶ್, ರಾಮಾಂಜನಿ, ರಮೇಶ್ ನಾಯಕ್,ಲಕ್ಷ್ಮಣಾಯಕ್, ಗಾದಿಲಿಂಗ, ಚಂದ್ರ, ದುರ್ಗಾ, ವಂಶಿ,ರಾಮಸ್ವಾಮಿ,ನಾಗರಾಜ, ರಾಮ್ ರೆಡ್ಡಿ, ಪವನ್, ರಾಮರೆಡ್ಡಿ, ಚಂದ್ರ, ದಸ್ತಗಿರಿ, ವೀರೇಶ್, ಮಿಥುನ್ ಕುಮಾರ್, ಫೈಜಾನ್, ತುಕೇಶ್, ಮಲ್ಲಿಕಾರ್ಜುನ, ಜೈನ್, ಮಾಬಾಷಾ, ರಾಮ ನಾಯಕ್, ಪವನ್, ನಾಗೇಂದ್ರ, ಕಿರಣ್, ದೇವರಾಜ್ ಸಿದ್ದಪ್ಪ, ಮತ್ತು ನೂರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಭಾಗವಹಿಸಿ ಶುಭ ಕೋರಿದರು.


