ಬಳ್ಳಾರಿ. ಜ. 10: ಇದೇ ಜನೆವರಿ 3 ರಂದು ಬಳ್ಳಾರಿ ನಗರದ ಎಸ್.ಪಿ ವೃತ್ತದ ಶ್ರೀ ವಾಲ್ಮೀಕಿ ವೃತ್ತದಲ್ಲಿ ಶ್ರೀ ವಾಲ್ಮೀಕಿ ಮಹರ್ಷಿ ಪುತ್ತಳಿ ಅನಾವರಣ ಕಾರ್ಯಕ್ರಮದ ನಿಮಿತ್ಯ ನಗರದಾದ್ಯಂತ ಮಹರ್ಷಿ ವಾಲ್ಮೀಕಿ ಹಾಗೂ ನಗರ ಶಾಸಕರು, ಇತರ ರಾಜಕೀಯ, ವಾಲ್ಮೀಕಿ ಮುಖಂಡರುಗಳುಳ್ಳ ಬ್ಯಾನರ್, ಬಂಟಿಕ್ಸ್ ತೋರಣಗಳುಳ್ಳ ಇತ್ಯಾದಿ ಹಾಕಿರುವರು.
ಅದರಂತೆ ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಆವಂಬಾವಿ ಪ್ರದೇಶದ ಗಂಗಾವತಿ ಶಾಸಕರಾದ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ, ಮಾಜಿ ಸಚಿವರಾದ ಶ್ರೀರಾಮುಲು ಮತ್ತು ಇತರರ ಮನೆಗಳ ಮುಂಭಾಗದಲ್ಲಿ ಹಾದು ಹೋಗಿರುವ ಬಳ್ಳಾರಿ-ಸಿರುಗುಪ್ಪ ಸಾರ್ವಜನಿಕ ರಸ್ತೆಯ ಎರಡೂ ಕಡೆಗಳಲ್ಲಿ ಬಂಟಿಂಗ್ಸ್ ಮತ್ತು ಬ್ಯಾನರ್‌ಗಳನ್ನು ಅಳವಡಿಸಿರುವ ಬಗ್ಗೆ ದಿನಾಂಕ ಜನವರಿ ಒಂದರಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ರವರ ವಾಸದ ಮನೆ ಹಾಗೂ ಕಛೇರಿಯ ಹತ್ತಿರ ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗಿದ್ದ ಬ್ಯಾನರ್‌ಗಳನ್ನು ಜನಾರ್ಧನ ರೆಡ್ಡಿಯ ಮನೆಯಲ್ಲಿ ಕೆಲಸ ಮಾಡುವವರು ತೆರವು ಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಮಧ್ಯೆ ಘರ್ಷಣೆಗಳುಂಟಾಗಿ ಕಲ್ಲು ತೂರಾಟ ನಡೆದು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು 04 ಜನ ಮತ್ತು 04 ಜನ ಸಾರ್ವಜನಿಕರು ಗಾಯಗೊಂಡಿದ್ದು, ನಂತರ ಖಾಸಗಿ ಭದ್ರತಾ ಸಿಬ್ಬಂದಿಯವರು ಬಂದೂಕುಗಳಿಂದ ಫೈರಿಂಗ್ ನಡೆಸಿದ್ದರಿಂದ, ಅಕಸ್ಮಿಕವಾಗಿ ರಾಜಶೇಖರ್ ರೆಡ್ಡಿ ಎನ್ನುವವರಿಗೆ ಗುಂಡು ತಗುಲಿ, ಸ್ಥಳದಲ್ಲಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಬಳ್ಳಾರಿಯ ಬಿಮ್ಸ್ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗಿದ್ದು, ಕರ್ತವ್ಯ ನಿರತ ವೈಧ್ಯರು ಪರಿಶೀಲಿಸಿ ಸದರಿ ವ್ಯಕ್ತಿಯು ಮೃತ ಪಟ್ಟಿರುವ ಬಗ್ಗೆ ತಿಳಿಸಿರುತ್ತಾರೆ. ಈ ವೇಳೆಯಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿ ಲಾಠಿ ಚಾರ್ಜ್ ಮುಖಾಂತರ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಲಾಯಿತು.

ಈ ಘಟನೆಗೆ ಸಂಬಂಧಿಸಿದಂತೆ ಒಟ್ಟಾರೆಯಾಗಿ ಬಳ್ಳಾರಿ ನಗರದ ಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ 06 ಪ್ರಕರಣಗಳು ದಾಖಲಾಗಿದ್ದು, ಮುಂಬರುವ ದಿನಗಳಲ್ಲಿ ಕಾನೂನು ಸುವ್ಯಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಕ್ಕಾಗಿ ಎರಡೂ ಗುಂಪಿಗೆ ಸೇರಿದಂತೆ 33 ಮತ್ತು 34 ವ್ಯಕ್ತಿಗಳ ಮೇಲೆ ಕಲಂ-126 ಬಿ.ಎನ್.ಎಸ್.ಎಸ್. ಅಡಿಯಲ್ಲಿ ಮುಂಜಾಗ್ರತಾ ಕ್ರಮವಾಗಿ 02 ಪ್ರಕರಣಗಳನ್ನು ಒಟ್ಟು 67 ಜನರ ಮೇಲೆ ದಾಖಲಾಗಿಸಿರುತ್ತದೆ ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕ ರಾದ ಸುಮನ ಡಿ ಪನ್ನೆಕರ್ ತಿಳಿಸಿದ್ದಾರೆ.
ಈ ಘಟನೆಯಿಂದಾಗಿ ನಗರದಲ್ಲಿ ಬಂಟಿಂಗ್ ಮತ್ತು ಬ್ಯಾನರ್ ಅಳವಡಿಕೆಗೆ ಜಿಲ್ಲಾಧಿಕಾರಿಗಳು, ಬಳ್ಳಾರಿ ರವರ ಆದೇಶ ಸಂಖ್ಯೆ : ಕಂ/ಎಂ.ಎ.ಜಿ/ಕಾ.ಸು/40/2025-26, ದಿನಾಂಕ 03-01-2026 ರಂತೆ ಬಳ್ಳಾರಿ ಜಿಲ್ಲಾದ್ಯಂತ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಸಂಬಂಧಪಟ್ಟ ಸ್ಥಳೀಯ ಆಡಳಿತಗಳ ಅನುಮತಿ ಇಲ್ಲದೆ ಬ್ಯಾನರ್,
ಬ್ಯಾನರ್, ಹೋರ್ಡಿಂಗ್ಸ್, ಪ್ಲೆಕ್ಸ್, ಪೋಸ್ಟರ್‌ಗಳು ಹಾಗೂ ಜಾಹಿರಾತುಗಳನ್ನು ಅಳವಡಿಸುವಂತಿಲ್ಲ ಎಂದು ಆದೇಶವನ್ನು ಹೊರಡಿಸಿದ್ದಾರೆ. ಇದರ ಹೊರತಾಗಿಯೂ ಒಂದು ವೇಳೆ ಯಾರಾದರೂ ಮೇಲ್ಕಂಡ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಮೇಲ್ಕಂಡ ಆದೇಶವನ್ನು ಜಾರಿಗೊಳಿಸುವಲ್ಲಿ ಯಾವುದೇ ನಿರ್ಲಕ್ಷ ತೋರಿದಲ್ಲಿ ಸಂಬಂಧಪಟ್ಟ ಸ್ಥಳೀಯ ಆಡಳಿತ ಅಧಿಕಾರಿಗಳೇ ಮುಂದಿನ ಆಗುಹೋಗುಗಳಿಗೆ ಜವಾಬ್ದಾರರನ್ನಾಗಿ ಮಾಡಲಾಗುವುದೆಂದು ಆದೇಶದಲ್ಲಿ ತಿಳಿಸಲಾಗಿದೆ.


