ಮಹಾಲಿಂಗಪೂರ ಸರ್ಕಾರಿ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಮಹಾಲಿಂಗಪೂರ:ಜ.೧೦., ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಮುಧೋಳ ವತಿಯಿಂದ.ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರಗಿತು.
ಯೋಗ ಶಿಕ್ಷಕ ರಾಘವೇಂದ್ರ ನೀಲನ್ನವರ ರನ್ನ ಬೆಳಗಲಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಮಾದಕ ವ್ಯಸನಗಳ ಆಕ?ಣೆಗೆ ಬಲಿಯಾಗಬೇಡಿ,ಮದ್ಯಪಾನ ಮತ್ತು ಧೂಮಪಾನಗಳು ನಿಧಾನಗತಿಯಲ್ಲಿ ಮನು?ನ ಜೀವನವನ್ನು ಕೊಲ್ಲುತ್ತಿವೆ. ವಿದ್ಯಾರ್ಥಿ ಜೀವನಕ್ಕೆ ಕಟ್ಟುನಿಟ್ಟಿನ ನಿಯಮಗಳ ಪಾಲನೆ ಸಾಧನೆಗೆ ಪೂರಕವಾಗಿದೆ, ಸ್ವಾಸ್ಥ್ಯ ಸಂಕಲ್ಪಕ್ಕೆ ಬದ್ಧರಾಗಿ,ನಿತ್ಯ ಯೋಗ ಮಾಡಿ, ನಿರೋಗಿಯಾಗಿ,ಸದೃಢ ಮನಸ್ಸು ಮತ್ತು ಸದೃಢ ದೇಹವನ್ನು ಹೊಂದಲು ಪ್ರಯತ್ನಿಸಿ ಎಂದು ತಿಳಿಸಿದರು.
ಪ್ರಾಚಾರ್ಯರಾದ ಶಿವಪ್ಪ ಜೋಡಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಕಾರ್ಯಕ್ರಮಗಳು ಅತ್ಯಂತ ಮಹತ್ವಪೂರ್ಣವಾಗಿವೆ. ಪ್ರತಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮಹತ್ವವನ್ನು ತಿಳಿದುಕೊಂಡು.ದುಶ್ಚಟಗಳಿಂದ ದೂರವಿರಬೇಕೆಂದು ತಿಳಿಸಿದರು.
ವಲಯ ಮೇಲ್ವಿಚಾರಕ ಮಲ್ಲಿಕಾರ್ಜುನ ವಜ್ರಮಟ್ಟಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಜನಪರ ಕಾರ್ಯಕ್ರಮಗಳು ಸಮಾಜದಲ್ಲಿ ನೊಂದ ಜನಕ್ಕೆ ಬೆಳಕಾಗಿ,ಒಂದು ಗ್ರಾಮದ ಸಮೃದ್ಧ ಅಭಿವೃದ್ಧಿಗೆ ಬೇಕಾದ. ಎಲ್ಲಾ ಬಗೆಯ ಕಾರ್ಯ ಯೋಜನೆಗಳನ್ನು. ಒಳಗೊಂಡು ನಿತ್ಯವೂ ಕಾರ್ಯರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು. ಸೇವಾ ಪ್ರತಿನಿಧಿ ರೇಣುಖಾ ತೇರದಾಳ ಮತ್ತು ಶಿಕ್ಷಕರವೃಂದ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


