ಬಳ್ಳಾರಿ,ಜ10.ಭಾರತೀಯ ವಿಜ್ಞಾನ ಮತ್ತು ಗಣಿತ ಆಧಾರಿತ ವೈಚಾರಿಕ ಚಿಂತನೆಗಳು ಪಾಶ್ಚಾತ್ಯ ರಾಷ್ಟçಗಳÀಲ್ಲಿ ಇಂದಿಗೂ ಪ್ರಚಲಿತದಲ್ಲಿದ್ದು, ಭಾರತೀಯರ ಆಲೋಚನಾ ಸಾಮರ್ಥ್ಯ ಎಂದೆAದಿಗೂ ಉತ್ಕçಷ್ಟವಾಗಿದೆ ಎಂದು ಗದಗಿನ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು ನುಡಿದರು.
ಶುಕ್ರವಾರ, ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ ಸಿದ್ದು ಪಿ ಆಲಗೂರ ಸಭಾಂಗಣದಲ್ಲಿ ‘ಉನ್ನತ ಶಿಕ್ಷಣದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಸ್ತುತೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಮಾದರಿಯ ಶಿಕ್ಷಣ ವ್ಯವಸ್ಥೆಯಲ್ಲಿ ಹೊಗಳಿಕೆ, ಅವಮಾನ, ಪೆಟ್ಟು ಹಾಗೂ ಬೈಗುಳ ಎಲ್ಲವೂ ಸಾಮಾನ್ಯ. ಇವುಗಳನ್ನು ಸವಾಲಾಗಿ ಸ್ವೀಕರಿಸಿದ ಮನುಷ್ಯನು ತನ್ನಲ್ಲಿ ಅಡಗಿರುವ ಸೂಪ್ತವಾದ ಮನಸ್ಸನ್ನು ಜಾಗೃತಗೊಳಿಸಿಕೊಂಡು ತನ್ನ ಗುರಿಯತ್ತ ಸಾಗುತ್ತಾರೆ. ವಿಶ್ವವಿದ್ಯಾಲಯಗಳು ಜ್ಞಾನಭಿವೃದ್ಧಿಯ ಕೇಂದ್ರಗಳಾಗಿವೆ, ವಿದ್ಯಾರ್ಥಿಗಳು ತಮ್ಮ ಉದ್ಯೋಗ ಪಡೆಯಬೇಕೆಂಬ ಹುದ್ದೆಗಳ ವ್ಯಾಪ್ತಿಯನ್ನು ಉನ್ನತ ಮಟ್ಟಕ್ಕೆ ವಿಸ್ತರಿಸಬೇಕು ಆಗ ಮಾತ್ರ ಉತ್ತಮ ಸ್ಥಾನ ತಮ್ಮದಾಗಿಸಿಕೊಳ್ಳಬಹುದು ಎಂದು ಹೇಳಿದರು.
ಪ್ರತಿ ಮನುಷ್ಯನ ದೇಹ ಎಂಬುದು ಖಾಲಿ ಡಬ್ಬವಿದ್ದಂತೆ, ಅದರಲ್ಲಿ ನಾವು ಭರಿಸಿಕೊಳ್ಳುವ ವಸ್ತು ವಿಷಯಗಳ ಮೂಲಕ ಅಗಾಧವಾದ ಸಾಧನೆ ಮಾಡಬಹುದು. ಮನುಷ್ಯರ ಮೆದುಳನ್ನು ದೇವರು ಎಲ್ಲರಿಗೂ ಒಂದೇ ರೀತಿಯಲ್ಲಿ ಸೃಷ್ಟಿಸಿರುತ್ತಾರೆ ಅದನ್ನು ಜ್ಞಾನ ಹಾಗೂ ವಿಭಿನ್ನ ಆಲೋಚನಾ ಶಕ್ತಿಗಳಿಂದ ಬಳಸಿಕೊಳ್ಳುವವರು ಮಹಾನ್ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದರು.
ಅಲ್ಬರ್ಟ್ ಐನ್ಸ್ಟಿನ್, ಮಹಾತ್ಮ ಗಾಂಧಿಯAತಹ ಮಹಾತ್ಮರು ವಿದ್ಯಾರ್ಥಿ ದಿಸೆಯಲ್ಲಿ ಶಿಕ್ಷಣದಲ್ಲಿ ಹಿಂದಿದ್ದರೂ ನಂತರದಲ್ಲಿ ತನ್ನ ಯೋಚನಾ ಸಾಮರ್ಥ್ಯದ ಬಲದ ಮೇಲೆ ಜಗತ್ತಿಗೆ ಮಾದರಿಯಾದರು ಎಂದು ತಿಳಿಸಿದರು.
ಪಾಶ್ಚಿಮಾತ್ಯ ಸಂಸ್ಕೃತಿಗಳು, ಸಿದ್ಧಾಂತಗಳು ಭಾರತದ ವೇದ, ಉಪನಿಷತ್ತುಗಳಿಂದ ಎರವಲು ಪಡೆದು ಮಾರ್ಪಾಟುಗೊಂಡಿವೆ. ಹಲವಾರು ಖ್ಯಾತನಾಮ ವಿಜ್ಞಾನಿಗಳು ಭಾರತೀಯ ವೇದ ಪರಂಪರೆಯನ್ನು ಕೊಂಡಾಡಿದ್ದಾರೆ. ಎಲ್ಲ ಮಾನವರಲ್ಲಿಯ ಅಗೋಚರ ಶಕ್ತಿಯನ್ನು ಜಾಗೃತಗೊಳಿಸಲು ಸೂಕ್ತ ಮಾರ್ಗದರ್ಶಕರ ಅವಶ್ಯಕತೆ ಇರುತ್ತದೆ. ಸ್ವಾಮಿ ವಿವೇಕಾನಂದರ ಆಲೋಚನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಬದಲಾವಣೆಗಳು ಸಾಧ್ಯವಾಗುತ್ತವೆ ಎಂದರು.
ನಮ್ಮ ನಾಡು, ಸಂಸ್ಕೃತಿ ಮತ್ತು ಪೂರ್ವಜರ ಇತಿಹಾಸ ಓದುವರಿಂದ ಇತಿಹಾಸವನ್ನು ಮರು ಸೃಷ್ಟಿಸಬಹುದು. ಆದ್ದರಿಂದ ಭಾರತೀಯ ಯುವಕರು ಜ್ಞಾನಾರ್ಜನೆಗೆ ಹೆಚ್ಚು ಒಲವು ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ವಿವಿಯ ಕುಲಪತಿಗಳಾದ ಪ್ರೊ ಎಂ ಮುನಿರಾಜು ಮಾತನಾಡಿ, ನಮ್ಮ ವಿವಿಯ ವಿದ್ಯಾರ್ಥಿಗಳಲ್ಲಿ ಹಲವು ಸುಪ್ತ ಪ್ರತಿಭೆಗಳಿದ್ದು, ಶ್ರಮವಹಿಸಿ ವಿದ್ಯಾಭ್ಯಾಸಕ್ಕಾಗಿ ಸಮಯ ಮೀಸಲಿಟ್ಟ ಅನೇಕ ಗ್ರಾಮೀಣ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನೀವು ಸಹ ಅವರಂತೆ ರೂಪುಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ನಿರ್ಭಯಾನಂದ ಸ್ವಾಮೀಜಿಯವರು ವಿದ್ಯಾರ್ಥಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.
ವಿವಿಯ ಪ್ರಭಾರ ಕುಲಸಚಿವರಾದ ಪ್ರೊ ತಿಪ್ಪೇರುದ್ರಪ್ಪ ಜೆ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳ ಪರಿಚಯ ಮಾಡಿದರು. ಕಾರ್ಯಕ್ರಮದ ಸಂಚಾಲಕರಾದ ಡಾ ಕುಮಾರ್ ಪ್ರಾರ್ಥನೆ ಗೀತೆ ಹಾಡಿದರು. ಡಾ ಶಿವಕುಮಾರ್ ನಿರೂಪಿಸಿ, ವಂದಿಸಿದರು
ಭಾರತೀಯ ಚಿಂತನೆಗಳು ಇಂದಿಗೂ ಪ್ರಚಲಿತ: ನಿರ್ಭಯಾನಂದ ಸರಸ್ವತಿ


