ಬಳ್ಳಾರಿ,ಜ.೦೯: ವಿಬಿ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ನಾಯಕರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅನೇಕ ಸುಧಾರಣೆ ಕೂಡಾ ಆಗಿದೆ. ಕಾಂಗ್ರೆಸನವರು ಅನೇಕ ಚುನಾವಣೆಯಲ್ಲಿ ಕೂಡಾ ಗಾಂಧೀಜಿ ಪೋಟೋ ಬಳಸಿಲ್ಲ, ಆದರೆ ಗಾಂಧೀಜಿ ಹೆಸರನ್ನು ಪ್ರಸ್ತಾಪ ಮಾಡುವುದಕ್ಕೆ ನೈತಿಕತೆ ಕಾಂಗ್ರೆಸ್ಗಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಗುಡುಗಿದರು.
ನಗರದ ಹವಾಂಭಾವಿಯಲ್ಲಿರುವ ಜನಾಧÀðನರೆಡ್ಡಿ ಅವರ ಮನೆಯ ಮುಂಭಾಗದ ಗ್ಲಾಸ್ಹೌಸ್ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಸಿತ ಭಾರತ ಬಗ್ಗೆ ಕೈ ನಾಯಕರು ಗೊಂದಲ ಮಾಡುತ್ತಿದ್ದಾರೆ. ೧೧ ಲಕ್ಷ ಜಾಬ್ ಕಾರ್ಡ್ ಅನ್ನು ನಕಲಿ ಮಾಡಿ ಕೊಳ್ಳೆ ಹೊಡೆಯುವಂತಹ ಯತ್ನ ಕೂಡಾ ನಡೆದಿದೆ. ಬೋಗಸ್ ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು. ರಾಜ್ಯಸಕಾರವು ಕೃಷಿ ಚಟುವಟಿಕೆಗಳಲ್ಲಿ ಕಾರ್ಮಿಕರು ಕೆಲಸ ಮಾಡಲು ೧೦೦ ದಿನಗಳಿಗೆ ನೀಡಲಾಗುತ್ತಿತ್ತು. ಆದರೆ. ವಿಕಸಿತ ಭಾರತ್ದಿಂದ ೧೨೫ ದಿನಗಳು ನೀಡಲಾಗುತ್ತದೆ. ೩೭೫ ರು, ಕೂಡ ಹಣ ಹೆಚ್ಚಳ ಮಾಡಲಾಗಿದೆ. ನಮ್ಮ ಕೇಂದ್ರಸರ್ಕಾರವು ನೇರ ಖಾತೆಗೆ ಹಣ ಜಮೆ ಆಗುತ್ತದೆ. ಇಡೀ ದೇಶದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರಿಗೆ ಗಾಂಧಿ ಹೆಸರು ಹೇಳುವ ನೈತಿಕತೆ ಇಲ್ಲ. ಕೇಂದ್ರಸರ್ಕಾರವು ಗ್ರಾಪಂ ಅಧಿಕಾರ ಕಸಿದುಕೊಂಡಿಲ್ಲ, ಹಳೆ ಪದ್ದತಿಯನ್ನು ಮುಂದುವರಿಸಬೇಕೆAದು ಕಾಂಗ್ರೆಸ್ನವರು ಯತ್ನಿಸುತ್ತಿದ್ದಾರೆ. ಆದರೆ ಹೊಸ ತಂತ್ರಜ್ಞಾನಕ್ಕೆ ನಾವೆಲ್ಲ ಒಗ್ಗೂಡಬೇಕಿದೆ. ವಾಕ್ ಸ್ವಾತಂತ್ರö್ಯದಿAದ ಮಾತನಾಡುವ ಹಕ್ಕುಇದೆ. ಪ್ರಧಾನಿ ಹೆಸರನ್ನು ಕೆಡುಸುವ ಉದ್ದೇಶದಿಂದ ಪ್ರಯತ್ನಿಸುತ್ತಿದ್ದಾರೆ. ವಿದೇಶದಲ್ಲಿ ತೆಗೆಳುವ ಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ನಕಲಿ ಗಾಂಧಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೂಡಾ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸೋಮಶೇಖರರೆಡ್ಡಿ, ಸುರೇಶಬಾಬು ಸೇರಿದಂತೆ ಮತ್ತಿತತರು ಇದ್ದರು.


