ಶೇ 100 ಕರವಸೂಲಾತಿ ಮಾಡಿದ ಪಿಡಿಒಗಳಿಗೆ ಸನ್ಮಾನ
ಕಾಗವಾಡ: ನರೇಗಾ, 15 ನೇ ಹಣಕಾಸು ಯೋಜನೆ ನಿಗದಿತ ಗುರಿ ಸಾಧಿಸುವಂತೆ ಇಒ ವೀರಣ್ಣ ವಾಲಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ತಾಲೂಕು ಪಂಚಾಯತ ಕಚೇರಿಯಲ್ಲಿ ಗುರುವಾರ ನಡೆದ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ನರೇಗಾ ಯೋಜನೆಯ ಗುರಿಗೆ ಅನುಗುಣವಾಗಿ ಮಾನವ ದಿನ ಸೃಜನೆ ಮಾಡಬೇಕು. ಸಮುದಾಯ ಕಾಮಗಾರಿ ಆರಂಭಿಸುವಂತೆ ಹಾಗೂ ಎಲ್ಲ ಕೂಲಿಕಾರರ ಇಕೆವೈಸಿ ಪೂರ್ಣಗೊಳಿಸಬೇಕು. 2 ದಿನದಲ್ಲಿ 2026-27 ನೇ ಸಾಲಿನ ಯುಕ್ತಧಾರ ಕ್ರಿಯಾ ಯೋಜನೆ ತಾಲ್ಲೂಕು ಪಂಚಾಯತಿಗೆ ಸಲ್ಲಿಸಲು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಸಾಮಗ್ರಿ ಬಿಲ್ ಪಾವತಿ ಹಾಗೂ ಚಾಲ್ತಿ ಕೂಸಿನ ಮನೆಗಳ ಮಾಹಿತಿ ಪಡೆದುಕೊಂಡರು. 15 ನೇ ಹಣಕಾಸು ಯೋಜನೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು, ಬೀದಿ ನಾಯಿ ದಾಳಿ ತಪ್ಪಿಸಲು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶೆಲ್ಟರ್ ನಿರ್ಮಾಣ ಮಾಡಲು ತಿಳಿಸಿದರು.
ಎಸ್ ಬಿಎಂ, ಜೆಜೆಎಂ, ಕರ ವಸೂಲಾತಿ, ಇ ಹಾಜರಾತಿ, ವಸತಿ ಯೋಜನೆ ಪ್ರಗತಿ ಪರಿಶೀಲಿಸಿದರು. ಇದೇ ವೇಳೆ ಶೇ 100% ರಷ್ಟು ಕರ ವಸೂಲಾತಿ ಮಾಡಿದ ಶಿರಗುಪ್ಪಿ ಮತ್ತು ಮೋಳೆ ಗ್ರಾಮದ ಪಿಡಿಒಗಳಿಗೆ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಎಡಿ(ಆರ್ ಇ) ಶಿವಾನಂದ ಸನಾಳ, ಎಡ(ಪಂರಾಜ್) ಎ.ಡಿ ಅನ್ಸಾರಿ ಸರ್, ಪಿಡಿಒಗಳಾದ ಸಂಜೀವ ಸೂರ್ಯವಂಶಿ, ನಾಗಾರಾಜ ಕಾಂಬಳೆ, ಪರಶುರಾಮ ಬತಗುಣಕಿ, ರಾಕೇಶ ಕಾಂಬಳೆ, ಶಿಲ್ಪಾ ನಾಯಕವಾಡಿ, ರವೀಂದ್ರ ದಶವಂತ, ಕಾರ್ಯದರ್ಶಿ ಅಣ್ಣಾಸಾಬ ಸುತಾರ, ಶಿವಾನಂದ ಕೋಳಿ, ತಾಂತ್ರಿಕ ಸಹಾಯಕ ಮುರುಗೇಶ, ಯುವರಾಜ, ಆದಿನಾಥ, ಎನ್ಆರ್ ಎಲ್ ಎಂ ಆನಂದ ವಂಟಗೂಡೆ, ಸತೀಶ ಬೆಕ್ಕೇರಿ ಮುಂತಾದವರು ಇದ್ದರು.


