ಜಾನಪದ ನಿತ್ಯ ನಿರಂತರವಾದುದ್ದು : ಡಾ.ಸಿ.ಟಿ. ಗುರುಪ್ರಸಾದ

Hasiru Kranti
ಜಾನಪದ ನಿತ್ಯ ನಿರಂತರವಾದುದ್ದು : ಡಾ.ಸಿ.ಟಿ. ಗುರುಪ್ರಸಾದ
WhatsApp Group Join Now
Telegram Group Join Now

ಗೋಕಾಕ ಜ ೪ : ಉತ್ತರ ಕರ್ನಾಟಕ ಭಾಗದಲ್ಲಿ ಜಾನಪದ ಸೊಬಗು ಹೆಚ್ಚಾಗಿ ಹರಡಿದ್ದು, ಅದನ್ನು ಉಳಿಸಿ,ಬೆಳೆಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥ ಡಾ.ಸಿ.ಟಿ. ಗುರುಪ್ರಸಾದ ಹೇಳಿದರು.

ರವಿವಾರದಂದು ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಡಾ.ಶ್ರೀರಾಮ ಇಟ್ಟಣ್ಣವರ ಪ್ರಧಾನ ವೇದಿಕೆಯಲ್ಲಿ ಕನ್ನಡ ಜಾನಪದ ಪರಿ?ತ್ ,ತಾಲೂಕು ಘಟಕ ಗೋಕಾಕ ವತಿಯಿಂದ ಹಮ್ಮಿಕೊಂಡ ಗೋಕಾಕ ತಾಲೂಕಿನ ಪ್ರಪ್ರಥಮ ಕನ್ನಡ ಜಾನಪದ ಸಮ್ಮೇಳನವನ್ನು ಡೋಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ನಿರಂತರವಾದಿದ್ದು, ಇದಕ್ಕೆ ಕೊನೆಯಿಲ್ಲ ಇದು ನಿತ್ಯ ನಿರಂತರವಾದುದ್ದು, ಜಾನಪದವನ್ನು ನಾವು ಹೆಚ್ಚಾಗಿ ಪರಿಚಯಿಸುವ ಕಾರ್ಯ ಮಾಡಬೇಕು. ಜನರ ಬಾಯಿಯಿಂದ ಬಾಯಿಗೆ ಬಂದ ಪದಗಳೆ ಜಾನಪದ ಇದರ ಜಾಗೃತಿಯನ್ನು ನಾವು ಸಮಾಜದಲ್ಲಿ ಮೂಡಿಸಬೇಕಾಗಿದೆ. ಜಾನಪದ ಅಕಾಡೆಮಿ ಸೇರಿದಂತೆ ಅನೇಕ ವಿಶ್ವವಿದ್ಯಾಲಯಗಳು ಇದನ್ನು ಪ್ರಚುರ ಪಡೆಸುವ ಕಾರ್ಯ ಮಾಡುತ್ತಿದ್ದಾರೆ. ಕಲಾವಿದರು ಜಾನಪದದ ಜೀವಾಳವಾಗಿದ್ದಾರೆ. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಜಾನಪದ ಉಳಿಸಿ ಬೆಳೆಸುವ ಸಂಬಂಧ ಕಲಾವಿದರ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ಸರಕಾರ ಮಾಡಬೇಕಾಗಿದೆ .ಮುಂದಿನ ಪಿಳಿಗೆಗೆ ಜಾನಪದ ಮತ್ತು ಜಾನಪದ ಕಲಾವಿದರನ್ನು ಪರಿಚಯಿಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ. ಕಜಾಪ ಸಂಘಟನೆ ವತಿಯಿಂದ ಜಾನಪದ ಕಲಾವಿದರನ್ನು ಗುರುತಿಸಿ ಅವರಿಂದ ಜಾನಪದವನ್ನು ಸಶಕ್ತಗೊಳಿಸುವ ಕಾರ್ಯ ಮಾಡುತ್ತಿದ್ದಾರೆ ಅವರ ಕಾರ್ಯ ನಿಜವಾಗಿಯೂ ಶ್ಲಾಘನೀಯ ಎಂದು ಹೇಳಿದರು.


ಸಮ್ಮೇಳನದ ಸರ್ವಾಧ್ಯಕ್ಷ ಬಸವಣ್ಣೆಪ್ಪ ಕಬಾಡಗಿ ಮಾತನಾಡಿ ಬೆಳಗಾವಿ ಜಿಲ್ಲೆಯ ಕಿರೀಟದಂತಿರುವ ಗೋಕಾವಿ ನಾಡು ಸುಂದರ ನೈಸರ್ಗಿಕ ಪರಿಸರದಲ್ಲಿ ನೆಲೆಗೊಂಡು ನಾಡಿನ ಕಲೆ, ಸಾಹಿತ್ಯ ಸಂಸ್ಕೃತಿ ಧರ್ಮ ಶಿಕ್ಷಣ ರಂಗಗಳಿಗೆ ಮೌಲಿಕ ಕೊಡುಗೆ ನೀಡಿದೆ. ಗೋಕಾಕವಿ ನಾಡು ಶರಣರ ಬೀಡಾಗಿದ್ದು, ತಪಸ್ವಿ ತಡಸಲ ಮಹಾಲಿಂಗೇಶ್ವರರು,ಪುಣ್ಯಾರಣ್ಯ ಅರಬಾಂವಿ ದುರದುಂಡೀಶ್ವರರು, ಸಾವಳಗಿ ಶಿವಲಿಂಗೇಶ್ವರರು, ಕೊಣ್ಣೂರು ಕಾಡಸಿದ್ದೇಶ್ವರರು, ಅಂಕಲಗಿ ಅಡವಿಸಿದ್ದೇಶ್ವರರು, ಸುಣಧೋಳ ಜಡಿಸಿದ್ಧರು, ಮೂಡಲಗಿ ಶಿವಭೋಧರಂಗರು, ತವಗದ ಬಾಹಯ್ಯನವರು, ಕೈತನಾಳ ರಾಮಸಿದ್ಧರು, ಸದ್ಗುರ ಮುನಿ ಪಾಯಸಾಗರರು, ಬೋಠೆಮಹರಾಜರು ಸೇರಿದಂತೆ ಅನೇಕ ತಪಸ್ವಿಗಳು ಗೋಕಾಕ ನಾಡಿನಲ್ಲಿ ಬಾಳಿ ಬದುಕಿದ್ದಾರೆ. ಗೋಕಾವಿ ನಾಡು ಕಲಾವಿದರ ತವರೂರು ಸಹ ಆಗಿದೆ ಎಂದ ಅವರು ಡಾ.ಚಂದ್ರಶೇಖರ್ ಕಂಬಾರ ಅವರೊಂದಿಗೆ ಬಾಲ್ಯದ ಜೀವನವನ್ನು ಮೇಲಕು ಹಾಕಿದರು. ಜಾನಪದ ಕಲೆ ಇಂದಿನ ತಂತ್ರಜ್ಞಾನದ ಬದುಕಿನಲ್ಲಿ ಮರೆಮಾಚುತ್ತಿದೆ ಹಾಗಾಗಿ ಅವುಗಳನ್ನು ಉಳಿಸುವ ಕೆಲಸ ಆಗಬೇಕಾದರೆ ಇಂತಹ ಜಾನಪದ ಸಮ್ಮೇಳನಗಳು ಪ್ರಸ್ತುತ ಕಾಲದಲ್ಲಿ ಮತ್ತೆ,ಮತ್ತೆ ಜರುಗಬೇಕಾಗಿದೆ. ೯೨ರ ಇಳಿ ವಯಸ್ಸಿನ ನನ್ನ ಜಾನಪದ ಸೇವೆಯನ್ನು ಗುರುತಿಸಿ ನನಗೆ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸತ್ಕರಿಸಿ ಗೌರವಿಸುವ ಕಾರ್ಯ ಗೋಕಾಕ ಸಾಹಿತಿಗಳು ಮಾಡಿದ್ದಾರೆ. ಅವರಿಂದ ಇನ್ನ?, ಮತ್ತ? ಜಾನಪದ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.

ಗ್ರಂಥಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಶಹಾಜಾನ ಮುದಕವಿ ಕನ್ನಡ ಜಾನಪದ,ಸಮಾಜ ಸಂಸ್ಕೃತಿ ಉಳಿಸುವ ಕೊನೆಯ ತಲೆಗಳು ನಾವಾಗದೆ ಮುಂದಿನ ಪಿಳಿಗೆಗೆ ಜಾನಪದ ರಸದೌತಣವನ್ನು ಹುಟ್ಟಿಸಬೇಕಾದ ಅವಶ್ಯಕತೆ ಇದೆ. ಜಾನಪದ ವಿಶ್ವವಿದ್ಯಾಲಯಗಳು ಈ ಕಾರ್ಯಗಳನ್ನು ಮಾಡುತ್ತಿವೆ. ಕಜಾಪ ಸಂಘಟನೆ ಹಂಪಿ ವಿಶ್ವವಿದ್ಯಾಲಯದ ಜೊತೆಗೆ ಒಡಂಬಡಿಕೆ ಮಾಡಿಕೊಂಡು ರಾಜ್ಯಾದ್ಯಂತ ಜಾನಪದವನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ. ಜಾನಪದ ಎಂಬುದು ಒಂದು ದೊಡ್ಡ ಸಾಗರವಾಗಿದೆ. ಅದನ್ನು ಅರಿತುಕೊಂಡು ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ಕೊಡುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮೊಬೈಲ್ ಯುವಕರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ. ಮೊಬೈಲ್ ನಮ್ಮ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುತ್ತದೆ. ಅವುಗಳಲ್ಲಿ ಒಳ್ಳೆಯದನ್ನು ನೋಡುವ ಕಾರ್ಯಮಾಡಿದರೆ ಮಾತ್ರ ಸುಸಜ್ಜಿತ ಸಮಾಜದ ನಿರ್ಮಾಣ ಮಾಡಲು ಸಾಧ್ಯ. ಶಾಲೆಗಳಲ್ಲಿ ಮೊಬೈಲ್ ಜಾಮರ ಅಳವಡಿಸುವ ಕಾರ್ಯ ಸರಕಾರ ಮಾಡಬೇಕಾಗಿದೆ. ಶಿಕ್ಷಣಕ್ಕಿಂತ ಮುಂಚೆ ಜಾನಪದ ನಮಗೆ ಶರಣರ ಕಥೆಯನ್ನು ಹೇಳಿ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಹೇಳಿಕೊಟ್ಟಿದೆ. ನಾವು ಸಮಾಜವನ್ನು ತಿದ್ದಬೇಕಾದರೆ ಇನ್ನು ಹತ್ತಾರು ವ? ಚನ್ನಾಗಿ ಬಾಳಬೇಕಾದರೆ ಜಾನಪದ ಸಾಹಿತ್ಯವನ್ನು ಉಳಿಸಿ,ಬೆಳೆಸಬೇಕಾಗಿದೆ ಆ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.

ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಲೋಕಾರ್ಪಣೆಗೊಳಿಸಿ ಮಾತನಾಡಿ ಜಾನಪದ ಇತಿಹಾಸದಲ್ಲಿ ಒಂದು ಒಳ್ಳೆಯ ಕಾರ್ಯ ಗೋಕಾಕ ಕಜಾಪ ಸಂಘಟನೆ ಮಾಡಿದೆ. ಸಮಾಜದಲ್ಲಿ ಮೌಲ್ಯಗಳನ್ನು ಹೆಚ್ಚಿಸುವ ಕಾರ್ಯ ಜಾನಪದ ಸಾಹಿತಿಗಳು ಮಾಡುತ್ತಿದ್ದಾರೆ. ಶಾಸಕ ಬಾಲಚಂದ್ರ ಅವರು ಸರಕಾರದಿಂದ ಜಾನಪದ ಉಳಿವಿಗೆ ಏನು ಬೇಕು ಅದನ್ನು ಮಾಡುವ ಕಾರ್ಯ ಮಾಡುತ್ತಾರೆ. ಗೋಕಾಕ ಭಾಗದಲ್ಲಿ ಜಾನಪದ ಕಲೆಗಳಲ್ಲಿ ಒಂದಾಂದ ದಟ್ಟಿಕುಣಿತ ಹುಟ್ಟಿದ್ದು ನಮ್ಮ ತಾಲೂಕಿನಲ್ಲಿ. ನೈಜ ಜಾನಪದ ಕಲಾವಿದರು ಕಲೆಗಳನ್ನು ಡಿಜಿಟಲ್ ಮಾಡಿ ಜನರಿಗೆ ತೋರಿಸುವ ಕೆಲಸ ಮಾಡಬೇಕು. ಜಾನಪದ ಕಲೆ ಇಂದು ನನಸಿ ಹೋಗುತ್ತಿದೆ.ಅದನ್ನು ಉಳಿಸಿ ಬೇಕಾಗಿದೆ. ಹೆಚ್ಚಿನ ರೀತಿಯಲ್ಲಿ ಸಂಘಟನೆಯಾಗಿ ಈ ಭಾಗದಲ್ಲಿ ಜಾನಪದ ಸಾಹಿತ್ಯವನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಕಜಾಪ ರಾಜ್ಯಾಧ್ಯಕ್ಷ ಜಾನಪದ ಡಾ.ಎಸ್.ಬಾಲಾಜಿ ಮಾತನಾಡಿ ಕರ್ನಾಟಕ ಇತಿಹಾಸದಲ್ಲಿ ಕನ್ನಡ ಜಾನಪದಕ್ಕೆ ವಿಶೇ? ಸ್ಥಾನಮಾನವಿದೆ. ಕನ್ನಡ ಜಾನಪದ ಪರಿ?ತ್ ಹಲವಾರು ಜಾನಪದ ಪುಸ್ತಕಗಳನ್ನು ಹೊರತಂದಿದೆ. ಜಾನಪದ ಕಲೆ ಮತ್ತು ಕಲಾವಿದರನ್ನು ಉಳಿಸಿ,ಬೆಳೆಸುವ ಕಾರ್ಯಮಾಡುತ್ತಿದೆ. ಜಾನಪದ ಕಲಾವಿದನ ಮಾಸಾಚನ ಹೆಚ್ಚಿಸಬೇಕು, ಕಲಾವಿದರು ೬೦ ವ?ಕ್ಕೆ ಪಡೆಯುವ ಮಾಸಾಚನವನ್ನು ೪೫ ಕ್ಕೆ ಇಳಿಸುವ ಕಾರ್ಯ ಸರಕಾರ ಮಾಡಬೇಕು. ಜಾನಪದ ಉಳಿಯಬೇಕು ಎಂದರೆ ನಾವೆಲ್ಲರೂ ನಮ್ಮ ಮಕ್ಕಳಿಗೆ ಜಾನಪದ ಕಲಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಪೀಠಾಧಿಪತಿಗಳಾದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಹಡಗಿನಾಳನ ಶ್ರೀ ಮುತ್ತೇಶ್ವರ ಸ್ವಾಮಿಗಳು ವಹಿಸಿ ಆರ್ಶೀವಚನ ನೀಡಿದರು.

ವೇದಿಕೆಯಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಅರವಿಂದ್ ಪಾಶ್ಚಾಪೂರ, ಮಾಜಿ ಜಿಪಂ ಅಧ್ಯಕ್ಷ ಬಸಗೌಡ ಪಾಟೀಲ, ಪ್ರೋ ಚಂದ್ರಶೇಖರ್ ಅಕ್ಕಿ , ರಾಮಣ್ಣ ಹುಕ್ಕೇರಿ, ಎಸ್.ಬಿ. ಸೊಂಡೂರ, ಕಜಾಪ ಜಿಲ್ಲಾಧ್ಯಕ್ಷ ಮೋಹನ ಗುಂಡ್ಲೂರ, ತಾಲೂಕು ಅಧ್ಯಕ್ಷ ಜಯಾನಂದ ಮಾದರ, ಬಿ.ಪಿ.ಲಮಾಣಿ, ಮಂಜುಳಾ ಗೀದಿ, ಪ್ರೋ ಕೆ.ಎಸ್.ಕೌಜಲಗಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ಪತ್ರಕರ್ತ ಸಾದಿಕ ಹಲ್ಯಾಳ ಮತ್ತು ಸಾಹಿತಿ ಡಾ.ಸುರೇಶ್ ಹನಗಂಡಿ ಸಂಪಾದಿಸಿದ ಸ್ಮರಣ ಸಂಚಿಕೆ “ಗೋಕಾವಿ ಮುತ್ತು” ಜಯಾನಂದ ಮಾದರ ಅವರ ಮಣ್ಣಿನ ದ್ವೀಪಗಳು ,ಅನಿಲ ಮಡಿವಾಳ ಅವರ ಕಾಲ ಚಕ್ರ ಕೃತಿಗಳನ್ನು ಗಣ್ಯರು ಲೋಕಾರ್ಪಣೆಗೋಳಿಸಿದರು.

ಇದಕ್ಕೂ ಮೊದಲು ರಾ?, ನಾಡ ಮತ್ತು ಪರಿ?ತ್ ಧ್ವಜಾರೋಹಣವನ್ನು ನೆರವೇರಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿ ಭುವನೇಶ್ವರಿ ಮತ್ತು ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಿತು.ಮೆರವಣಿಗೆಗೆ ಕಾಂಗ್ರೆಸ್ ಮುಖಂಡ ಡಾ.ಮಹಾಂತೇಶ ಕಡಾಡಿ ಚಾಲನೆ ನೀಡಿದರು.

ಜನಮನ ಸೆಳೆದ ಜಾನಪದ ಮೆರವಣಿಗೆ : ಪ್ರಥಮ ಜಾನಪದ ಸಮ್ಮೇಳನದಲ್ಲಿ ದಟ್ಟಿ ಕುಣಿತ, ಡೋಳ್ಳ ಕುಣಿತ, ಗೆಜ್ಜೆ ಕುಣಿತ, ಕರಡಿ ಮಜಲು, ಹುಲಿ ವೇ?ಧಾರಿಗಳು, ಕರಬಲ್ ತಂಡ, ರಿವಾಯತ್ ತಂಡ , ಕುಂಭವನ್ನು ಹೊತ್ತು ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಅನೇಕ ಜಾನಪದ ಪ್ರಕಾರದ ಕುಣಿತಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಜನಮನ ಸೆಳೆದವು.

WhatsApp Group Join Now
Telegram Group Join Now
Share This Article