ಮುಂದಿನ ದಿನಗಳಲ್ಲಿ ಅಥಣಿಯಲ್ಲಿ ಇನ್ನೂ ಹೆಚ್ಚಿನ ಜನಪರ ಯೋಜನೆಗಳ ಅನುಷ್ಢಾನ : ಪ್ರಿಯಾಂಕಾ ಜಾರಕಿಹೊಳಿ

Hasiru Kranti
ಮುಂದಿನ ದಿನಗಳಲ್ಲಿ ಅಥಣಿಯಲ್ಲಿ ಇನ್ನೂ ಹೆಚ್ಚಿನ ಜನಪರ ಯೋಜನೆಗಳ ಅನುಷ್ಢಾನ : ಪ್ರಿಯಾಂಕಾ ಜಾರಕಿಹೊಳಿ
WhatsApp Group Join Now
Telegram Group Join Now
ಅಥಣಿ: ರೋಟರಿ ಕ್ಲಬ್ ಮೂಲಕ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಅನೇಕ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಅಭಿನಂದನಾರ್ಹ ಸಂಗತಿಯಾಗಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಅವರು ಮಕ್ಕಳ ಉದ್ಯಾನವನ ಉದ್ಘಾಟಿಸಿ ಮಾತನಾಡುತ್ತಿದ್ದರು.   ಮುಂದಿನ ದಿನಗಳಲ್ಲಿ ಅಥಣಿ ತಾಲೂಕಿಗೆ ಇನ್ನೂ ಹೆಚ್ಚು ಹೆಚ್ಚು ಜನಪರ ಯೋಜನೆಗಳನ್ನು ಅನುಷ್ಢಾನಗೊಳಿಸುವೆ ಎಂದರು, ಮತ್ತು ಅಥಣಿ ತಾಲೂಕಿನ ಶಿನ್ನಾಳ ಗ್ರಾಮದಲ್ಲಿ ಕೇಂದ್ರೀಯ ವಿದ್ಯಾಲಯಕ್ಕಾಗಿ (ಕಿ.ವಿ) ಮಂಜೂರಾದ ನಿವೇಶನ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಬೇಟಿ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ ಮತ್ತು ಶಹಜಹಾನ ಡೊಂಗರಗಾಂವ ಮತ್ತು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾತನಾಡಿದರು.
ಮಕ್ಕಳಿಗಾಗಿ ಆಟೋಪಕರಣ ಕೊಡಮಾಡಿದ ಆನಂದ ಟೊಣಪಿಯವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ರಾವಸಾಹೇಬ ಐಹೊಳೆ,  ಕಾಂಗ್ರೆಸ್ ಮುಖಂಡ ರಮೇಶ ಸಿಂದಗಿ, ರೋಟರಿ ಸಂಸ್ಥೆಯ ಅರುಣ ಯಲಗುದ್ರಿ, ಸಚೀನ್ ದೇಸಾಯಿ, ಅನೀಲ ದೇಶಪಾಂಡೆ, ಶೇಖರ ಕೋಲಾರ, ಅರುಣ ಸೌದಾಗರ, ರೋಟರಿ, ಇನ್ನರವ್ಹೀಲ್ ಕ್ಲಬ್, ಜ್ಯೋತಿರ್ಲಿಂಗ, ಅಸ್ಲಮ್ ನಾಳಬಂದ, ರೇಖಾ ಪಾಟೀಲ, ಆಶಾ ಪಾಟೀಲ, ದೇವಸ್ಥಾನ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article