ಬೆಳಗಾವಿ:ಸಾಂಬ್ರಾ ಗ್ರಾಮದ ನಿರ್ಮಲಾ ಪಾಲ್ಕರ್ ಅವರ ಪುತ್ರಿ ಪರಿಣಿತಿ ಪಾಲ್ಕರ್, ನೀರಿನ ಮೋಟಾರ್ ಚಾಲನೆ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಸಂಜೆ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರು.
ಬಾಳಿ ಬದುಕಬೇಕಾಗಿದ್ದ ಚಿಕ್ಕ ಮಗಳ ಸಾವಿನಿಂದ ಆಘಾತಕ್ಕೊಳಗಾಗಿರುವ ಪಾಲ್ಕರ್ ಕುಟುಂಬಕ್ಕೆ ಸಚಿವರು ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಮೃತ ಮಗುವಿನ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರಾರ್ಥಿಸಿದರು.


