ರನ್ನ ಬೆಳಗಲಿ:ಜ.೦೫.,ಪಟ್ಟಣದ ನೆರೆಯ ನಾಗರಾಳ ಗ್ರಾಮದ. ಶ್ರೀ ಸಮರ್ಥ ಸದ್ಗುರು ಮಾಧವಾನಂದ ವಿದ್ಯಾವರ್ಧಕ ಟ್ರಸ್ಟ್, ಆಶ್ರಯದ ಶ್ರೀ ಮಾಧವಾನದ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ,೩೬ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವು ಶುಕ್ರವಾರ ದಂದು ಜರಗಿತು. ಈ ಸಂದರ್ಭದಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಪುಣ್ಯ ಸ್ಮರಣೆ ನಿಮಿತ್ಯ,ಭಾವಚಿತ್ರಕ್ಕೆ ಪು?ರ್ಪಣೆ ಮಾಡಲಾಯಿತು.
ಶ್ರೀಶೈಲಗೌಡ ಪಾಟೀಲ ಬಾಗಲಕೋಟೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಾತನಾಡಿ ಶಿಕ್ಷಣ ಜೊತೆಗೆ ಸಂಸ್ಕಾರ ನೀಡುವ ಶಿಕ್ಷಣ ಸಂಸ್ಥೆಗಳೇ ಅಪರೂಪವಾಗಿವೆ.ಒಂದಿ? ಶಿಕ್ಷಣ ಸಂಸ್ಥೆಗಳು ಆಡಂಬರದ ಜಗತ್ತನ್ನ ಮಕ್ಕಳಿಗೆ ತೋರಿಸುತ್ತಿವೆ.ಅಲ್ಲಿ ಶಿಕ್ಷಣದ ಕ್ರಾಂತಿಯನ್ನು ವ್ಯವಹಾರಿಕ ಕ್ರಾಂತಿಯನ್ನಾಗಿಮಾಡಿ.ಮೌಲ್ಯ ಶಿಕ್ಷಣದ ನೆಲೆಯನ್ನೇ ಇಲ್ಲದಂತೆ ಮಾಡುತ್ತಿದ್ದಾರೆ.ನಮ್ಮೂರಿನ ಮಾಧವಾನಂದ ಶಿಕ್ಷಣ ಸಂಸ್ಥೆಯು ಸರ್ವಧರ್ಮಗಳ ಪ್ರತಿಕವಾಗಿ,ಭಾರತೀಯ ಪರಂಪರೆಯ ಸಂಸ್ಕೃತಿಯನ್ನು ಬಿಂಬಿಸಿ ಸಂಸ್ಕಾರ ನೀಡುತ್ತಿದೆ. ಮಕ್ಕಳ ಸರ್ವೋತ್ತಮ ಬೆಳವಣಿಗೆಗೆ ಶಿಕ್ಷಕರ ಜೊತೆಗೆ ಪಾಲಕರು ಕೈಜೋಡಿಸಬೇಕೆಂದು ತಿಳಿಸಿದರು.
ಯೋಗ ಶಿಕ್ಷಕ ರಾಘವೇಂದ್ರ ನಿಲ್ಲಣ್ಣವರ ಪತ್ರಕರ್ತರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ,ಶಿಕ್ಷಣ ಮತ್ತು ಸಂಸ್ಕಾರ ಒಂದೇ ನಾಣ್ಯದ ಎರಡು ಮುಖಗಳು. ಒಂದರ ಕೊರತೆಯಾದರೂ ವಿದ್ಯಾರ್ಥಿಯ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ.ಯುವ ಸಮುದಾಯ ಮೊಬೈಲ್ ಮತ್ತು ದುಶ್ಚಟಗಳ ಹಿಂದೆ ಬಿದ್ದಿರುವುದು,ಭಾರತದ ಸಂಸ್ಕೃತಿ ಅಳವಡಿಸಿಕೊಳ್ಳದಿರುವುದು ವಿ?ದದ ಸಂಗತಿ,ನಿಸ್ವಾರ್ಥ ಆಡಳಿತ ಮಂಡಳಿಯಿಂದ ನಿರ್ಮಾಣಗೊಂಡ. ಈ ಒಂದು ಶಿಕ್ಷಣ ಸಂಸ್ಥೆಯು ೩೬ ವ?ಗಳಿಂದ. ಗುಣಮಟ್ಟದ ಶಿಕ್ಷಣ,ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಆದ್ಯತೆ ನೀಡುತ್ತಾ ಈ ಭಾಗದ ಮಾದರಿ ಶಾಲೆಯಾಗಿ ರೂಪಗೊಂಡು.ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತಿದೆ ಎಂದರು.
ದೇಶಿ ಸಂಸ್ಕೃತಿಗೆ ಆದ್ಯತೆ: ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನ,ಸಲೈಟಿಂಗ್,ಸೌಂಡ್ ಹೊಂದಿರುವ ಉತ್ತಮ ಬೃಹತ್ ವೇದಿಕೆ ಮೇಲೆ, ರಾತ್ರಿ ೧೧ ಗಂಟೆಯವರೆಗೆ ಜರುಗಿದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗ್ರಾಮೀಣ ಭಾಗದ, ಸಂಸ್ಕೃತಿಯ ಹಾಡು ನೃತ್ಯ, ನಾಟಕ,ಹಾಸ್ಯದ ಸನ್ನಿವೇಶದೊಂದಿಗೆ ಸಾವಿರಾರು ಗ್ರಾಮಸ್ಥರನ್ನು ವಿದ್ಯಾರ್ಥಿಗಳು ಮನರಂಜಿಸಿದರು.ಈ ಸಮಯದಲ್ಲಿ ಸಾಧಕರಿಗೆ ಸನ್ಮಾನ ನೀಡಿ, ಶಾಲಾ ಹಂತದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಪ್ರೋತ್ಸಾಹಿಸಿದರು.
ವಿಠಲಗೌಡ ನ್ಯಾಮಗೌಡ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು,ಮುಖಂಡರಾದ ಈರಣ್ಣ ಅರಗಂಜಿ, ಬಿ.ವಿ. ಬಿ||ಪಾಟೀಲ,ಎಸ್.ವಿ. ಪಾಟೀಲ, ಮೌನೇಶ ಸುತಾರ,ಲಕ್ಕಪ್ಪ ಗಿರೆವ್ವಗೋಳ,ಎಚ್.ಎ. ಒಡೆಯರ,ಹರೀಶ ಪಾಟೀಲ,ಈರಪ್ಪ ಅಡಿಕಿ,ಸಿದ್ದಪ್ಪ ಜಾದವ,ಎಮ್ ಎಸ್ ಪಾಟೀಲ.ಎಮ್ ಸಿ ಹಿರೇಮಠ, ಬಿ.ಎಚ್.ಬೀಳಗಿ,ಮುಖ್ಯಶಿಕ್ಷಕರಾದ ಎ ಆರ್ ಯಡಹಳ್ಳಿ, ಜಿ ಆರ್ ನೇಸೂರು ಶಿಕ್ಷಕರಾದ ಕೆ ಎ ಹೊಸಮನಿ,ಜಿ ಆರ್ ಹಾದಿಮನಿ,ಆರ್ ಜಿ ಮಾದರ,ವಿ ಎಂ ಕಾಂಬಳೆ,ವೀಣಾ ಕೋಲಾರ,ಗೀತಾ ಗುರವ, ಮಲ್ಲಪ್ಪ ಹಸಬಿ, ವೆಂಕಪ್ಪ ಗುರವ,ಕೆ ಎಸ್ ಸರಸ್ವತಿ,ರೇ? ನದಾಫ್,ಕಸ್ತೂರಿ ನ್ಯಾಮಗೌಡರ ಹಾಗೂ ಶಾಲಾ ಸಿಬ್ಬಂದಿಗಳು,ಆಡಳಿತ ಮಂಡಳಿಯವರು ಮತ್ತು ಇತರರಿದ್ದರು.


