ಬಳ್ಳಾರಿ,ಜ,05.. ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬರಲು ಇದೆ ಬಳ್ಳಾರಿಯ ಜನತೆ ಕಾರಣವೆಂಬುದು ಮರೆತಿದ್ದೀರಿ ಅದಕ್ಕಾಗಿ ಈ 2026 ರ ಹೊಸ ವರ್ಷವು ಕಾಂಗ್ರೆಸ್ ನವರಿಗೆ ಕೆಟ್ಟ ಗಳಿಗೆಯ ಸಂದೇಶ ಸೂಚಿಸಿದ್ದು, ಇದೇ ಜಿಲ್ಲೆಯಿಂದ ನಿಮ್ಮ ಕಾಂಗ್ರೆಸ್ ಪಕ್ಷ ಬೇಡವೆಂದುಕೊಂಡಿರುವ ಸೂಚನೆಯನ್ನು ಅರಿಯಬೇಕಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಸಂದೇಶ ನೀಡಿದ್ದಾರೆ.
ನಗರದ ಜನಾರ್ಧನ್ ರೆಡ್ಡಿಯವರ ಗ್ಲಾಸ್ ಹೌಸ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಿಂದ ಉದಯಿಸಿದ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಇತಿಹಾಸ ಹಾಗೂ ಜನರ ಗೌರವವನ್ನು ಕಾಪಾಡೋದು ಬಿಟ್ಟು ಗೂಂಡಾ ವರ್ತನೆಯನ್ನು ನಡೆಸುತ್ತಿದೆ, ಶ್ರೀ ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯವನ್ನು ಬಿಟ್ಟುಬಿಡಿ ಮಹರ್ಷಿಯವರ ಹೆಸರು ಹೇಳಲು ಕೂಡ ಯೋಗ್ಯತೆ ಇಲ್ಲವೆಂದರು.
ರಾಮಾಯಣ ಬರೆದ ಪುಣ್ಯ ಪುರುಷ ವಾಲ್ಮೀಕಿ ಅವರ ಪುತ್ಥಳಿ ಹೆಸರಲ್ಲಿ ಪಾಪದ ಕೆಲಸ ಮಾಡ್ತಿದ್ದೀರಿ. ಆ ಪಾಪ ನಿಮ್ಮನ್ನು ಸುಮ್ಮನೆ ಬಿಡೋದಿಲ್ಲ, ಗಲಭೆ ನಡೆಯುತ್ತಿರುವ ಸ್ಥಳಕ್ಕೆ ಶ್ರೀರಾಮುಲು ಅವರು ಬರದಿದ್ದರೆ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬದ ಪರಿಸ್ಥಿತಿ ಏನಾಗುತ್ತಿತ್ತೋ ಬಳ್ಳಾರಿಯಲ್ಲಿ ದುರ್ಗಮ್ಮ ದೇವಿಯ ರೂಪದಲ್ಲಿ ಶ್ರೀರಾಮುಲು ಬಂದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ವಿ. ಸೋಮಣ್ಣ ನನ್ನ ಇಡೀ ರಾಜಕೀಯ ಸರ್ವಿಸ್ ನಲ್ಲಿ ಇಂತಹ ದುರ್ಘಟನೆ ನೋಡಿಲ್ಲವೆಂದರು.
ಜನಾರ್ದನ ರೆಡ್ಡಿಯನ್ನು ಸಾಯಿಸಲು ಗುರಿ ಇಟ್ಟು ಮಾಡಿದ ದಾಳಿ, ಆ ಹುಡುಗನ ಮೇಲೆ ಬಿದ್ದಿದೆ, ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಇದೇ ಮಾಧ್ಯಮದ ಮುಖಾಂತರ ಆಗ್ರಹಿಸಿ, ಖಾಸಗಿ ಗನ್ ಮೆನ್ ಗಳನ್ನು ಇಟ್ಟುಕೊಂಡು ಜನಾರ್ದನ ರೆಡ್ಡಿಯನ್ನು ಟಾರ್ಗೆಟ್ ಮಾಡಬೇಡಿ. ನೀವು ಮಾಡಿರೋ ಪಾಪ ನಿಮಗೆ ಸುತ್ತುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.
ಈ ಪ್ರಕರಣವನ್ನು ಕೂಡಲೇ ಸಿಬಿಐ ಅಥವಾ ಸಿಟ್ಟಿಂಗ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು, ಮೇಲ್ನೋಟಕ್ಕೆ ಕಂಡುಬರುವ ಅಸಹಾಯಕತೆ ತೋರಿದ ನಗರ ಡಿಎಸ್ಪಿ ಕೂಡಲೇ ಅಮಾನತು ಮಾಡಿ ಎಂದು ಅಗ್ರಹಿಸಿ. ಭರತ್ ರೆಡ್ಡಿಯಂತಹ ಮಾತುಗಳು ನಾನು ಯಾವತ್ತೂ ನೋಡಿಲ್ಲ. ಯಾವ ಸ್ಕೂಲ್‌ನಲ್ಲಿ ಓದಿದ್ದಾನೋ ಗೊತ್ತಿಲ್ಲ ನಾನು ಭರತ್ ರೆಡ್ಡಿಯನ್ನು ನನ್ನ ಬಳಿ ಕರೀತೀನಿ, ಆರು ತಿಂಗಳು ಟ್ರೈನಿಂಗ್ ಗೆ ಬಾ ಅಂತೀನಿ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು, ಗಂಗಾವತಿ ಶಾಸಕ ಜನಾರ್ಧನ್ ರೆಡ್ಡಿ, ಮಾಜಿ ಶಾಸಕರಾದ ಸೋಮಶೇಖರ್ ರೆಡ್ಡಿ, ಸುರೇಶ್ ಬಾಬು, ಸೋಮಲಿಂಗಪ್ಪ, ಮಾಜಿ ಸಂಸದ ಸಣ್ಣ ಫಕೀರಪ್ಪ ಸೇರಿದಂತೆ ಪಕ್ಷದವರು ಉಪಸ್ಥಿತರಿದ್ದರು.


