ತಾಲಿಬಾನ್ ಅಫಘಾನಿಸ್ಥಾನದಲ್ಲಿ ಹಿಂದೂ ಹಾಗೂ ಸಿಖ್‌ರ ಭೂಮಿ ವಾಪಸ್

Ravi Talawar
ತಾಲಿಬಾನ್ ಅಫಘಾನಿಸ್ಥಾನದಲ್ಲಿ ಹಿಂದೂ ಹಾಗೂ ಸಿಖ್‌ರ ಭೂಮಿ ವಾಪಸ್
WhatsApp Group Join Now
Telegram Group Join Now

ನವದೆಹಲಿ,ಏಪ್ರಿಲ್10: ಕಳೆದ ಕೆಲವು ವರ್ಷಗಳಿಂದ ಅಫ್ಘಾನಿಸ್ತಾನವನ್ನು ಆಳುತ್ತಿರುವ ತಾಲಿಬಾನ್ ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ತಾಲಿಬಾನ್ ಅಧಿಕಾರಿಗಳು ಅಫ್ಘಾನಿಸ್ತಾನ ಮೂಲದ ಹಿಂದೂ ಹಾಗೂ ಸಿಖ್ ಅಲ್ಪಸಂಖ್ಯಾತರಿಗೆ ತಮ್ಮ ಭೂಮಿಯನ್ನು ಹಿಂದಿರುಗಿಸುವ ಕೆಲಸವನ್ನು ಪ್ರಾರಂಭಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳ ಬೆಂಬಲದೊಂದಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅವರ ಭೂಮಿಯನ್ನು ಕಸಿದುಕೊಳ್ಳಲಾಗಿತ್ತು.

ಈ ನಿರ್ಧಾರವು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಹೆಜ್ಜೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ದೀರ್ಘಕಾಲದವರೆಗೆ ಹಿಂದೂಗಳು ಮತ್ತು ಸಿಖ್ಖರು ಸ್ಥಳಾಂತರಗೊಂಡಿದ್ದಾರೆ ಅವರನ್ನು ಅಂಚಿಗೆ ತಳ್ಳಲಾಯಿತು.

ಹಿಂದೂ ಹಾಗೂ ಸಿಖ್ ಸಮುದಾಯಗಳನ್ನು ಪ್ರತಿನಿಧಿಸುವ ಸಂಸತ್ ಸದಸ್ಯ ನರೇಂದ್ರ ಸಿಂಗ್ ಖಾಲ್ಸಾ ಇತ್ತೀಚೆಗೆ ಕೆನಡಾದಿಂದ ಅಫ್ಘಾನಿಸ್ತಾನಕ್ಕೆ ಮರಳಿದ್ದಾರೆ.

ವಿದೇಶಿ ನೆಲದಲ್ಲಿ ತುಳಿತಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರವು ಇತ್ತೇಚೆಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯನ್ನು ಸಂಸತ್ತು ಬಹಳ ಹಿಂದೆಯೇ ಅಂಗೀಕರಿಸಿದೆ, ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆ ಅದನ್ನು ಸ್ಥಗಿತಗೊಳಿಸಲಾಗಿತ್ತು, ಆದರೆ ಲೋಕಸಭಾ ಚುನಾವಣೆಗೂ ಮುನ್ನ ಜಾರಿಯಾಗಿದೆ.

 

WhatsApp Group Join Now
Telegram Group Join Now
Share This Article