ರಸ್ತೆಗೆ ವೇಗ ತಡೆ ಮತ್ತು ವೇಗ ನಿಯಂತ್ರಣ ಫಲಕಗಳಿಗೆ ಒತ್ತಾಯ
ಮಹಾಲಿಂಗಪುರ: ಶುಕ್ರವಾರ ಬೆಳಗಿನ ಜಾವ ಪಟ್ಟಣದ ಎಪಿಎಂಸಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಹುಕ್ಕ್ ಕಳಚಿ ಟಿಲ್ಲರ್ ನಿಂದ ಸರಣಿ ಅಪಘಾತ ಸಂಭವಿಸಿರುವುದು,ಇದಕ್ಕೆ ರಸ್ತೆಯ ಅಧ್ವಾನವೆ ಕಾರಣವೆಂದು ಸಾರ್ವಜನಿಕರು ದೂರಿದ್ದಾರೆ.
ಸಕ್ಕರೆ ಕಾರಖಾನೆಗೆ ಕಬ್ಬು ಇಳಿಸಿ ವಾಪಸಾಗುವ ವೇಳೆ ಆಕಸ್ಮಿಕವಾಗಿ ಟ್ರ್ಯಾಕ್ಟರ್ ನೊಂದಿಗೆ ಟಿಲ್ಲರ್ ಸಂಪರ್ಕ ಕಡಿತಗೊಂಡು ಬಸವನಗರ ಪ್ರಮುಖ ಪ್ರವೇಶ ದ್ವಾರದ ಹತ್ತಿರ ಸ್ವಿಫ್ಟ್ ಡಿಜಾಯಿರ್, ಇಂಡಿಗೋ ವಾಹನ ಮತ್ತು ಎರಡು ಮೋಟಾರ್ ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದು, ಹಾನಿಯ ಅಂದಾಜು ನಿಖರವಾಗಿ ತಿಳಿದು ಬಂದಿಲ್ಲ.ಪಟ್ಟಣದ ಜನರ ಅದೃ?ವೋ ಏನೋ ಹತ್ತಾರು ಜನರು ಪ್ರಾಣ ಕಳೆದುಕ್ಕಳ್ಳುವ ಕುತ್ತಿನಿಂದಲೂ ಪಾರಾಗಿದ್ದಾರೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
ಈ ಭಾಗದ ಪುರು?ರು, ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ನೂರಾರು ಜನರು ಬೆಳಗಿನ ಜಾವವೇ ವಾಕಿಂಗ್ ಗೆ ಹೋಗುತ್ತಾರೆ.ಇದೆ ಸಮಯ ವಾಹನಗಳ ಓಡಾಟವೂ ಸಹಿತ ಭರದಿಂದ ಆರಂಭವಾಗುತ್ತದೆ.ಇದೊಂದು ಸದಾ ಬ್ಯುಸಿ ರಸ್ತೆ ಅಂದರೂ ಅಡ್ಡಿ ಇಲ್ಲ.
ಈ ರಸ್ತೆ ಏಕಮುಖ ಸಂಚಾರ ವ್ಯವಸ್ಥೆ ಕಂಡ ನಂತರ ಬಹಳ? ಅಪಘಾತಗಳು ಸಂಭವಿಸಿ ಹಲವರು ಗಾಯಗೊಂಡರೆ, ಹಲವರು ಪ್ರಾಣ ಕಳೆದುಕೊಂಡಿದ್ದು ಇಲ್ಲಿ ವೈಜ್ಞಾನಿಕ ಸೂಚನಾ ಫಲಕಗಳು ಮತ್ತು ವೇಗ ನಿಯಂತ್ರಕ ತಡೆಗಳ ನಿರ್ಮಾಣವಿಲ್ಲದೆ ಇರುವುದೂ ಕೂಡ ಕಾರಣವಾಗಿದೆ ಎನ್ನಬಹುದು.ಇಲ್ಲಿ ವಾಹನಗಳು ರಭಸದಿಂದ ಸಂಚರಿಸುವುದರಿಂದ.ಶಾಲಾ ಮಕ್ಕಳು, ಸಾರ್ವಜನಿಕರು ರಸ್ತೆ ಕ್ರಾಸ್ ಮಾಡಿ ತಮ್ಮ ಮನೆಗಳಿಗೆ ಮತ್ತು ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗಲು ಜೀವವನ್ನೆ ತಮ್ಮ ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿ ಭಯ ಇದೆ.
ಬಸವೇಶ್ವರ ವೃತ್ತದಿಂದ ಆರಂಭವಾಗುವ ಎಪಿಎಂಸಿ ದ್ವಿಮುಖ ಮಾರ್ಗಕ್ಕೆ ಸಾರ್ವಜನಿಕರ ಕೋಟ್ಯಂತರ ಹಣ ಖರ್ಚು ಮಾಡಿಯೂ ಎರಡೂ ಬದಿ ರಸ್ತೆ ಮತ್ತು ಪಾದಚಾರಿ ರಸ್ತೆಗಳು ಸರಿಯಾದ ಮಾನದಂಡದಲ್ಲಿ ನಿರ್ಮಾಣವಾಗಿಲ್ಲವೆಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಾರೆ.ರಸ್ತೆ ವಿಭಜಕಕ್ಕೆ ಗಿಲಾವ್ ಮತ್ತು ಅದರಲ್ಲಿ ಗಿಡಗಳನ್ನು ನೆಟ್ಟು ಪಟ್ಟಣದ ಅಂದ ಮತ್ತು ಪರಿಸರ ಕಾಪಾಡುವ ಯಾವುದೇ ಕಾಳಜಿ ಹೊಂದಿದೆ ಇದೊಂದು ಕಾಟಾಚಾರಕ್ಕೆ ಮಾಡಿರುವ ಕಾರ್ಯದಂತೆ ಕಾಣುತ್ತಿದೆ. ಕ್ರಿಯಾ ಯೋಜನೆಯಲ್ಲಿ ಇವೆಲ್ಲವುಗಳು ಅಡಗಿವೆಯೋ ಹೊರತಾಗಿ ಕೆಲಸ ಮುಗಿಸಲಾಗಿದೆಯೋ ಎಂಬ ಸಂದೇಹ ಜನತೆಯನ್ನು ಕಾಡುತ್ತಿದೆ.
ರಾತ್ರಿ ಹೊತ್ತಲ್ಲಿ ವಿಭಜಕ ಕಾಣುವುದೆ ಇಲ್ಲ.ಇದರಿಂದ ಅಪಘಾತಗಳು ನಡೆಯಬಹುದು.ದಯವಿಟ್ಟು ಈ ರಸ್ತೆ ವಿಭಜಕಕ್ಕೆ ಗಿಲಾವ್ ಮಾಡಿ ಸುಣ್ಣ ಬಣ್ಣ ಬಳಿದರೆ ವಾಹನ ಚಾಲಕರಿಗೆ ಇದರಿಂದ ಅನುಕೂಲವಾಗುವುದಲ್ಲದೆ ಪ್ರಾಣ ಹಾನಿಯನ್ನೂ ತಪ್ಪಿಸಬಹುದಾಗಿದೆ ಎನ್ನುತ್ತಾರೆ ಸವಾರರು.
ಸ್ಥಳೀಯ ಜನ ಪ್ರತಿನಿಧಿಗಳು, ಪ್ರಜ್ಞಾವಂತರಿಗೂ ಗೊತ್ತಿರುವ ವಿ?ಯವಾಗಿದ್ದು,ಅವರೆಲ್ಲ ಮೂಖ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ ಎನ್ನಬಹುದು.ಇಲ್ಲಿ ಒತ್ತಡ ತಂದು ಕೆಲಸ ಮಾಡಿಕೊಳ್ಳುವ ಜನರಿಲ್ಲ, ಬಡ ಮತ್ತು ಮಧ್ಯಮ ವರ್ಗಗಳ ಜನರೇ ವಾಸಿಸುತ್ತಿದ್ದು,ಇವರಲ್ಲಿ ಹೆಚ್ಚಿನವರು ಅನಕ್ಷರಸ್ಥರು.ಇಂತಹ ಜನರನ್ನು ಜನಪ್ರತಿನಿಧಿಗಳು ವೋಟ್ ಗಾಗಿ ಮಾತ್ರ ಬಳಸುತ್ತಾರೆ.ದಯವಿಟ್ಟು ಎಲ್ಲರ ಪ್ರಾಣಗಳು ಅಮೂಲ್ಯವೆ. ಆ ದೃಷ್ಟಿಯಿಂದ ತಾಲೂಕು ಮತ್ತು ಸ್ಥಳೀಯ ಆಡಳಿತ ಇತ್ತ ಕಡೆ ಗಮನ ಹರಿಸಿ ಅಲ್ಲಲ್ಲಿ ವೇಗ ತಡೆ ಮತ್ತು ವೇಗ ನಿಯಂತ್ರಣ ಫಲಕಗಳನ್ನು ಅಳವಡಿಸುವುದು ಸೂಕ್ತವೆಂದು ಸಾರ್ವಜನಿಕರ ಒತ್ತಾಯವಾಗಿದೆ.


