ಅಥಣಿ: ಮಹಿಳಾ ಸಬಲೀಕರಣ, ಸಾಮಾಜಿಕ ಜಾಗೃತಿ ಹಾಗೂ ಸ್ವಾವಲಂಬನೆಯ ದಿಟ್ಟ ಸಂಕಲ್ಪದೊAದಿಗೆ ಕಾರ್ಯನಿರ್ವಹಿಸುತ್ತಿರುವ ಮುಕ್ತಾಯಿ ಮಹಿಳಾ ಬಳಗ ತನ್ನ ಸೇವಾ ಪಯಣದ ೨೫ ವರ್ಷಗಳ ಸಂಭ್ರಮದ ರಜತ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದೆ. ಇದು ಕೇವಲ ಒಂದು ಸಂಭ್ರಮವಲ್ಲ; ಮಹಿಳೆಯರ ಆತ್ಮವಿಶ್ವಾಸ, ಶ್ರಮ ಮತ್ತು ಸಾಧನೆಗಳ ಪ್ರತೀಕವಾಗಿದೆ ಎಂದು ಮೋಟಗಿ ಮಠದ ಪ್ರಭು ಚನ್ನಬಸವ ಮಹಾಸ್ವಾಮೀಜಿ ಹೇಳಿದರು
ಪಟ್ಟಣದ ಮೋಟಗಿ ಮಠದ ಆವರಣದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಮೇಳ ೨೦೨೬ ಕಾರ್ಯಕ್ರಮದ ಎರಡನೇ ದಿನ ಮುತ್ತಾಯಿ ಮಹಿಳಾ ಬಳಗದ ರಜತ ಮಹೋತ್ಸವ ಹಾಗೂ ಮಕ್ತಾಯಿ ಮಹಿಳಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಮುಕ್ತಾಯಿ ಮಹಿಳಾ ಬಳಗವು ಸ್ಥಾಪನೆಯಾಗಿದಾಗಿನಿಂದ ಗ್ರಾಮೀಣ ಹಾಗೂ ನಗರ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತ ಬಂದಿದೆ. ಸ್ವಸಹಾಯ ಗುಂಪುಗಳ ರಚನೆ, ಉಳಿತಾಯ ಸಾಲ ವ್ಯವಸ್ಥೆ, ಉದ್ಯೋಗ ಕೌಶಲ್ಯ ತರಬೇತಿ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹಾಗೂ ಶಿಕ್ಷಣ ಪ್ರೋತ್ಸಾಹದ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವಲ್ಲಿ ಬಳಗ ಪ್ರಮುಖ ಪಾತ್ರವಹಿಸಿದೆ. ಅಲ್ಲದೆ ಮನೆಯಲ್ಲಿ ಶಿಕ್ಷಣದ ಜೊತೆಗೆ ಶಿವ ಶರಣರು ನೀಡಿ ಸಂದೇಶದ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುತ್ತಿರುವದು ಅತ್ಯಾಂತ ಗೌರವದ ಕಾರ್ಯವಾಗಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ “ಮಕ್ತಾಯಿ ಮಹಿಳಾ ರತ್ನ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಳಗಾವಿಯ ಖ್ಯಾತ ಕವಿ ಹಾಗೂ ಸಾಹಿತಿಗಳಾದ ನೀಲಗಂಗಾ ಚಿರಂತಿಮಠ ಅವರು ಆಧುನಿಕ ಕಾಲ ಘಟ್ಟದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಹೊರಗಿ ಆಹಾರಗಳನ್ನು ಮನೆಗೆ ತಂದು ತಿನ್ನುವ ಬದಲು ರುಚಿ ಹಾಗೂ ಶುಚಿಯಾದ ಆಹಾರಗಳನ್ನು ಮನೆಯಲ್ಲೆ ಮಾಡಿ ಮಕ್ಕಳಿಗೆ, ಮನೆಯವರಿಗೆ ಉಣಬಡಿಸಿದರೆ ಅದರಂತಹ ಆರೋಗ್ಯಕರ ವಿಷಯ ಮತ್ತೊಂದಿಲ್ಲ. ಗುಣಮಟ್ಟದ ಶಿಕ್ಷಣದ ಜೊತೆಗೆ ಸುಸಂಕೃತನ್ನಾಗಿ ಮಾಡಿ, ಮುಕ್ತಾಯಿ ಮಹಿಳಾ ಬಳಗವು ಮಹಿಳೆಯರನ್ನು ಕೇವಲ ಆರ್ಥಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಬಲಿಷ್ಠರನ್ನಾಗಿಸಿದೆ. ಸಮಾಜದ ಬದಲಾವಣೆಗೆ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು” ಎಂದು ಅಭಿಪ್ರಾಯಪಟ್ಟರು.
ಬೆಳಗಾವಿಯ ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿ ಅದ್ಯಕ್ಷತೆವಹಿಸಿ ಮಾತನಾಡಿ ಬಸವ ಸಂಸ್ಕೃತಿಯ ಮಾನವೀಯತೆಯನ್ನು ಪ್ರತಿಬಿಂಬಿಸುತ್ತದೆ. ಜಾತಿ, ಧರ್ಮ, ವರ್ಗಗಳ ಬೇಧವಿಲ್ಲದೆ ಎಲ್ಲರೂ ಒಂದೇ ಎನ್ನುವ ಭಾವ ನಮ್ಮಲ್ಲಿ ಮೂಡಬೇಕು. ಭೌತಿಕತೆಯ ಯುಗದಲ್ಲಿ ಮೌಲ್ಯಗಳ ಕುಸಿತ ಕಂಡುಬರುತ್ತಿರುವ ಸಂದರ್ಭದಲ್ಲಿ, ಬಸವ ಸಂಸ್ಕೃತಿ ಮೇಳವು ನೈತಿಕತೆ, ಸಮಾನತೆ ಮತ್ತು ಸಮಾಜ ಸೇವೆಯ ಸಂದೇಶವನ್ನು ಸಾರುತ್ತದೆ. ಈ ಮೇಳವು ಕೇವಲ ಆಚರಣೆ ಮಾತ್ರವಲ್ಲ, ಸಮಾಜದ ಪರಿವರ್ತನೆಗೆ ಪ್ರೇರಣೆಯಾಗಿ ಪರಿಣಮಿಸುತ್ತದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ವಿವಿಧ ಕ್ಷೆತ್ರಗಳಲ್ಲಿ ಸಾಧನೆ ಮಾಡಿದ ಐದು ಜನ ಮಹಿಳಾ ಸಾಧಕರನ್ನು ಗೌರವಿಸಿ ಸತ್ಕರಿಸಿದರು.
ಈ ವೇಳೆ ಸಾನಿದ್ಯವನ್ನು ಜಗದ್ಗುರು ಡಾ ತೋಂಟದ ಸಿದ್ದರಾಮ ಮಹಾಸ್ವಾಮೀಜಿ, ಬೆಳಗಾವಿ ಬಸವ ಸಂಸ್ಕೃತಿ ಚಿಂತಕಿ ಗುರುದೇವಿ ಹುಲ್ಲೇಪ್ಪನವರಮಠ, ಅತಿಥಿಗಳಾಗಿ ಶಾಲಿನಿ ದೊಡ್ಡಮನಿ, ಶಿವಲೀಲಾ ಬುಟಾಳೆ, ಡಾ. ಭಾರತಿ ಬಿಜಾಪೂರೆ, ಡಾ. ಪ್ರೀಯಂವದಾ ಅಣೇಪ್ಪನವರ, ಮುಖಂಡರಾದ ಸಿದ್ರಾಮ ಚೊಳ್ಳಿ ಸೇರಿದಂತೆ ಹಲವು ಮುಖಂಡರು ಹಾಗೂ ಮೋಟಗಿ ಮಠದ ಭಕ್ತರು ಉಪಸ್ಥಿತರಿದ್ದರು
ಮಹಿಳಾ ಸಬಲೀಕರಣ, ಸಾಮಾಜಿಕ ಜಾಗೃತಿ ಹಾಗೂ ಸ್ವಾವಲಂಬನೆಯ ಕಲ್ಪನೆ ನೀಡಿದ್ದು ಬಸವ ತತ್ವದ ಶರಣರು: ಪ್ರಭು ಚನ್ನಬಸವ ಸ್ವಾಮೀಜಿ


