ಜೀವನಕ್ಕೆ ಅತಿ ಅವಶ್ಯಕವಾದ ಮೂಲಭೂತ ಅಗತ್ಯವೆಂದರೆ ಶುದ್ಧ ಕುಡಿಯುವ ನೀರು: ಶಾಸಕ ಲಕ್ಷ್ಮಣ ಸವದಿ

Hasiru Kranti
ಜೀವನಕ್ಕೆ ಅತಿ ಅವಶ್ಯಕವಾದ ಮೂಲಭೂತ ಅಗತ್ಯವೆಂದರೆ ಶುದ್ಧ ಕುಡಿಯುವ ನೀರು: ಶಾಸಕ ಲಕ್ಷ್ಮಣ ಸವದಿ
WhatsApp Group Join Now
Telegram Group Join Now

ಅಥಣಿ: ಮಾನವನ ಜೀವನಕ್ಕೆ ಅತಿ ಅವಶ್ಯಕವಾದ ಮೂಲಭೂತ ಅಗತ್ಯವೆಂದರೆ ಶುದ್ಧ ಕುಡಿಯುವ ನೀರು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶುದ್ಧ ನೀರಿನ ಲಭ್ಯತೆ ಅತ್ಯಂತ ಮಹತ್ವದ್ದು. ಈ ದಿಸೆಯಲ್ಲಿ ಸರ್ಕಾರದ ಸಹಕಾರದಿಂದ ೫.೫ ಕೋಟಿ ರೂ.ಗಳ ರೆಡ್ಡೇರಹಟ್ಟಿ ಗ್ರಾಮ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಹಾಗೂ ಅಥಣಿ ಮತಕ್ಷೇತ್ರದ ೫೫ ಕೋಟಿ ರೂ.ಗಳ ಕಾಮಗಾರಿ ಹಾಗೂ ೩೫ ಕೋಟಿ ರೂ.ಗಳ ಶುದ್ದ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಂಡರೆ ಸಂಪೂರ್ಣ ಶುದ್ದ ಕಡಿಯುವ ನೀರು ಒದಗಿಸಿದ ಕ್ಷೇತ್ರ ನಮ್ಮದಾಗಲಿದೆ ಎಂದು ಶಾಸಕ ಲಕ್ಷö್ಮಣ ಸವದಿ ಹೇಳಿದರು̤

ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಹೊರವಲಯದ ಕೃಷ್ಣಾ ನದಿಯ ಹಿಪ್ಪರಗಿ ಬ್ಯಾರೇಜಿನ ಹಿನ್ನೀರಿನ ಗರಿಷ್ಠ ಮಟ್ಟದಿಂದ ಬಾಧಿತ ನಾಗನೂರ ಪಿ.ಕೆ, ಅವರಖೋಡ, ಹಾಗೂ ದೊಡವಾಡ ಗ್ರಾಮಗಳ ಪುನರ್ವಸತಿ ಕೇಂದ್ರ ಸಂಖ್ಯೆ ೩ರಲ್ಲಿ ಶುಕ್ರವಾರ ೫.೫೨ ಕೋಟಿ ರೂ ಮೊತ್ತದ ಕುಡಿಯುವ ನೀರು ಸೌಲ್ಯಭ್ಯ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಕೃಷ್ಣಾ ನದಿಯ ಹಿನ್ನಿರಿನ ಬಾಧಿತ ಜನವಾಡ, ಮಹಿಷವಾಡಗಿ, ನಂದೇಶ್ವರ, ಗ್ರಾಮಗಳಿಗೆ ಜೀರೋ ಪಾಯಿಂಟ್‌ನಲ್ಲಿ ಪುನರ್ವಸತಿ ಕೇಂದ್ರ ನೀಡಲಾಗಿದೆ, ನಾಗನೂರ ಪಿ.ಕೆ, ಅವರಖೋಡ ಮತ್ತು ದೊಡವಾಡ ಗ್ರಾಮಗಳಿಗೆ ರಡ್ಡೇರಹಟ್ಟಿಯಲ್ಲಿ ಪುನರ್ವಸತಿ ಕೇಂದ್ರ ನೀಡಲಾಗಿದ್ದು, ಜೀರೋ ಪಾಯಿಂಟ್‌ನಲ್ಲಿ ಒಳಪಡುವ ಗ್ರಾಮಗಳ ಜನರಿಗೆ ಮನೆ ಕಟ್ಟಿಕೊಳ್ಳಲು ಆದಷ್ಟು ಬೇಗ ಹಕ್ಕು ಪತ್ರ ನೀಡಲಾಗುವದು ಎಂದು ಹೇಳಿದರು̤

ಈ ವೇಳೆ ದಶರಥ ಅಂಬಿ, ಬಸವರಾಜ ತೇಲಿ, ಮಲ್ಲೇಶ ಸವದಿ, ಬಸಪ್ಪ ಚೌಗಲಾ, ಗಂಗಪ್ಪ ಬಿಳ್ಳೂರ, ಬೀಮಪ್ಪ ಹಂಚಿನಾಳ, ಲಕ್ಷö್ಮಣ ಬೆಳ್ಳಂಕಿ, ಅಧಿಕಾರಿಗಳಾದ ಪ್ರದೀಪಕುಮಾರ ಪಾಟೀಲ, ಸಿದ್ಧು ಲಾಂಡಗೆ, ಆರ್.ಬಿ. ಜಗದಾಳ, ರವೀಂದ್ರ ಮೂರಗಾಲಿ, ಮಂಜುನಾಥ ನಾಗೂರ, ಸಚಿನ ಶೆಟ್ಟಿ, ರುದ್ರಗೌಡ ಮಂಗಾ, ವಿಷ್ಣು ಪೂಜಾರಿ, ಶಿತಲ ಜಮಖಂಡಿ, ಎನ್.ಎಸ್.ಬಿರಾದಾರ, ನಾಗಪ್ಪ ನಡಗಾರ, ಪಾರೀಸ್ ಮಟಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು,

WhatsApp Group Join Now
Telegram Group Join Now
Share This Article