ಹುಕ್ಕೇರಿ: ಶಿಕ್ಷಣದಲ್ಲಿ ಗ್ರಾಮೀಣ ಕ್ರೀಡೆಗಳ ಜೊತೆಗೆ ಮಕ್ಕಳಲ್ಲಿ ಮಾನವಿ ಮೌಲ್ಯಗಳ ನೀತಿ ಪಾಠದ ಜ್ಞಾನ ಎರೆದಾಗ ಬದುಕುವ ಛಲ ಮೂಡುತ್ತದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಸತ್ಯಪ್ಪಾ ನಾಯಿಕ ಹೇಳಿದರು.
ಅವರು ಹುಕ್ಕೇರಿ ಪಟ್ಟಣದ ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಉತ್ಸವ ಹಾಗೂ ಮಕ್ಕಳ ಹಬ್ಬದ ಉದ್ಘಾಟನಾ ಸಮಾರಂದಲ್ಲಿ ಮಾತನಾಡಿದರು. ಉತ್ತಮ ಪರಿಸರದಲ್ಲಿ ಸ್ಥಾಪಿತಗೊಂಡ ಮಹಾವೀರ ಶಿಕ್ಷಣ ಸಂಸ್ಥೆಯ ಎಲ್ಲ ವರ್ಗದವರ ಶಿಕ್ಷಣದ ಜೊತೆ ಸಂಸ್ಕಾರ, ನೀಡುತ್ತಿರುವದು ಶ್ಲಾಘನೀಯ ಎಂದರು.
ಉದ್ದಿಮೆ ಯುವ ಮುಖಂಡ ಪೃಥ್ವಿ ಕತ್ತಿ ಮಾತನಾಡಿ ಮಕ್ಕಳು ಆಟ, ಊಟ ಮತ್ತು ಪಾಠದಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದಲ್ಲಿ ಮಾತ್ರ ಪ್ರತಿಭೆ ಹೊರಬರಲು ಸಾದ್ಯವೆಂದರು.
ರಾಷ್ಟ್ರ ಪ್ರಶಸ್ತಿ ವಿಜೇತ ಸದಾಶಿವ ಸಂಬಾಳ ಮಾತನಾಡಿ ಭೋದನೆಯಿಂದ ಮಕ್ಕಳ ಮೇಲೆ ಪರಿಣಾಮಕಾರಿ ಧೈರ್ಯ, ಭರವಸೆ, ನಂಬಿಕೆ ಮತ್ತು ಕಲಿಕೆಯಿಂದೆ ಮಾತ್ರ ಸಮಾಜದಲ್ಲಿ ಒಳ್ಳೆಯ ಸಾಧಕನಾಗಲು ಸಾದ್ಯ ಎಂದರು.
ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿದ್ಯ ವಹಿಸಿದ್ದರು. ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷರೂ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಅಧ್ಯಕರು ಆದ ಮಹಾವೀರ ನಿಲಜಗಿ ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿ ಗ್ರಾಮೀಣ ವಿದ್ಯತ್ ಸಹಕಾರಿ ಸಂಘದ ಉಪಾಧ್ಯಕ್ಷ ಅಜೀತ ಮುನ್ನೋಳಿ, ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ಕಾರ್ಯದರ್ಶಿ ಸಂಜಯ ನಿಲಜಗಿ, ಶ್ರೀಧರ ಖತಗಲಿ ಪದ್ಮಶ್ರೀ ನಿಲಜಗಿ ಮುಖ್ಯೋಪಾಧ್ಯಾಯ ಸಂಗಮೇಶ ಕರಹೊನ್ನವರ, ಮತ್ತಿತರರು ಉಪಸ್ಥಿತರಿದ್ದರು. ಉಪಾದ್ಯಕ್ಷ ಪ್ರಜ್ವಲ್ ನಿಲಜಗಿ ಸ್ವಾಗತಿಸಿದರು, ಶಿಕ್ಷಕರಾದ ಅಜಂತಾ ಗುಗ್ಗಳಿ, ಸುಜಾತ ಕೋಳಿ, ಕಾರ್ಯಕ್ರಮ ನಿರೂಪಿಸಿದರು.
ಮಾನವೀಯತೆಯ ಸಂಸ್ಕಾರ ನೀತಿ ಪಾಠದ ಶಿಕ್ಷಣ ಇಂದು ಮಕ್ಕಳಿಗೆ ಪ್ರಸ್ತುತ; ಸತ್ಯಪ್ಪಾ ನಾಯಿಕ


