ಶಾಲಾ ಶಿಕ್ಷಕರ ಜೊತೆ ಕೈಜೋಡಿಸಿ ಮಕ್ಕಳಿಗೆ ಉತ್ತಮ ಕಲಿಕಾ ಪರಿಸರವನ್ನು ಒದಗಿಸಿ : ಕೃಷ್ಣಪ್ಪ ಸವದತ್ತಿ

Hasiru Kranti
ಶಾಲಾ ಶಿಕ್ಷಕರ ಜೊತೆ ಕೈಜೋಡಿಸಿ ಮಕ್ಕಳಿಗೆ ಉತ್ತಮ ಕಲಿಕಾ ಪರಿಸರವನ್ನು ಒದಗಿಸಿ : ಕೃಷ್ಣಪ್ಪ ಸವದತ್ತಿ
WhatsApp Group Join Now
Telegram Group Join Now

ಸವದತ್ತಿ : ಶಾಲಾ ಶಿಕ್ಷಕರ ಜೊತೆ ಕೈಜೋಡಿಸಿ ಮಕ್ಕಳಿಗೆ ಉತ್ತಮ ಕಲಿಕಾ ಪರಿಸರವನ್ನು ಒದಗಿಸಿಕೊಟ್ಟಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ ಸವದತ್ತಿ ರವರು ಅಭಿಪ್ರಾಯಪಟ್ಟರು.

ಸರ್ಕಾರಿ ಪ್ರೌಢಶಾಲೆ ಕಗದಾಳದಲ್ಲಿ ಹಮ್ಮಿಕೊಂಡಿದ್ದ “ಶಿಕ್ಷಕರ-ಪೋಷಕರ “ಸಭೆಯಲ್ಲಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಈ ಮೇಲಿನಂತೆ ಹೇಳಿದರು. ಪರೀಕ್ಷೆಗಳು ಸಮೀಪಿಸಿದ್ದರಿಂದ ಮನೆಯಲ್ಲಿ ಅನ್ಯ ಕೆಲಸಗಳಿಂದ ಮುಕ್ತಿ ನೀಡಿ ಓದಿಗೆ ಪಾಲಕರು ಸಹಕರಿಸಲು ಕೋರಿದರು.

ಮುಖ್ಯೋಪಾಧ್ಯಾಯರಾದ ಆರ್ ಸಿ ರಾಠೋಡ ಮಾತನಾಡಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಎಲ್ಲಾ ಪಾಠಗಳನ್ನು ಡಿಸೆಂಬರ್ ಒಳಗಾಗಿ,ಪೂರ್ಣಗೊಳಿಸಿದ್ದು, ಜನವರಿ 5 ರಿಂದ 3 ಸರಣಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.ಅಲ್ಲದೇ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿ ಮಾಡಲಾಗುತ್ತಿದೆ. ಅದಕ್ಕಾಗಿ ಪಾಲಕರು ತಮ್ಮ ಮನೆಗಳಲ್ಲಿ ವಿದ್ಯಾರ್ಥಿಗಳಿಗೆ ಓದಲು ಸೂಕ್ತ ಸ್ಥಳವನ್ನು ಒದಗಿಸಿ ಪ್ರತಿ ದಿನ ಬೆಳಗಿನ ಅವಧಿಯಲ್ಲಿ ಓದಿಸಲು ರೂಡಿಸಬೇಕೆಂದು ಮನವಿ ಮಾಡಿದರು. ಅಲ್ಲದೆ ವಿದ್ಯಾರ್ಥಿಗಳು ಶಾಲೆಗೆ ಬರುತ್ತೇನೆ ಎಂದು ಹೇಳಿ ಶಾಲೆಗೆ ಬರದೆ ಗೈರು ಉಳಿಯುತ್ತಿದ್ದಾರೆ ಅಂತಹ ಮಕ್ಕಳ ಕಡೆಗೆ ಪಾಲಕರು ಗಮನಹರಿಸಲು ಮತ್ತು ಶಿಕ್ಷಕರ ಜೊತೆಗೆ ಸಂಪರ್ಕವಿಟ್ಟುಕೊಂಡು ಮಾಹಿತಿ ಹಂಚಿಕೊಳ್ಳಲು ತಿಳಿಸಿದರು.

ಶಿಕ್ಷಕರಾದ ಜೆ ಕೆ ಪಾಟೀಲ್, ಬಿ ಜಿ ಪಾಟೀಲ್, ಬಿ ಎಚ್ ನದಾಫ ವಾರ್ಷಿಕ ಪರೀಕ್ಷೆಗಳು ಸಮೀಪಿಸಿದ್ದು,ಉಳಿದ ಅವಧಿಯಲ್ಲಿ ಶಾಲೆಯಲ್ಲಿ ನೀಲ ನಕ್ಷೆಯಂತೆ ಹೇಳಿಕೊಟ್ಟ ವಿಷಯವನ್ನು ಸರಿಯಾಗಿ ವೇಳಾಪಟ್ಟಿ ತಯಾರಿಸಿಕೊಂಡು ಓದಿಕೊಂಡಲ್ಲಿ ಹೆಚ್ಚಿನ ಫಲಿತಾಂಶವನ್ನು ಸಾಧಿಸಲು ಸಾಧ್ಯವಿದೆ ಎಂದು ಹೇಳಿದರು. ಕೆಲ ಪಾಲಕರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಹಿಂದೆ ನಡೆಸಲಾದ ಜಿಲ್ಲಾ ಮಟ್ಟದ “ಪ್ರತಿಭಾ ಪರೀಕ್ಷೆ”ಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣಳಾದ 9ನೇ ತರಗತಿ ವಿದ್ಯಾರ್ಥಿನಿ ಯಶೋಧಾ ನಾಗನೂರ ವಿದ್ಯಾರ್ಥಿನಿಯನ್ನು ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮಾಯಪ್ಪ ರಾ ಜೋತೆನ್ನವರ, ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶಂಕ್ರಮ್ಮ ಹರಳಕಟ್ಟಿ, ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಮಾಜಿ ಅಧ್ಯಕ್ಷರಾದ ಶೋಭಾ ಜಮಖಂಡಿ ಭಾಗವಹಿಸಿದ್ದರು.ವೇದಿಕೆಯ ಮೇಲೆ ಪಾಲಕರಾದ ಮಹಾಂತೇಶ ಜೊತೆನ್ನವರ, ಬಸಪ್ಪ ಜಮಖಂಡಿ,ಬೆನಕಟ್ಟಿ ಶಿಕ್ಷಕರಾದ ಎಸ್ ವ್ಹಿ ಶೆಟ್ಟರ,ಬಿ ಎಚ್ ನದಾಫ,ಡಿ ಬಿ ಕೊಡ್ಲಿ,ಬಿ ಎಸ್ ಜೋತೆನ್ನವರ ಉಪಸ್ಥಿತರಿದ್ದರು.ಶಿಕ್ಷಕರಾದ ಎಚ್ ಎನ್ ಯಡ್ರಾಂವಿ ನಿರೂಪಿಸಿದರು.

WhatsApp Group Join Now
Telegram Group Join Now
Share This Article