“ಸ್ವದೇಶಿ ವಸ್ತು ಬಳಸಿ ದೇಶ ಬೆಳಸಿ” ಜಾಗೃತಿ ಸೈಕಲ್ ರ್ಯಾಲಿಗೆ ಬೆಳಗಾವಿಯಲ್ಲಿ ಅದ್ದೂರಿ ಸ್ವಾಗತ

Hasiru Kranti
“ಸ್ವದೇಶಿ ವಸ್ತು ಬಳಸಿ ದೇಶ ಬೆಳಸಿ” ಜಾಗೃತಿ ಸೈಕಲ್ ರ್ಯಾಲಿಗೆ ಬೆಳಗಾವಿಯಲ್ಲಿ ಅದ್ದೂರಿ ಸ್ವಾಗತ
WhatsApp Group Join Now
Telegram Group Join Now

ಬೆಳಗಾವಿ: ಆರ್ಥಿಕವಾಗಿ ಸಬಲರಾಗುತ್ತಿರುವ ನಮ್ಮ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ನೋಡಬೇಕೆಂದರೆ ನಾವೆಲ್ಲರೂ ಸ್ಥಳೀಯ ಹಾಗೂ ದೇಶಿಯ ವಸ್ತುಗಳನ್ನು ಬಳಸಿ, ಪ್ರೋತ್ಸಾಹಿಸಬೇಕು ಎಂದು ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ಅವರು ಹೇಳಿದರು.

ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದಹಾಒಕ್ಕೂಟದಿಂದ ಸೈಕಲ್ ರ್ಯಾಲಿಯನ್ನು ಅದ್ದೂರಿ ಸ್ವಾಗತಿಸಿ, ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಗಾಗಿ ಭಾರತೀಯ ಸ್ವದೇಶಿಯ ವಸ್ತುಗಳನ್ನು ಬಳಿಸಲು ಹಚ್ಚಿನ ಆಸಕ್ತಿ ತೊರಬೇಕಿದೆ. ಆದರೆ, ಇವತ್ತು ನಾವೆಲ್ಲರೂ ಬಳಸುತ್ತಿರುವ ಪ್ರತಿ 10 ವಸ್ತುಗಳಲ್ಲಿ ಅರ್ಧಕ್ಕಿಂತ ಹೆಚ್ಚು ವಸ್ತುಗಳು ವಿದೇಶಿ ನಿರ್ಮಿತವಾಗಿರುತ್ತವೆ.

ಇದು ಆತಂಕಕಾರಿ ವಿಷಯ ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಅಭಿಯಾನದ ಮುಖ್ಯ ಉದ್ದೇಶವೇ ಸ್ವದೇಶಿ ವಸ್ತುಗಳಿಗೆ ಪ್ರೋತ್ಸಾಹ ನೀಡುವುದು ಆದ್ದರಿಂದ ನಾವೆಲ್ಲರೂ ಈ ಜಾಗೃತಿ ಕಾರ್ಯಕ್ರಮಕ್ಕೆ ಮಹತ್ವವನ್ನು ಕೊಟ್ಟು ಸಮಾಜದಲ್ಲಿ ಸ್ವದೇಶಿ ವಸ್ತುಗಳ ಬಳಕೆಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕಾದ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.

ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್ ನ ನಿವೃತ್ತ ಹಿರಿಯ ಸೇನಾಧಿಕಾರಿಗಳು ವಿಜ್ಞಾನಿಗಳು ವೈದ್ಯರು ವಿವಿಧ ಕ್ಷೇತ್ರಗಳ ಪ್ರಮುಖರು ರಾಜ್ಯದಲ್ಲಿ ಸ್ವದೇಶಿ ವಸ್ತುಗಳನ್ನು ಬಳಸಿ ದೇಶದ ಪ್ರಗತಿಗೆ ಕೈಜೋಡಿಸುವ ಉದ್ದೇಶದಿಂದ ಸ್ವದೇಶಿ ಬಳಸಿ ದೇಶ ಬೆಳೆಸಿ ಎಂಬ ಜಾಗೃತಿಯನ್ನು ಮೂಡಿಸಲು ರಾಜ್ಯದಾದ್ಯಂತ ಸೈಕಲ್ ರ್ಯಾಲಿಯನ್ನು ಹಮ್ಮಿಕೊಂಡಿದ್ದರು.

ಶುಕ್ರವಾರ ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ಈ ಸೈಕಲ್ ರ್ಯಾಲಿಯನ್ನು ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟ ಹಾಗೂ ಮಾಜಿ ಸೈನಿಕರ ರಾಷ್ಟ್ರೀಯ ಸಮನ್ವಯ ಸಮಿತಿ ಹಿರೇಬಾಗೇವಾಡಿ ವತಿಯಿಂದ ಜಿಲ್ಲೆಗೆ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು.

ನಂತರ ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯ ಗೋಕುಲ್ ನಗರ ಶಾಖೆಯಲ್ಲಿ ಸಾವಿರಾರು ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈ ಜಾಗೃತಿ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲಾಯಿತು.

ನಂತರ ಮಧ್ಯಾಹ್ನ 4:00ಗೆ ಮಹಾಒಕ್ಕೂಟದ ಸೈನಿಕ ಸಂಪರ್ಕ ಕೇಂದ್ರದಲ್ಲಿ ಸೈಕಲ್ ರ್ಯಾಲಿಯ ಎಲ್ಲಾ ಸದಸ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸೈಕಲ್ ರ್ಯಾಲಿಯ ನೇತೃತ್ವವನ್ನು ನಿವೃತ್ತ ಸೇನಾಧಿಕಾರಿಗಳಾದ ಬ್ರಿಗೇಡಿಯರ್ ಆರ್ ಮುನಿಸ್ವಾಮಿ ಹಾಗೂ ರಮೇಶ ಜಗತಾಪ ವಹಿಸಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ , ಗೌರವಾಧ್ಯಕ್ಷ ರಮೇಶ ಚೌಗಲಾ, ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ಹಿರೇಬಾಗೇವಾಡಿ ಅಧ್ಯಕ್ಷ ಜಗದೀಶ ಹೊರಗಿನಮನಿ, ಗೋಕಾಕ ತಾಲೂಕು ಘಟಕದ ಅಧ್ಯಕ್ಷ ಫಕೀರಪ್ಪ ಗೌಡರ, ರಾಮತೀರ್ಥ ನಗರ ಮಾಜಿ ಸೈನಿಕರ ಸಂಘದ ಅಧ್ಯಕ್ಷ ರಾಜೇಂದ್ರ ಹಲಗಿ, ಮಮದಾಪುರ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸಪ್ಪ ಬರಬಳ್ಳಿ, ಸಂಗಪ್ಪ ಮೇಟಿ, ಶಿವಬಸಪ್ಪ ಕಾಡನ್ನವರ ಅಶೋಕ ಮಜಗಿ, ಮಹೇಶ ಕಮ್ಮಾರ, ಸಂತೋಷ ಮಠಪತಿ, ಮಹಿಳಾ ಘಟಕದ ಅಧ್ಯಕ್ಷ ಸುನಿತಾ ಪಟ್ಟಣಶೆಟ್ಟಿ ವೈಶಾಲಿ ಸುಧಾಗಡೆ ಉಷಾ ದೇಸಾಯಿ, ದೀಪಾ ಜಾಮಗೌಡ, ಭರತೇಶ್ ಶಿಕ್ಷಣ ಸಂಸ್ಥೆಯ ಶಿಕ್ಷಕರ ತಂಡ ಇತರರು ಇದ್ದ

WhatsApp Group Join Now
Telegram Group Join Now
Share This Article