ಎಸ್‌ಪಿ ಪವನ್‌ನೆಜ್ಜೂರ ಅಮಾನತು ಎಷ್ಟರ ಮಟ್ಟಿಗೆ ಸರಿ: ಶ್ರೀರಾಮುಲು

Hasiru Kranti
ಎಸ್‌ಪಿ ಪವನ್‌ನೆಜ್ಜೂರ ಅಮಾನತು ಎಷ್ಟರ ಮಟ್ಟಿಗೆ ಸರಿ: ಶ್ರೀರಾಮುಲು
WhatsApp Group Join Now
Telegram Group Join Now
ಬಳ್ಳಾರಿ,ಜ,೦೩:  ಗಲಭೆಗೆ ಕಾರಣಭೂತರಾದ ಭರತ್‌ರೆಡ್ಡಿ ಅವರ ಕಟ್ಟಾಳು ಸತೀಶ್‌ರೆಡ್ಡಿ ಅವರ ಬೆಂಬಲಿಗರು ಅವರನ್ನು ಬಂಧಿಸುವುದು ಬಿಟ್ಟು, ಎಸ್‌ಪಿ ಪವನ್ ನೆಜ್ಜೂರ ಅವರನ್ನು     ಅಮಾನತು ಎಷ್ಟರ ಮಟ್ಟಿಗೆ ಸರಿ ಎಂದು ಮಾಜಿ ಸಚಿವ ಶ್ರೀರಾಮುಲು ಪ್ರಶ್ನಿಸಿದರು.
ನಗರದ ಹವಾಂಬಾವಿಯಲ್ಲಿರುವ ಜನಾರ್ಧನರೆಡ್ಡಿ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಎಸ್‌ಪಿ ಅಧಿಕಾರ ಸ್ವೀಕಾರ ಮಾಡಿ ೧೨ ತಾಸಿನಲ್ಲಿ ಅವರ ಸೇವೆಯನ್ನು ಅಮಾನತು ಕೇವಲ ಕಣ್ಣುರೆಸು ತಂತ್ರವಾಗಿದೆ. ಸಿಎಂ ಬಗ್ಗೆ ಗೌರವವಿದೆ. ಎಸ್‌ಪಿ ಅವರಿಗೆ ಸಮಯ ನೀಡಬೇಕೆತ್ತು. ತರಾತುರಿಯಲ್ಲಿ ಏಕೆ ? ಮೇಲ್ನೋಟಕ್ಕೆ ತಪ್ಪು ಕಣ್ಣಿರೆಸುವ ತಂತ್ರ ಮಾಡಿದ್ದಾರೆ. ಬಳ್ಳಾರಿ ಡಿವೈಎಸ್‌ಪಿ ಅವರು ಗಲಭೆ ತಡೆದಿದ್ದರೆ ಯಾವುದೇ ಗಲಭೆ ಸಂಭವಿಸುತ್ತಿರಲಿಲ್ಲ, ಯುವಕ ಸಾವಿಗೆ ಡಿವೈಎಸ್‌ಪಿ ನಂದಾರೆಡ್ಡಿ ನೇರಕಾರಣ.  ಡಿವೈಎಸ್ಪಿ ಅವರನ್ನು ಸಸ್ಪೆಂಡ್ ಮಾಡಬೇಕು. ಗಲಭೆಗೆ ಶಾಮೀಲಾದವರನ್ನು ಬಂಧಿಸಿ ಕ್ರಮ ತೆಗದುಕೊಳ್ಳಬೇಕು. ರಿಪಬ್ಲಿಕ್ ಬಳ್ಳಾರಿ ಅಲ್ಲ, ರಿಪಬ್ಲಿಕ್ ಕಾಂಗ್ರೆಸ್ ಮಾಡಿದ್ದಾರೆ. ಗೃಹಸಚಿವರೇ ನಾವು ಎಚ್ಚರ ತಪ್ಪಿದ್ದರೆ, ನಾವು ಉಳಿತಾ ಇದ್ದಿಲ್ಲ ಅವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಡಿವೈಎಸ್‌ಪಿ ಅವರು ರಕ್ಷಣೆ ಮಾಡಿಕೊಂಡು ಬಂದು ಗಲಭೆಗೆ ಸಾಥ್ ನೀಡಿದ್ದಾರೆ ಎಂದು ಆರೋಪಿಸಿದರು. ದ್ವೇಷ ಭಾಷಣ ಮಸೂದೆ ತದನಂತರ ಮೊದಲ ಬಳ್ಳಾರಿ ನಗರ ಶಾಸಕ ಭರತ್‌ರೆಡ್ಡಿ ಆಗಿದ್ದಾರೆ. ಗೂಂಡರಾಜ್ಯವಾಗಿ ಪರಿವರ್ತನೆ ಆಗುತ್ತದೆ. ಕೊಲೆಗೆ ಸಂಚು ರೂಪಸಿದವರನ್ನು ಅರೆಸ್ಟ್ ಮಾಡಲಾಗಿಲ್ಲ ಎಂದರು.
ಗಲಭೆಗೆ ಕಾರಣರಾದವರನ್ನು ಬಂಧಿಸಿದಿದ್ದರೆ ಬೆಳ್ಳಾರಿಯಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುತ್ತೇವೆ. ಕೆಜೆಹಳ್ಳಿ- ಡಿಜೆಹಳ್ಳಿಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಧ್ವಂಸ ರೀತಿಯಲ್ಲಿ ಬಳ್ಳಾರಿಲ್ಲಿ ಕೂಡಾ ಹಿಂದುಳಿದ ನಾಯಕ ಜನಾರ್ಧನರೆಡ್ಡಿ ವಿರುದ್ಧ ಬೆದರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಜನಾರ್ಧನರೆಡ್ಡಿ ಅವರಿಗೆ ಭದ್ರತೆ ನೀಡಬೇಕು. ಗಲಭೆಕೋರರನ್ನು ಅರೆಸ್ಟ್ ಮಾಡಿಲ್ಲ ಅಂದ್ರೇ ಪಾದಯಾತ್ರೆ ತಪ್ಪು ಮಾಡಿದರೆ ಜೈಲುಶಿಕ್ಷೆ ಆಗಲೇಬೆಕು. ಕಾನೂನು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸತೀಶ್‌ರೆಡ್ಡಿ ಅಂಗರಕ್ಷರನ್ನು ಬಂಧನವಾಗಬೇಕು ಎಂದರು.
ಗAಗಾವತಿ ಶಾಸಕ ಜನಾರ್ಧನರೆಡ್ಡಿ ಮಾತನಾಡಿ, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ನಮ್ಮಹತ್ರ ಬೆಳೆದ ಹುಡುಗ, ನಮ್ಮ ಹತ್ತಿರ ಚನ್ನಾಗಿ ಮಾತನಾಡುತ್ತಿದ್ದ, ಆದರೆ ಇತ್ತಿಚಿನ ದಿನಗಳಲ್ಲಿ ಇತನ ಬೆಳವಣಿಗೆ ಬೇರೆಯಾಗಿದ್ದು, ಇತರ ಇಲ್ಲಸಲ್ಲದ ಮಾತಗಳನ್ನು ಆಡುವುದು ಶೋಭೆ ತರುವುದಿಲ್ಲ. ಆಗಾಗಿ ಇನ್ನೂಮುಂದೆ ಇತರ ಮಾತನಾಡಿದಲ್ಲಿ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಗುಡುಗಿದರು. ನಾಗೇಂದ್ರನ ಮೇಲೆ ಸಾಕಷ್ಟು ಪ್ರಕರಣಗಳಿದ್ದು, ಮುಂದಿನ ದಿನಗಳಲ್ಲಿ ಕೂಡಾ ಜನರೇ ನಿರ್ಧಾರ ಮಾಡುತ್ತಾರೆ. ೨೦೨೮ರಲ್ಲಿ ರಾಜಕೀಯ ಶಾಶ್ವತವಾಗಿ ಮುಗಿಯುತ್ತದೆ. ರಾಜ್ಯದಲ್ಲಿ, ವಾಲ್ಮೀಕಿ ಜನಾಂಗಕ್ಕೆ ಗೊತ್ತು ರಾಮುಲು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕಾಲಿನ ಧೂಳಿಗೆ ಸಮವಲ್ಲ ಎಂದು ನಾಗೇಂದ್ರ ವಿರುದ್ಧ ಗುಡುಗಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸೋಮಶೇಖರರೆಡ್ಡಿ, ಮಾಜಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಮಾರುತಿ ಪ್ರಸಾದ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ಕಾರ್ಪೋರೆಟರ್ ಪಾಲಾಣ್ಣ, ಮಾಜಿ ಸಂಸದ ಪಕ್ಕಿರಪ್ಪ, ವೆಂಕಟರಮಣ, ಕೆ.ಎಸ್.ದಿವಾಕರ್ ಮತ್ತಿತರರ ಇದ್ದರು.
WhatsApp Group Join Now
Telegram Group Join Now
Share This Article