ಬಳ್ಳಾರಿ,ಜ,೦೩: ನಗರದಲ್ಲಿ ನಡೆದ ಗಲಭೆಯಲ್ಲಿ ಕೈ ಕಾರ್ಯಕರ್ತರ ಮೃತಪಟ್ಟಿದ್ದಾನೆ. ನಿಮ್ಮ ಸರ್ಕಾರವೇ ಇದೆ ನೀವೆ ತನಿಖೆ ಮಾಡಿ ನ್ಯಾಯ ಕೊಡಿಸಿ ಎಂದು ನಗರ ಮಾಜಿ ಶಾಸಕ ಸೋಮಶೇಖರರೆಡ್ಡಿ ಅವರು ನಾರಾ ಭರತ್‌ರೆಡ್ಡಿ ವಿರುದ್ಧ ಗುಡುಗಿದರು.
ನಗರದ ಹವಾಂಬಾವಿಯಲ್ಲಿರುವ ಜನಾರ್ಧನರೆಡ್ಡಿ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೮ ಮತ್ತು ೨೦೨೩ವರೆಗೆ ನಮ್ಮ ಅವಧಿಯಲ್ಲಿ ಗಲಾಟೆ ಮಾಡಿಲ್ಲ, ಇವತ್ತು ನಾವು ಹಾಕಿದ ಡಬಲ್ ರಸ್ತೆಗಳಿಂದ ಕಳೆ ತಂದಿದೆ. ಪಾರ್ಕ್, ರಿಂಗ್‌ರೋಡ್ ನಮ್ಮ ಸರ್ಕಾರ ಇದ್ದಾಗ ಮಾಡಿದ್ದು, ದುರುಗಮ್ಮ ಗುಡಿಗೆ ಬಾ ಅಂತಾ ಹೇಳ್ತಿಯಾ ನಾನ್ ಬರು ರೆಡಿ ಎಂದು ಸವಾಲ್ ಎಸೆದರು. ನಿಮ್ಮ ಸರ್ಕಾರವಿದೆ ಮಿತ್ತೆಲ್, ಬ್ರಾಹ್ಮಿಣಿ ತನ್ನಿ ಆಮೇಲೆ ನಾವು ಎನ್‌ಎಂಡಿಸಿ ತರಲು ಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಓಸಿ, ಇಸ್ಪೀಟ್, ಗಾಂಜಾದಿAದ ಯುವಕರು ಹಾಳಾಗುತ್ತಿದ್ದಾರೆ. ಬಡವರ ಪಡಿತರ ಕಾಳಸಂತೆಯಲ್ಲಿ ಮಾರಾಟವ ಆಗಲು ಸಾಥ್ ನೀಡುತ್ತಿದ್ದಾರೆ. ಚರ್ಚೆಗೆ ಬಾ ಮಾತನಾಡೋಣ ಎಂದು ಗುಡುಗಿದರು. ಸತೀಶ್‌ರೆಡ್ಡಿ ಎಪಿ, ಎಂಎಲ್‌ಎನಾ ಅವನಿಗೆ ಯಾಕೆ ಗನ್‌ಮ್ಯಾನ್ ಕೊಟ್ಟಿದ್ದೀರಾ. ಬಳ್ಳಾರಿಯನ್ನು ಬೆಂಗಳೂರು ಆಗಿ ಮಾಡಲು ಜನಾರ್ಧನರೆಡ್ಡಿ ಕನಸು ಕಂಡಿದ್ದರು. ವೈಯಕ್ತಿಕವಾಗಿ ನಮ್ಮ ಬಗ್ಗೆ ಮಾತನಾಡುವುದು ಸರಿಯಲ್ಲ, ಆಲೋಚನೆ ಮಾಡಿ ಮಾತನಾಡಬೇಕು ಎಂದು ಎಚ್ಚರಿಸಿದರು. ಓವರ್ ಬ್ರಿಡ್ ಅಡಿಗಲ್ಲು ಹಾಕಿ ಅಭಿವೃದ್ಧಿ ಮಾಡಿ ನಾನೇ ಎಂದರು. ಬಳ್ಳಾರಿಗೆ ಸೂಪರ್‌ಸ್ಪೇಷಾಲಿಟಿ, ನ್ಯಾಷನಲ್ ಹೈವೆ ಶ್ರೀರಾಮುಲು ಅವರು ಎಂಪಿ ಆಗಿದ್ದಾಗ ಅಭಿವೃದ್ಧಿ ಪಡಿಸಿದ್ದಾರೆ. ನಿನ್ನೆ ಸಿಎಂ ಸಿದ್ದರಾಮಯ್ಯನವರ ಮಾತುಗಳನ್ನು ಎಂಎಲ್‌ಎ ಭರತ್‌ರೆಡ್ಡಿ ಕೇಳ್ತಿಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದರು. ನಮ್ಮ ತಂದೆ ನಮ್ಮನ್ನು ಚೆನ್ನಾಗಿ ಬೆಳೆಸಿದ್ದಾರೆ. ಬಳ್ಳಾರಿಗೆ ಕುಡಿಯುವ ನೀರು ನಿರಂತರವಾಗಿ ನೀಡಬೇಕೆಂದು ಕರೆ ನಿರ್ಮಾಣದ ಕಾಮಗಾರಿಗೆ ನಮ್ಮ ತಾಯಿ (ಗಾಲಿ ರುಕ್ಮೀಣಮ್ಮ) ಹೆಸರಿನಲ್ಲಿ ಕೆರೆ ನಿರ್ಮಾಣ ಮಾಡಲು ಈ ಹಿಂದೆ ಜಾಗ ಪರಿಶೀಲಿಸಿದ್ದೇವೆ ಆದರೆ ಆ ಜಾಗದಲ್ಲಿ ನೀರು ಸಂಗ್ರಹ ಆಗುವುದಿಲ್ಲ ಎಂಬ ವರದಿಯಿಂದ ಕೈ ಬಿಟ್ಟಿದ್ದೇವು. ಇಂತಹ ವಿಷಗಳನ್ನು ತಿಳಿದುಕೊಂಡು ಶಾಸಕರ ಚಿಕ್ಕಪ್ಪನವರು ಮಾತನಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಪಿ ವೃತ್ತ ರಸ್ತೆ ಅಗಲೀಕರಣದಿಂದ ಚಿಕ್ಕಪುಟ್ಟ ವ್ಯಾಪಾರಿಗಳು ತೊಂದರೆ ಅನುಭವಿಸ್ತಾ ಇದಾರೆ. ಅಭಿವೃದ್ಧಿ ರಾಜಕೀಯ ಮಾಡಿ, ಸೇಡಿನ ರಾಜಕೀಯ ಬೇಡ ಎಂದರು.
ಈ ಸಂದರ್ಭದಲ್ಲಿ ಮಾಜಿ ಬುಡಾ ಅಧ್ಯಕ್ಷ ಪಾಲಾಣ್ಣ, ನಗರಸಭೆ ವಿರೋಧ ಪಕ್ಷದ ನಾಯಕ ಶ್ರೀನಿವಾಸ ಮೋತ್ಕರ್, ವೆಂಕಟರಮಣ, ಕೆ.ಎಸ್.ದಿವಾಕರ್ ಮತ್ತಿತರರು ಇದ್ದರು.


