ಚಂದನವನದ ಅನುಭವಿ ತಂತ್ರಜ್ಘ ರಮೇಶ್ ಕಾಮತ್ ಗ್ಯಾಪ್ ನಂತರ ’ನಗ್ನಸತ್ಯ’ ಎಂಬ ಕೊಂಕಣಿ ಸಿನಿಮಾಕ್ಕೆ ಕಥೆ, ಚಿತ್ರಕಥೆ,ಸಂಭಾಷಣೆ, ಎರಡು ಹಾಡುಗಳಿಗೆ ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.
ಕಿರಣ್ಮಯಿ ಪತಿಗೆ ಬೆಂಗಾವಲಾಗಿ ಆದಿತ್ಯ ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಇತ್ತೀಚಿಗೆ ಸಿನಿ ಪಂಡಿತರಿಗೆ ಚಿತ್ರರಂಗದ ಗಣ್ಯರಿಗೆ ಚಿತ್ರದ ವಿಶೇಷ ಪ್ರದರ್ಶನ ಏರ್ಪಾಟು ಮಾಡಲಾಗಿತ್ತು.
ಹಿರಿಯ ನಟಿ ಪದ್ಮವಾಸತಿ ಮಾತನಾಡಿ “ಇಂತಹ ಚಿತ್ರಗಳು ಜನರಿಗೆ ತಲುಪಬೇಕು. ನಿರ್ದೇಶಕರು ಇದೇ ಕೊನೆ ಚಿತ್ರ ಎನ್ನುತ್ತಿದ್ದಾರೆ. ನೀವು ದಯವಿಟ್ಟು ನಿಲ್ಲಿಸಬೇಡಿ. ಮುಂದೆಯೂ ಇಂತಹುದೆ ಉತ್ತಮ ಚಿತ್ರಗಳನ್ನು ಕೊಡುತ್ತಾ ಇರಿ” ಎಂದರು. ನಟ,ನಿರ್ದೇಶಕ ಎಂ.ಡಿ.ಕೌಶಿಕ್, ಹಿರಿಯ ಪತ್ರಕರ್ತ ಸದಾಶಿವಶಣೈ ಸೇರಿದಂತೆ ಹಲವರಿಂದ ಸಿನಿಮಾ ಕುರಿತಂತೆ ಪ್ರಶಂಸೆಯ ನುಡಿಗಳು ಕೇಳಿಬಂದವು.
ಮುಖ್ಯ ಪಾತ್ರದಲ್ಲಿ ಆದ್ಯಾನಾಯಕ್ ಲೋಕಾಯುಕ್ತರಾಗಿ ಗಣೇಶ್ಪ್ರಭು. ಉಳಿದಂತೆ ಗೋಪಿನಾಥ್ಭಟ್, ಆನಂದ್ನಗರಕರ್, ಗೋಪಿಭಟ್, ವಿಶ್ವನಾಥ್ ಕಿಣಿ ಹಾಗೂ ಮಂಗಳೂರು ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸಂಗೀತ ಶ್ರೀಸುರೇಶ್, ಛಾಯಾಗ್ರಹಣ ಪಿ.ವಿ.ಆರ್.ಸ್ವಾಮಿ, ಸಂಕಲನ ನಾಗೇಶ್.ಎನ್, ಸೌಂಡ್ ಇಂಜಿನಿಯರ್ ಪ್ರವೀಣ್ಜೋಗಿ ಅವರದಾಗಿದೆ. ಕಳೆದ ವರ್ಷ ರಾಷ್ಟ್ರ ಪ್ರಶಸ್ತಿ ಪಡೆದ ’ಕಂದೀಲು’ ಚಿತ್ರದಲ್ಲಿ ಗುರುತಿಸಿಕೊಂಡಿದ್ದ
ತಂತ್ರಜ್ಞರು ‘ನಗ್ನಸತ್ಯ’ದಲ್ಲಿ ಕೆಲಸ ಮಾಡಿರುವುದು ವಿಶೇಷ.
ಕೆಲವು ವರ್ಷಗಳ ಹಿಂದೆ ಭೂಪಾಲ್ದಲ್ಲಿ ಮಹಿಳೆ ಮೇಲೆ ಶೋಷಣೆ ಮಾಡಿದ ಸುದ್ದಿಯ ಒಂದು ಎಳೆಯನ್ನು ತೆಗೆದುಕೊಂಡು ಚಿತ್ರಕತೆ ಸಿದ್ದಪಡಿಸಲಾಗಿದೆ. ಸಂವಿಧಾನದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜದಲ್ಲಿ ಹೆಣ್ಣುಮಗಳು ಹಿಂಸೆಗೆ ಗುರಿಯಾಗುತ್ತಾಳೆ. ಆಕೆ ಮೂರು ಅಂಗಗಳಿಗೂ ಹೋದರೂ ನ್ಯಾಯ ಸಿಗುವುದಿಲ್ಲ. ಮುಂದೆ ಇದರ ವಿರುದ್ದ ಹೋರಾಡಿ, ಸಮಾಜಕ್ಕೆ ಯಾವ ಎಚ್ಚರಿಕೆ ಕೊಡುತ್ತಾಳೆ ಎಂಬುದನ್ನು ಕುತೂಹಲದ ಮೂಲಕ ತೋರಿಸಲಾಗಿದೆ. ಬೆಂಗಳೂರು ಸುತ್ತಮುತ್ತ ಸಿಂಕ್ ಸೌಂಡ್ದಲ್ಲಿ ಚಿತ್ರೀಕರಣ ನಡೆಸಲಾಗಿದೆ.


