೨೦೦೮ರಲ್ಲಿ ಬಿಜೆಪಿ ಸರ್ಕಾರವು ಗನ್‌ಮ್ಯಾನ್ ಸಂಸ್ಕೃತಿ ತಂದಿದ್ದು : ಜನಾರ್ಧನರೆಡ್ಡಿ ವಿರುದ್ಧ ಪ್ರತಾಪ್‌ರೆಡ್ಡಿ ಗುಡುಗು

Hasiru Kranti
೨೦೦೮ರಲ್ಲಿ ಬಿಜೆಪಿ ಸರ್ಕಾರವು ಗನ್‌ಮ್ಯಾನ್ ಸಂಸ್ಕೃತಿ ತಂದಿದ್ದು : ಜನಾರ್ಧನರೆಡ್ಡಿ ವಿರುದ್ಧ ಪ್ರತಾಪ್‌ರೆಡ್ಡಿ ಗುಡುಗು
WhatsApp Group Join Now
Telegram Group Join Now
 ಬಳ್ಳಾರಿ,ಜ.೦೨: ೨೦೦೮ರಲ್ಲಿ ಬಿಜೆಪಿ ಸರ್ಕಾರವು ಗನ್‌ಮ್ಯಾನ್ ಸಂಸ್ಕೃತಿ ತಂದಿದ್ದು, ಅಕ್ರಮಗಳ ಗಣಿ ಎಂದರೆ ಜನಾರ್ಧನರೆಡ್ಡಿ ಎಂದು ಮಾಜಿ ಬುಡಾ ಅಧ್ಯಕ್ಷ ಎನ್.ಪ್ರತಾಪ್‌ರೆಡ್ಡಿ ಜನಾರ್ದನರೆಡ್ಡಿ ವಿರುದ್ಧ ಗುಡುಗಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳು ಈ ಹಿಂದೆ ದಲಿತರ ಮೇಲೆ ಅಟ್ಯಾಕ್ ಮಾಡಿದ್ದರು. ವೈಯಕ್ತಿಕ ದ್ವೇಷ ಸರಿಯಲ್ಲ, ಟವರ್‌ಕ್ಲಾಕ್, ಅಂಡರ್‌ಬ್ರಿಡ್ಜ್ ತೆಗೆದಿದ್ದು ಯಾರು ಅಂತ ಗೊತ್ತಿದೆ. ಜನಾರ್ಧನರೆಡ್ಡಿಯಿಂದ ದ್ವೇಷ ರಾಜಕಾರಣ ಶುರುವಾಗಿದೆ. ಜಿಲ್ಲಾ ಅಭಿವೃದ್ಧಿಗೆ   ಶ್ರಮಿಸಲಿ ಎಲ್ಲಾ ಕಾಂಗ್ರೆಸ್ ಮುಖಂಡರು ಸನ್ಮಾನ ಮಾಡುತ್ತೇವೆ ಎಂದರು.
 ಜನಾರ್ದನರೆಡ್ಡಿಗೆ ಶಾಸಕ ನಾರಾ ಭರತ್‌ರೆಡ್ಡಿಯವರು ಮಾಡುತ್ತಿರುವ ಅಭಿವೃದ್ಧಿ ಸಹಿಸಿಕೊಳ್ಳಲು ಆಗುತ್ತಿಲ್ಲ,  ಜನಾಧÀðನರೆಡ್ಡಿ ಸುಳ್ಳಿನ ಕೋಟೆಯೆ ಕಟ್ಟುತ್ತಾರೆ. ಬಾಯಿಬಿಟ್ಟರೇ ಆತ ಮಾತನಾಡೋದೆ ಸುಳ್ಳು, ಜನಾರ್ದನರೆಡ್ಡಿ ಅಧಿಕಾರದಲ್ಲಿದ್ದಾಗ ಬಳ್ಳಾರಿಯಲ್ಲಿ ಮಾಡಿದ ಅಭಿವೃದ್ಧಿ ಏನೂ? ಶಾಸಕ ಭರತ್ ರೆಡ್ಡಿ ಕೇವಲ ಎರಡು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಏನೂ ಎಂಬುದು ಜನ ನೋಡಿದ್ದಾರೆ. ಬಳ್ಳಾರಿ ಜಿಲ್ಲೆಯ ಜನಕ್ಕೆ ಗೊತ್ತಿದೆ. ಜನಾಧÀðನರೆಡ್ಡಿಗೆ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಬ್ರಹ್ಮೀಣಿ ಸ್ಟೀಲ್ ತರಲಿ, ಉತ್ತಮ್ ಗಾಲ್ವಗೆ ಯಾಕೆ ಮಾರಾಟ ಮಾಡಿದ, ಬಳ್ಳಾರಿ  ಜಿಲ್ಲೆಗೆ ಜನಾಧÀðನರೆಡ್ಡಿ ಕೊಡುಗೆ ಏನೂ? ಎಂದು  ಪ್ರಶ್ನಿಸಿದ್ದಾರೆ.
ನಮ್ಮ ಕುಟುಂಬದ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ವಯಸ್ಸಿಗೆ ತಕ್ಕಂತೆ ವರ್ತನೆ ಮಾಡಬೇಕು.
ನಾರಾ ಕುಟುಂಬ ಏನೂ ಎಂಬುದು ಬಳ್ಳಾರಿಗರಿಗೆ ಗೊತ್ತಿದೆ. ನಾರಾ ಕುಟುಂಬದ ಬಗ್ಗೆ ಹಾಗೂ ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡಬೇಕೆಂದರೆ ಹುಷಾರ್ ಎಂದು ಗುಡುಗಿದ್ದಾರೆ. ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ತಡಿಬೇಕು ಎಂಬ ಏಕೈಕ ಉದ್ದೇಶದಿಂದ ಈ ರೀತಿ ಕ್ಷುಲ್ಲಕ ಕಾರಣಕ್ಕೆ ನೆಪ ಮಾಡಿ ಘರ್ಷಣೆಯನ್ನು ವ್ಯವಸ್ಥಿತವಾಗಿ ಮುಂದಾಲೋಚನೆಯಿAದ ಮಾಡಿದ್ದಾರೆ. ಜನಾರ್ದನರೆಡ್ಡಿ ಮನೆಯಲ್ಲಿ ಚೀಲಗಳ ಗಟ್ಟಲೇ ಕಾರದ ಪುಡಿ ಹೇಗೆ ಬಂತು? ರೆಡ್ಡಿ ಮನೆಯಲ್ಲಿ ಕಟ್ಟಿಗೆಗಳು ಹೇಗೆ ಬಂದವು? ಎಲ್ಲವೂ ಸಹ ಇಲಾಖೆಯವರು ತನಿಖೆ ಮಾಡ್ತಾರೆ ನಾವು ಯಾವುದೇ ತನಿಖೆಗೂ ಸಿದ್ಧ ಎಂದು ಪ್ರತಾಪ್ ರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಕರ್ನಾಟಕ ರಾಜ್ಯ ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್, ಪಾಲಿಕೆಯ ಸದಸ್ಯರಾದ ಆಸೀಫ್, ಕುಬೇರ, ನಾಮ ನಿರ್ದೇಶನ ಸದಸ್ಯ ಸಮೀರ್, ಮುಖಂಡರಾದ ಸಿದ್ದೇಶ್, ಎಲ್.ಮಾರೆಣ್ಣ ಸೇರಿದಂತೆ ಮತ್ತಿತರರು ಇದ್ದರು.
WhatsApp Group Join Now
Telegram Group Join Now
Share This Article