ಹೊನ್ನೂರು ಸ್ವಾಮಿ ಅವರ ಕುಟುಂಬ ಕಲೆ ಮತ್ತು ಸಂಗೀತಕ್ಕೆ ಜೀವನ ಮುಡುಪಾಗಿಟ್ಟಿದೆ : ಪಂಪಾಪತಿ

Hasiru Kranti
ಹೊನ್ನೂರು ಸ್ವಾಮಿ ಅವರ ಕುಟುಂಬ ಕಲೆ ಮತ್ತು ಸಂಗೀತಕ್ಕೆ ಜೀವನ ಮುಡುಪಾಗಿಟ್ಟಿದೆ : ಪಂಪಾಪತಿ
WhatsApp Group Join Now
Telegram Group Join Now
ಬಳ್ಳಾರಿ. ಜ. 02..: ತೊಗಲುಗೊಂಬೆ ಕಲೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಹೊನ್ನೂರ್ ಸ್ವಾಮಿಯವರ ಕಾರ್ಯ ಶ್ಲಾಘನೀಯ ತಮ್ಮ ಕಲಾತಂಡದ
 ಮೂಲಕ ದಶಕಂಠ ರಾವಣ ಪ್ರದರ್ಶನ ಹಮ್ಮಿಕೊಂಡಿರುವುದು  ಅತ್ಯಂತ ಸಂತೋಷದ ಸಂಗತಿ ಎಂದು ಲಕ್ಷ್ಮಿಪುರ  ಗ್ರಾಮದ ಮುಖಂಡ ಹನುಮಂತ ಸಂತಸವನ್ನು ವ್ಯಕ್ತಪಡಿಸಿದರು.
ಅವರು ನೆರೆಯ ಆಂಧ್ರಪ್ರದೇಶದ ಡಿ.ಹೀರೇಹಾಳ್ ಮಂಡಲದ ಲಕ್ಷ್ಮೀಪುರ ಗ್ರಾಮದಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ (ರಿ) ವತಿಯಿಂದ  ಸಂಜೆ ಹುಗ್ಗಿ ಸುಗ್ಗಿ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗ್ರಾಮದ ಮುಖಂಡ ಪಂಪಾಪತಿ ಅವರು ಮಾತನಾಡಿ, ಲಕ್ಷ್ಮೀಪುರ ಗ್ರಾಮ ಸಂಗೀತದಲ್ಲಿ ದೇಶಕ್ಕೆ ಹೆಸರು ವಾಸಿಯಾಗಿದೆ. ಅದರಲ್ಲೂ ಹೊನ್ನೂರಸ್ವಾಮಿ ಅವರು ನಮ್ಮ ಗ್ರಾಮದಲ್ಲಿ ತೊಗಲುಗೊಂಬೆ ಪ್ರದರ್ಶನ ನೀಡಿರುವುದು ಅತ್ಯಂತ ಖುಷಿಯ ವಿಚಾರ ಹೀಗೆ ಹೊನ್ನೂರ್ ಸ್ವಾಮಿ ಅವರ ಕುಟುಂಬ ಸಂಗೀತ ಮತ್ತು ಕಲೆಗೆ ತಮ್ಮ ಜೀವನವನ್ನೇ  ಮೀಸಲಿಟ್ಟಿದ್ದಾರೆ ಅವರಿಗೆ ದೇವರು ಇನ್ನಷ್ಟು ಯಶಸ್ಸನ್ನು ನೀಡಲಿ ಎಂದು ಶುಭ ಹಾರೈಸಿದರು  ಎಂದರು.
 ಕಾರ್ಯಕ್ರಮದಲ್ಲಿ ಲಕ್ಷ್ಮಿಪುರ ಗ್ರಾಮದ
 ಮುಖಂಡರಾದ ಸುಗ್ಲಪ್ಪ, ಸುಗ್ಲಮ್ಮ ಪೂಜಾರಿ ಸುಗ್ಲಪ್ಪ, ಮಾರೆಮ್ಮ ಪೂಜಾರಿ ಹನುಮಂತ, ಅಂಗಡಿ ಸುಗ್ಲಪ್ಪ, ಮಾರೆಣ್ಣ, ಡ್ರೈವರ್ ಹೊನ್ನೂರಸ್ವಾಮಿ, ನಿಂಗಪ್ಪ, ಗಜಂ ಪೆನ್ನಯ್ಯ, ಈಶ್ವರಪ್ಪ, ಸಣ್ಣ ಗಂಗಪ್ಪ, ಪೆನ್ನಯ್ಯ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ಅಧ್ಯಕ್ಷ ಕೆ.ಹೊನ್ನೂರಸ್ವಾಮಿ ಪ್ರಾಸ್ತವಿಕವಾಗಿ ಮಾತನಾಡಿದರು.
ಲಕ್ಷ್ಮೀದೇವಿ ಸ್ವಾಗತಿಸಿದರು, ಕುರುಬರು ಹೊನ್ನೂರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು, ಬಿ.ರಾಘವೇಂದ್ರ ವಂದಿಸಿದರು.
WhatsApp Group Join Now
Telegram Group Join Now
Share This Article