ಗಿನ್ನಿಸ್ ದಾಖಲೆಗೆ ಬಳ್ಳಾರಿಯ ಸೂರ್ಯಕಲಾ ನೃತ್ಯ ತಂಡ

Hasiru Kranti
ಗಿನ್ನಿಸ್ ದಾಖಲೆಗೆ ಬಳ್ಳಾರಿಯ ಸೂರ್ಯಕಲಾ ನೃತ್ಯ ತಂಡ
WhatsApp Group Join Now
Telegram Group Join Now
ಬಳ್ಳಾರಿ. 01:  ನಗರದ ಸೂರ್ಯ ಕಲಾ ನೃತ್ಯ ಅಕಾಡೆಮಿ ವಿದ್ಯಾರ್ಥಿಗಳು ಕೂಚಿಪುಡಿ ನೃತ್ಯ ಪ್ರದರ್ಶನ ಮಾಡಿ ಗಿನ್ನಿಸ್ ದಾಖಲೆ ಮಾಡಿದ್ದಾರೆ ಎಂದು ನೃತ್ಯ ಗುರು ಕೆ. ಸಿ. ಸುಂಕಣ್ಣ ಹೇಳಿದರು. ಭಾರತ್ ಆರ್ಟ್ಸ್ ಅಕಾಡಮಿ, ತೆಲಂಗಾಣ ರಾಜ್ಯದ ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹೈದರಾಬಾದಿನ ಗಚ್ಚಿಬೌಲಿ ಕ್ರೀಡಾಂಗಣ ದಲ್ಲಿ ನಡದ ಮಹಾ ಬೃಂದ ನಾಟ್ಯ ಕಾರ್ಯಕ್ರಮದಲ್ಲಿ ಬಳ್ಳಾರಿಯ ಸೂರ್ಯ ಕಲಾ ನೃತ್ಯ ವಿದ್ಯಾರ್ಥಿಗಳು 66ಜನ ತರಂಗಂ. ತಿಲ್ಲಾನ ನೃತ್ಯ ಪ್ರದರ್ಶನ ಮಾಡಿ ಗಿನ್ನಿಸ್ ದಾಖಲೆ ಮಾಡಿದ್ದಾರೆ… ಇವರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಿದ್ದಾರೆ. ಗಿನ್ನಿಸ್ ದಾಖಲೆ ನೃತ್ಯದಲ್ಲಿ ಪಾಲ್ಗೊಂಡ  ಕಲಾವಿದರನ್ನು ನಗರದ ಹಲವು ಸಂಸ್ಥೆಗಳು ಅಭಿನಂದಿಸಿದರು.
WhatsApp Group Join Now
Telegram Group Join Now
Share This Article