ಬಳ್ಳಾರಿ. ಜ. 01: ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ವಿ.ಜೆ. ಶೋಭರಾಣಿ (2016) ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಮಂಡ್ಯ ಜಿಲ್ಲೆ ಪೊಲೀಸ್ ಅಧಿಕ್ಷಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪವನ್ ನೆಜ್ಜುರ್ ಅವರನ್ನು ನೂತನ ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರನಾಗಿ ಗೃಹ ಇಲಾಖೆಯ ಮುಂದಿನ ಆದೇಶದವರಿಗೆ ಎಂಬ ಸುತ್ತೋಲೆಯೊಂದಿಗೆ ವರ್ಗಾಯಿಸಲಾಗಿದೆ.
ವಿ.ಜೆ. ಶೋಭರಾಣಿ ಅವರ ಕಾರ್ಯಾವಧಿಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ಕಟ್ಟುನಿಟ್ಟಿನ ಕ್ರಮಗಳು, ಅಪರಾಧ ನಿಯಂತ್ರಣ ಮತ್ತು ಸಾರ್ವಜನಿಕ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು ನೀಡಲಾಗಿತ್ತು. ಇದೀಗ ಮಂಡ್ಯ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ.
ನೂತನ ಎಸ್ಪಿ ಪವನ್ ನೆಜ್ಜುರ್ (2016) ಬೆಂಗಳೂರು ಲೋಕಾಯುಕ್ತದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು, ಭ್ರಷ್ಟಾಚಾರ ನಿರೋಧಕ ಕ್ರಮಗಳು ಹಾಗೂ ತನಿಖಾ ಕಾರ್ಯಗಳಲ್ಲಿ ಪರಿಣತಿ ಪಡೆದವರಾಗಿದ್ದಾರೆ.
ಬಳ್ಳಾರಿ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಶೋಭಾರಾಣಿ ವಿ.ಜೆ ಅವರು ನೂತನ ಅವರಿಗೆ ಲಾಠಿ ನೀಡುವ ಮೂಲಕ ಅಧಿಕಾರವನ್ನು ಸ್ಥಾಂತರಿಸಿದರು.


