ತುಂಗಭದ್ರಾ ಗೇಟುಗಳಿಗೆ ನೂತನ ಚೈನ್ ಅಳವಡಿಸಿ

Hasiru Kranti
ತುಂಗಭದ್ರಾ ಗೇಟುಗಳಿಗೆ ನೂತನ ಚೈನ್ ಅಳವಡಿಸಿ
WhatsApp Group Join Now
Telegram Group Join Now
ಬಳ್ಳಾರಿ: 01..ಬೆಂಗಳೂರಿನಲ್ಲಿ ಡಿಸಿಎಂ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು  ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ. ಪುರುಷೋತ್ತಮ್ ಗೌಡ ಅವರು  ಭೇಟಿ ಮಾಡಿ, ಮನವಿ ಸಲ್ಲಿಸಿದರು.
 ತುಂಗಭದ್ರಾ ಜಲಾಶಯ ನಿರ್ಮಾಣದ 70 ವರ್ಷಗಳ ನಂತರ ಜಲಾಶಯದ 33 ಹಳೆಯ ಗೇಟುಗಳನ್ನು ತೆರವುಗೊಳಿಸಿ, 33 ನೂತನ ಗೇಟ್ಗಳನ್ನು ಅಳವಡಿಸಲು, ಕೇಂದ್ರ ಜಲಸಂಪನ್ಮೂಲ ಆಯೋಗದಿಂದ ಅನುಮತಿ ಪಡೆದು 52 ಕೋಟಿ ರೂಪಾಯಿಗಳ ವೆಚ್ಚದಲ್ಲಿ , ಗುಜರಾತ್ ಕಂಪನಿಯೊಂದಿಗೆ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮೂರು ರಾಜ್ಯಗಳು ಜಲಾಶಯಕ್ಕೆ 33 ನೂತನ ಗೇಟುಗಳ ಅಳವಡಿಸಲು ಆರಂಭಕಾರ್ಯ ಸ್ವಾಗತ. ಆದರೆ ಎಲ್ಲಾ ಗೇಟುಗಳಿಗೆ  ಹಳೆಯ ಚೈನುಗಳನ್ನೇ ಏಕೆ ಅಳವಡಿಸುತ್ತೀರಿ ??. ಮತ್ತೊಮ್ಮೆ ಚೈನ್ ಕಟ್ಟಾದರೆ ಮೂರು ರಾಜ್ಯಗಳ 16 ಲಕ್ಷ ಎಕರೆ ರೈತರ ಪರಿಸ್ಥಿತಿಗಳು ಏನು??. ತಜ್ಞರೊಂದಿಗೆ ಚರ್ಚಿಸಿ ಎಲ್ಲಾ ನೂತನ ಗೇಟ್ ಗಳಿಗೂ ನೂತನ ಚೈನುಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಬಳ್ಳಾರಿ ವಿಜಯನಗರ ಕೊಪ್ಪಳ ರಾಯಚೂರು ಮತ್ತು ಆಂಧ್ರ ಪ್ರದೇಶ, ತೆಲಂಗಾಣ ರೈತರ ಪರವಾಗಿ ತುಂಗಭದ್ರ ರೈತ ಸಂಘದಿಂದ ವಿನಂತಿಸಿದ್ದಾರೆ.
ಈ ಕುರಿತು ತಜ್ಞರೊಂದಿಗೆ ಚರ್ಚಿಸಿ ಉತ್ತಮ ತೀರ್ಮಾನ ಕೈಗೊಳ್ಳುತ್ತೇವೆಂದು  ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article