ಮಹಾಲಿಂಗಪುರ: ಹೊಸ ವ?ಚರಣೆಗೆ ಬೈ ಹೇಳಿ ರಾಮಕೃಷ್ಣ ಪರಮಹಂಸರು ವಿವೇಕಾನಂದರಿಗೆ ದೀಕ್ಷೆಯಿತ್ತ ಕಲ್ಪತರು ದಿನಾಚರಣೆಯಾಗಿ ಜನವರಿ ಒಂದನ್ನು ಸ್ಥಳಿಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫುಡ್ ಫೆಸ್ಟ್, ರಂಗೋಲಿ ಸ್ಪರ್ಧೆ ಮುಂತಾದ ಸನಾತನ ಸಂಪ್ರದಾಯದ ಸ್ಪರ್ಧೆಗಳನ್ನು ಹಮ್ಮಿಕೊಂಡು ವಿಶೇ?ವಾಗಿ ಆಚರಿಸಲಾಯಿತು.
ಭಾರತೀಯ ಆಹಾರ ಪದ್ಧತಿಯ ಜವಾರಿ ಊಟ, ಬೀಟ್ ರೂಟ್, ರಾಗಿ ದೋಸೆ, ಪಾಲಕ್ ದೋಸೆ, ತರಕಾರಿ ಸಲಾಡ್ ಪಲಾವ್, ರಾಗಿ ಅಂಬಲಿ, ಮಜ್ಜಿಗೆ, ಬಾದಾಮಿ ಹಾಲು, ಖಡಕ್ ಚಹಾ, ಹಣ್ಣಿನ ಜ್ಯೂಸ್, ಮಸಾಲ ಪಾನ್ ಮುಂತಾದ ಸಾತ್ವಿಕ ಆಹಾರ ಮೇಳದಲ್ಲಿ ಫಾಸ್ಟ್ ಫುಡ್ ವರ್ಜಿಸಿದ್ದು ಕಂಡುಬಂತು, ಮಕ್ಕಳೇ ಮನೆಯಿಂದ ತಯಾರಿಸಿ ಕೊಂಡ ಬಂದ ವಿವಿಧ ಖಾದ್ಯಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸಿ ಖುಷಿಪಟ್ಟರು.
ಪತ್ರಕರ್ತ ಎಸ್.ಎಸ್.ಈಶ್ವರಪ್ಪಗೋಳ ಫುಡ್ ಫೆಸ್ಟ್ ಉದ್ಘಾಟಿಸಿ, ನಮ್ಮ ಭಾರತೀಯ ಸನಾತನ ಸಂಸ್ಕೃತಿಯ ವಿಶೇಷ ಖಾದ್ಯಗಳನ್ನು ತಯಾರಿಸುವ ಹಾಗೂ ವ್ಯವಹಾರ ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಈ ಫುಡ್ ಫೆಸ್ಟ್ ಹಾಗೂ ರಂಗೋಲಿ ಸ್ಪರ್ಧೆ ಮಾದರಿ ಎಂದರು.
ಶಿಕ್ಷಕಿಯರಾದ ಶಾರದ ಮಯ್ಯನವರಮಠ, ಶಮಾ ಗಲಗಲಿ, ರೂಪಾ ಜಾಡಗೌಡ, ಪ್ರೇಮಾ ಕರಜಗಿ,ಸುಧಾ ಕೊಂಗವಾಡ, ಮಲ್ಲಮ್ಮ ಲೋಕುರಿ,ಮುತ್ತು ಅಂಗಡಿ ಮಕ್ಕಳಿಗೆ ಮಾರ್ಗದರ್ಶನ ಮಾಡಿದ್ದರು.
ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ, ನಿರ್ದೇಶಕರಾದ ರಮೇಶ ಮುಳವಾಡ, ರಾಜು ಘಟ್ಟೆಪ್ಪನವರ, ಮುಖ್ಯೋಪಾಧ್ಯಾಯ ಎಸ್.ಎಸ್.ಕೌಜಲಗಿ ಮತ್ತು ಇತರರಿದ್ದರು.
ಜನವರಿ ಒಂದನ್ನು ಕಲ್ಪತರು ದಿನವಾಗಿ ವಿಶೇಷ ಆಚರಣೆ. ಗಮನ ಸೆಳೆದ ಭಾರತೀಯ ಆಹಾರ ಪದ್ಧತಿಯ ಮೇಳ


