ಅದ್ಭುತ ಶಿಲ್ಪ ಕಲಾಕೃತಿಗಳಿಂದ ಜಕಣಾಚಾರಿಯವರು ಅಮರ ಶಿಲ್ಪಿಗಳಾಗಿದ್ದಾರೆ : ಶ್ರೀಶೈಲ ಗುಡುಮೆ

Chandrashekar Pattar
ಅದ್ಭುತ ಶಿಲ್ಪ ಕಲಾಕೃತಿಗಳಿಂದ ಜಕಣಾಚಾರಿಯವರು ಅಮರ ಶಿಲ್ಪಿಗಳಾಗಿದ್ದಾರೆ : ಶ್ರೀಶೈಲ ಗುಡುಮೆ
WhatsApp Group Join Now
Telegram Group Join Now

ಮೂಡಲಗಿ: ಜಕಣಾಚಾರಿಯವರು ಶಿಲ್ಪ ಕಲೆಯನ್ನೇ ಜೀವನ್ನಾಗಿಸಿಕೊಂಡಿದ್ದ ಕರಕುಶಲಕರ್ಮಿ, ಅವರ ಅದ್ಭುತ ಶಿಲ್ಪ ಕಲಾಕೃತಿಗಳ ಮೂಲಕ ಅಮರ ಶಿಲ್ಪಿಗಳಾಗಿದ್ದಾರೆ ಎಂದು ಮೂಡಲಗಿ ತಹಶೀಲ್ದಾರರಾದ ಶ್ರೀಶೈಲ ಗುಡುಮೆ ಹೇಳಿದರು.

ಗುರುವಾರದಂದು ಪಟ್ಟಣದ ಮೂಡಲಗಿ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಮೂಡಲಗಿ ವಿಶ್ವಕರ್ಮ ಸಮಾಜದ ಸಂಯುಕ್ತಾಶ್ರಯದಲ್ಲಿ ಜರುಗಿದ ಅಮರಶಿಲ್ಪಿ ಜಕಣಾಚಾರಿಯವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಜಕಣಾಚಾರಿಯವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸುವ ಮೂಲಕ ಮಾತನಾಡಿದ ಅವರು, ಜಕಣಾಚಾರ್ಯರಂತೆ ಈಗಿನ ಶಿಲ್ಪಕಾರರ ಕಾಯಕವು ನಿಪುಣತೆಯಿಂದ ಕೂಡಿದ್ದು ಅವರನ್ನು ಗುರುತಿಸಿ ಬೆಳೆಸುವ ಅಗತ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಶಿಕ್ಷಕರಾದ ಸದಾಶಿವ ಮಾದರರವರು ಮಾತನಾಡಿ, ಜಗತ್ತಿಗೆ ವಿಶ್ವಕರ್ಮರ ಕೊಡುಗೆ ಅನನ್ಯವಾಗಿದ್ದು, ಅವರ ಕಲೆ ಸಂಸ್ಕೃತಿ ಉತ್ಕೃಷ್ಟವಾಗಿವೆ.
ಜಕಣಾಚಾರಿಯವರು ಹೊಯ್ಸಳರ ದೇವಾಲಯಗಳಾದ ಬೇಲೂರು ಮತ್ತು ಹಳೆಬೀಡುಗಳಲ್ಲಿ ಅದ್ಭುತ ಶಿಲ್ಪಗಳನ್ನು ಕೆತ್ತಿದರು. ಅವರ ಮಗ ಡಕಣಾಚಾರಿ ಕೂಡ ಶ್ರೇಷ್ಠ ಶಿಲ್ಪಕಾರರಾಗಿ ತಂದೆಗೆ ತಕ್ಕ ಮಗ ಅನಿಸಿಕೊಂಡಿದ್ದರು ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಮೂಡಲಗಿಯ ಶಿಲ್ಪಕಾರರಾದ ಈರಪ್ಪ.ಶಂ.ಬಡಿಗೇರ(ವಂದಾಲ) ಅವರನ್ನು ಗೌರವಿಸಿ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ, ತಾಲೂಕಾ ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಫ್.ಸಿ.ಚಿನ್ನನವರ, ಸಿಡಿಪಿಓ ಯಲ್ಲಪ್ಪ ಗದಾಡಿ, ವಿಶ್ವಕರ್ಮ ಸಮಾಜ ಬಾಂಧವರಾದ ಮೌನೇಶ್ ಪತ್ತಾರ್, ಶ್ರೀಕಾಂತ ಪತ್ತಾರ್, ಮಾರುತಿ ಬಡಿಗೇರ, ಭಗವಂತ ಬಡಿಗೇರ, ಈರಪ್ಪ ಬಡಿಗೇರ, ಧರೆಪ್ಪ ಕಂಬಾರ, ಆನಂದ ಪತ್ತಾರ್, ಸಂತೋಷ ಪತ್ತಾರ್, ಚೇತನ್ ಪತ್ತಾರ್, ಶಶಿಕಾಂತ ಪತ್ತಾರ್, ಆತ್ಮಾನಂದ ಬಡಿಗೇರ, ಚಂದ್ರಶೇಖರ್ ಪತ್ತಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿರಸ್ತೇದಾರರಾದ ಪರಸಪ್ಪ ನಾಯಕ ನಿರೂಪಿಸಿ ವಂದಿಸಿದರು.

WhatsApp Group Join Now
Telegram Group Join Now
Share This Article