ಮಹಾಲಿಂಗಪುರ: ಮಂಗಳವಾರ ಪಟ್ಟಣದ ಚಿಕ್ಕ ಗೃಹ ಕೈಗಾರಿಕಾ ಘಟಕದ ಸುಗಂಧ ಅಗರಬತ್ತಿ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ಹೊತ್ತಿ ನಷ್ಟವಾಗಿರುವ ಸ್ಥಳಕ್ಕೆ ತೇರದಾಳ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಭೇಟಿ ನೀಡಿ, ಕಾರ್ಖಾನೆ ಮಾಲಿಕರಿಗೆ ನೈತಿಕ ಧೈರ್ಯ ತುಂಬಿ ತಮ್ಮ ಸ್ವಂತ ಖಾತೆಯ ನಗದು ೫೦ ಸಾವಿರ ರೂಪಾಯಿಗಳ ಚೆಕ್ ನೀಡಿ ಔದಾರ್ಯ ಮೆರೆದರು.
ಈ ಘಟನೆಯಲ್ಲಿ ಯಂತ್ರೋಪಕರಣಗಳು ಹಾಗೂ ಕಚ್ಚಾ ವಸ್ತುಗಳು ಸೇರಿ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಆಹುತಿಯಾಗಿ ಒಟ್ಟು ೨೫ ಲಕ್ಷಗಳ ವರೆಗಿನ ನಷ್ಟ ಉಂಟಾಗಿದೆ.
ಈ ಸಂದರ್ಭದಲ್ಲಿ ಕಾರ್ಖಾನೆ ಮಾಲಿಕನ ದಯನೀಯ ಸ್ಥಿತಿ ಅರಿತು, ಪುನಃ ಘಟಕ ಆರಂಭಿಸಿ ಬದುಕು ಕಟ್ಟಿಕೊಳ್ಳಲು ಸರ್ಕಾರದಿಂದ ಹೆಚ್ಚಿನ ಅನುದಾನದವನ್ನು ಒದಗಿಸುವ ಭರವಸೆಯನ್ನೂ ಸಹ ನೀಡಿದರು.
ಈ ಭೇಟಿ ಸಮಯದಲ್ಲಿ ಪುರಸಭೆ ಪ್ರಭಾರಿ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಮುಸ್ತಾಕ್ ಚಿಕ್ಕೋಡಿ, ಬಲವಂತಗೌಡ ಪಾಟೀಲ್, ಚನಬಸು ಹುರಕಡ್ಲಿ, ನಜೀರ್ ಅತ್ತಾರ, ನಜೀರ್ ಝಾರೆ, ಅರ್ಜುನ್ ದೊಡಮನಿ, ಮಹಾಲಿಂಗಪ್ಪ ಮಾಳಿ, ನಾನಾ ಜೋಷಿ, ಸುಭಾಸ ಬಂಡಿ, ರಾಜೇಶ್ ಭಾವಿಕಟ್ಟಿ, ಬಂಡಿವಡ್ಡರ, ಸಿದ್ದು ಭೂಸಣ್ಣವರ, ಉಪ್ಪಾರ, ಖಾಜಿ, ಹಣ್ಮಂತ ಬಂಡಿವಡ್ಡರ, ಹೆಸ್ಕಾಂ ಅಧಿಕಾರಿ ರಾಜೇಶ್ ಭಾಗೋಜಿ, ತಲಾಠಿ ಸೌರಭ ಮೇತ್ರಿ ಮತ್ತು ಗ್ರಾಮ ಸಹಾಯಕ ಲಾಲಸಾಬ ಸನದಿ ಇದ್ದರು.


