ಜಗಜ್ಯೋತಿ ಶ್ರೀ  ಬಸವೇಶ್ವರರ ತತ್ವ,ಸಿದ್ಧಾಂತ  ಅಳವಡಿಸಿಕೊಳ್ಳಿ: ಶಾಸಕ ಪಾಟೀಲ 

Hasiru Kranti
ಜಗಜ್ಯೋತಿ ಶ್ರೀ  ಬಸವೇಶ್ವರರ ತತ್ವ,ಸಿದ್ಧಾಂತ  ಅಳವಡಿಸಿಕೊಳ್ಳಿ: ಶಾಸಕ ಪಾಟೀಲ 
WhatsApp Group Join Now
Telegram Group Join Now
ನೇಸರಗಿ. ನಾವು ಜೀವನದಲ್ಲಿ  ಸಹಸ್ರ ವರ್ಷಗಳ ಹಿಂದೆ ತಮ್ಮ ತತ್ವ, ನೀತಿ, ರೀತಿ, ಧರ್ಮ ಹಾಗೂ ಅವುಗಳ ಆಚರಣೆ ಬಗ್ಗೆ ಅಣ್ಣ ಜಗಜ್ಯೋತಿ ಶ್ರೀ  ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ನಾವು ನೀವೆಲ್ಲರೂ ಸಮಾಜಮುಖಿಯಾಗಿ ನಾವು, ನೀವೆಲ್ಲರೂ ಸಹಬಾಳ್ವೆಯಿಂದ ನಡೆಯೋಣ ಹಾಗೂ  ಮಹಾನ್ ಪುರುಷ ಅಣ್ಣ ಬಸವಣ್ಣ ಅವರ ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯೋಣ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
    ಅವರು ಸಮೀಪದ ನಾಗನೂರ ಗ್ರಾಮದಲ್ಲಿ ಬುಧವಾರದಂದು ಅಣ್ಣ ಶ್ರೀ ಜಗಜ್ಯೋತಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿದರು.
     ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ  ನಾಗನೂರು – ಬೆಳಗಾವಿ ರುದ್ರಾಕ್ಷಿಮಠದ  ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ ಶ್ರೀ ಬಸವೇಶ್ವರರು  ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆಯೋಣ ಎಂದರು.
    ಕಾರ್ಯಕ್ರಮದಲ್ಲಿ  ಕೆ ಪಿ ಸಿ ಸಿ ಸದಸ್ಯ ಶ್ರೀಮತಿ ರೋಹಿಣಿ ಪಾಟೀಲ, ಮುಖಂಡರಾದ ಸಿದ್ದಣ್ಣ ಸುಂಕದ, ಚನ್ನಬಸಪ್ಪ ತಲ್ಲೂರ,   ಮೂರ್ತಿ ಧಾಣಿಗಳಾದ ಸಮಾಜ ಕಲ್ಯಾಣ ನಿವೃತ್ತ ಅಧಿಕಾರಿಗಳಾದ  ಸೋಮಶೇಖರ ನಾಯ್ಕರ, ಸಚಿನ ತಲ್ಲೂರ, ಬಸವರಾಜ ಉಣಕಲ,ನವೀನ ಗದಗ, ಮಹಾಬಳೇಶ್ವರ ತಿಗಡಿ,ಸುಜಾತ ತಲ್ಲೂರ ಸೇರಿದಂತೆ ಗ್ರಾಮದ ಮುಖಂಡರು, ಗ್ರಾ ಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article