ಅಥಣಿ: 2020 ರಿಂದ ಸತತ ಪ್ರಯತ್ನದ ಫಲವಾಗಿ ದೇಶದಲ್ಲಿ 57 ಕೇಂದ್ರೀಯ ವಿದ್ಯಾಲಯ ಮಂಜೂರಾಗಿದ್ದವು ಅದರಲ್ಲಿ ರಾಜ್ಯಕ್ಕೆ ಒಂದೆ ಒಂದು ಕೇಂದ್ರೀಯ ವಿದ್ಯಾಲಯ ಮಂಜೂರಾಗಿರುವದ್ದು ತಾಲೂಕಿನ ಶಿನ್ನಾಳ ಗ್ರಾಮದಲ್ಲಿ 9 ಎಕರೆ 36 ಗುಂಟೆ ಸ್ಥಳದಲ್ಲಿ ಭವ್ಯ ಶಾಲಾ ಕಟ್ಟಡ ನಿರ್ಮಾಣವಾಗಲಿದೆ. ಇದೆ 2025-26ನೇ ಸಾಲಿನಲ್ಲಿ ತಾತ್ಕಾಲಿಕವಾಗಿ ಅಥಣಿ ಪಟ್ಟಣದ ಸಂಕಿರ್ಣ ಶಾಲೆ ನಂಬರ 3 ರಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಲಿದೆ. 2020 ರಿಂದ ಸತತ ಪ್ರೇಯತ್ನದ ಫಲವಾಗಿ ಕೇಂದ್ರೀಯ ವಿದ್ಯಾಲಯ ಪ್ರಾರಂಭವಾಗುತ್ತಿರುವದು ಅಥಣಿ ಮತಕ್ಷೇತ್ರದ ಶೈಕ್ಷಣಿಕ ಕ್ರಾಂತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು
ಬುಧವಾರ ಅಥಣಿ ತಾಲೂಕಿನ ಶಿನ್ನಾಳ ಗ್ರಾಮದ ಮಂಜೂರಾದ ಕೇಂದ್ರೀಯ ವಿದ್ಯಾಲಯದ ನಿವೇಶನ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಶಾಸಕ ಲಕ್ಷ್ಮಣ ಸವದಿ ಮಾತನಾಡಿ ಕೇಂದ್ರೀಯ ವಿದ್ಯಾಲಯ ಪ್ರಾರಂಭಗೊಳ್ಳುವುದರಿಂದ ಭಾರತ ಸರ್ಕಾರವು ದೇಶದ ಎಲ್ಲ ಮಕ್ಕಳಿಗೂ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಕೇಂದ್ರಿಯ ವಿದ್ಯಾಲಯ (ಕೆ.ವಿ.) ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಒಂದೇ ಪಠ್ಯಕ್ರಮ, ಒಂದೇ ಶೈಕ್ಷಣಿಕ ಮಾನದಂಡದ ಮೇಲೆ ಶಾಲೆ ನಡೆಯುತ್ತಿದ್ದು, ಕೇಂದ್ರಿಯ ವಿದ್ಯಾಲಯಗಳು ಸಿಬಿಎಸ್‌ಇ ಪಠ್ಯಕ್ರಮವನ್ನು ಅನುಸರಿಸುತ್ತವೆ. ವಿಜ್ಞಾನ, ಗಣಿತ, ಭಾಷೆಗಳು, ಸಮಾಜಶಾಸ್ತ್ರದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ನೈತಿಕ ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಮಾನ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶಿಕ್ಷಣದಲ್ಲಿ ಸಮಾನತೆಯನ್ನು ಸಾಧಿಸುವಲ್ಲಿ ಕೇಂದ್ರಿಯ ವಿದ್ಯಾಲಯಗಳು ಮಹತ್ವದ ಪಾತ್ರ ವಹಿಸುತ್ತದೆ. ಕೇಂದ್ರಿಯ ವಿದ್ಯಾಲಯಗಳ ಪ್ರಾರಂಭವು ಕ್ಷೇತ್ರದ ಶಿಕ್ಷಣ ವ್ಯವಸ್ಥೆಗೆ ಶಿಸ್ತು, ಗುಣಮಟ್ಟ ಮತ್ತು ಸಮಾನತೆಯನ್ನು ತಂದ ಮಹತ್ವದ ಹೆಜ್ಜೆಯಾಗಿದೆ. ಕೇಂದ್ರೀಯ ವಿದ್ಯಾಲಯ ಪ್ರಾರಂಭಿಸಲು 2020 ರಿಂದ ಸತತ ಪ್ರಯತ್ನದ ಫಲವಾಗಿ ಇಂದು ಮಂಜೂರಾತಿ ಪಡೆದಿದೆ ಇದಕ್ಕೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಕೇಂದ್ರ ಶಿಕ್ಷಣ ಸಚಿವರು ಕೂಡ ಕೈ ಜೋಡಿಸಿದ್ದಾರೆ. ಹೀಗಾಗಿ ಅವರೆಲ್ಲರಿಗೂ ನನ್ನ ವಯಕ್ತಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸತತ ಪ್ರಯತ್ನದ ಫಲವಾಗಿ ಇಡೀ ರಾಜ್ಯದಲ್ಲಿಯೇ ಕೇಂದ್ರ ಸರಕಾರ ಮಂಜೂರಾತಿ ನೀಡಿರುವ ಏಕೈಕ ಕೇಂದ್ರೀಯ ವಿದ್ಯಾಲಯ ಅಥಣಿ ತಾಲೂಕಿನ ಶಿನ್ನಾಳ ಗ್ರಾಮಕ್ಕೆ ಮಂಜೂರಾಗಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಹರ್ಷ ಮೂಡಿಸಿದೆ ಎಂದು ಹೇಳಿದರು.
ಈ ವೇಳೆ ಶಿಕ್ಷಣ ಇಲಾಖೆಯ ಬಿಇಓ ಎಮ್. ಆರ್ ಮುಂಜೆ, ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಪುರಸಭೆ ಸದಸ್ಯ ರಾಜೂ ಗುಡೋಡಗಿ, ಗುತ್ತಿಗೆದಾರ ಎಸ್. ಆರ್ ಗುಳಪ್ಪನವರ, ಮಲ್ಲು ಕುಳ್ಳೋಳ್ಳಿ, ಬಸವರಾಜ ತೇರದಾಳ, ಮುತ್ತರಾಜ ಮೊಕಾಶಿ, ಶ್ರೀನಿವಾಸ ಪಟ್ಟಣ ಸೇರಿದಂತೆ ಹಲವು ಮುಖಂಡರು ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್:
ಇಡೀ ದೇಶದಲ್ಲಿ ಮಂಜೂರಾಗಿರುವ 57 ಕೇಂದ್ರೀಯ ವಿದ್ಯಾಲಯಗಳಲ್ಲಿ ಅಥಣಿ ತಾಲೂಕಿನ ಶಿನ್ನಾಳ ಗ್ರಾಮಕ್ಕೆ ಕೇಂದ್ರೀಯ ವಿದ್ಯಾಲಯವೂ ಸಹ ಸೇರಿರುವುದಕ್ಕೆ ಶಾಸಕ ಲಕ್ಷ್ಮಣ ಸವದಿಯವರ ಪ್ರೇಯತ್ನ ಪ್ರಮುಖ ಕಾರಣವಾಗಿದೆ. ಕೇಂದ್ರೀಯ ವಿದ್ಯಾಲಯ ಮಂಜೂರಾಗಿರುವುದು ಅಥಣಿ ಜನತೆಯ ಸಂತೋಷ ಇಮ್ಮಡಿಗೊಳಿಸಿದೆ. 2024 ರ ಲೋಕಸಭಾ ಚುನಾವಣೆ ಪೂರ್ವದಲ್ಲಿಯೇ ಸಾರ್ವಜನಿಕ ಶಿಕ್ಷಣ ಇಲಾಖೆ, ತಹಶೀಲ್ದಾರ, ಉಪ ವಿಭಾಗಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಕಛೇರಿ ಮೂಲಕ ಅನೇಕ ಪತ್ರ ವ್ಯವಹಾರಗಳನ್ನು ಮಾಡಿ ಇಂದು ಕೇಂದ್ರೀಯ ವಿದ್ಯಾಲಯ ಪ್ರಾರಂಭವಾಗುತ್ತಿರುವದು ಅತ್ಯಾಂತ ಸಂತಸದ ಸಂಗತಿಯಾಗಿದೆ
“ಚಂದು ಪಾಟೀಲ, ಶಿನ್ನಾಳ ಗ್ರಾಮದ ನಿವಾಸಿ”


