ನಾಗೇಂದ್ರ ಆಪ್ತ ವಿಶ್ವನಾಥ್ ಮತ್ತು ಮಾರುತಿ ಮನೆ ಮೇಲೆ ಸಿಬಿಐ ದಾಳಿ

Hasiru Kranti
ನಾಗೇಂದ್ರ ಆಪ್ತ ವಿಶ್ವನಾಥ್ ಮತ್ತು ಮಾರುತಿ ಮನೆ ಮೇಲೆ ಸಿಬಿಐ ದಾಳಿ
WhatsApp Group Join Now
Telegram Group Join Now
ಬಳ್ಳಾರಿ,ಡಿ.31: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿಗಳ ಹಗರಣದಲ್ಲಿ ಸಿಬಿಐ ಅಧಿಕಾರಿಗಳು ಇನ್ನೂ ತನಿಖೆಯನ್ನು ಮುಂದುವರಿಸಿದ್ದು ಕೆಲದಿನಗಳ ಹಿಂದಷ್ಟೇ ಮಾಜಿ ಸಚಿವ ನಾಗೇಂದ್ರ ಅವರಿಗೆ ಸೇರಿದ ಸುಮಾರು ಎಂಟು ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.  ಮತ್ತೆ ಇಂದು ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಣ ವರ್ಗಾವಣೆ ಜಾಡು ಹಿಡಿದು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ನಗರದ ದೊಡ್ಡ ಮಾರ್ಕೆಟ್ ಹತ್ತಿರ ಇರುವ ನಾಗೇಂದ್ರ ಅವರಿಗೆ ಸೇರಿದ ವ್ಯವಾರಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳ ಬೇಲೂಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ವಿಶ್ವನಾಥ್ ಎನ್ನುವ ಆಪ್ತನ ಮನೆ ಮೇಲೆ ಇಂದು ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ, ಮತ್ತು ಅದೇ ರೀತಿಯಾಗಿ ಮಾಜಿ ಸಚಿವ ನಾಗೇಂದ್ರ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾದ ನಗರದ ಹುಸೇನ್ ನಗರದಲ್ಲಿನ ಮಾರುತಿ ಎನ್ನುವವರ ಮನೆ ಮೇಲು ಸಹ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಈ ಇಬ್ಬರನ್ನು ವಿಚಾರಣೆ ನಡೆಸಿದರು ಎನ್ನಲಾಗಿದೆ.
ಸಿಬಿಐ ತನಿಖೆಗೆ ವಹಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿದ ಕೆಲವೇ ದಿನಗಳಲ್ಲಿ ಸಿಬಿಐ ಬಳ್ಳಾರಿಗೆ ಆಗಮಿಸಿ ಮಾಜಿ ಸಚಿವ, ಪಾಲಿ ಶಾಸಕ ನಾಗೇಂದ್ರ ಹಾಗೂ ಅವರ ಆಪ್ತರಿಗೆ ಶಾಕ್ ಕೊಟ್ಟಿದೆ. ಸಿಬಿಐ ಈವರೆಗೆ ಬ್ಯಾಂಕ್ ವಿಚಾರಕ್ಕೆ ಸೀಮಿತವಾಗಿ ತನಿಖೆ ನಡೆಸುತ್ತಿತ್ತು. ಹೀಗಾಗಿ ಸಿಬಿಐನಿಂದ ಸಮಗ್ರ ತನಿಖೆ  ನಡೆಯುತ್ತಿದೆ.
 ಕಳೆದ ಕೆಲವು ತಿಂಗಳುಗಳ ಹಿಂದೆ  ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಸುಮಾರು 84 ಕೋಟಿ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು  ನಿಗಮದ  ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ  ಮೂವರು ಹೆಸರು ಹಾಗೂ ಬಹುಕೋಟಿ ಹಗರಣ ನಡೆದಿರುವ ಬಗ್ಗೆ ಆ ಪತ್ರದಲ್ಲಿ ಪ್ರಸ್ತಾಪಿಸಿದ್ದರು. ಇದರ ಬೆಲೆ ನಿಗಮದಿಂದ ಬ್ಯಾಂಕುಗಳ ಮೂಲಕ ಹಲವು ಖಾತೆಗಳಿಗೆ ಹಣ ಅಕ್ರಮವಾಗಿ  ರ್ಗಾವಣೆಗೊಂಡಿರುವುದು ಬಯಲಾಗಿತ್ತು . ಈ ಬೆನ್ನಲ್ಲೇ ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ದೂರು ನೀಡಿದ್ದರು. ದೂರಿನ  ಆಧಾರದ ಮೇಲೆ ಬ್ಯಾಂಕ್‌ನ 6 ಜನ ಸಿಬ್ಬಂದಿ ವಿರುದ್ಧ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ  ಎಫ್‌ಐಆರ್ ಕೂಡ ದಾಖಲಾಗಿತ್ತು.
ಈ ಪ್ರಕರಣದ ವಿಷಯವಾಗಿ  ಸಚಿವ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಇಡಿ ಅವರನ್ನು ವಶಕ್ಕೆ ಪಡೆದುಕೊಂಡು ಬಂಧನಕ್ಕೆ ಒಳಪಡಿಸಿತ್ತು. ವಿಶ್ವನಾಥ್‌ರ ಬ್ಯಾಂಕ್‌ ಖಾತೆಯಿಂದ 6 ಕೋಟಿ ರೂ  ಮಾಜಿ ಸಚಿವ, ಹಾಲಿ ಶಾಸಕ ಅ.ನಾಗೇಂದ್ರ ಅವರ ಅಪ್ತ ವಿಶ್ವನಾಥ್‌ರವರ ಬ್ಯಾಂಕ್‌ನ ಅಧಿಕಾರಿಗಳು ಈ ಹಿನ್ನೆಲೆಯಲ್ಲಿ ವಿಶ್ವನಾಥರ ಮನೆ ಮೇಲೆ ದಾಳಿ ನಡೆಸಿದ್ದಾರೆ, ಈ ಆರು ಕೋಟಿ ಹಣದಿಂದ ಕೊಳಗಲ್ಲು ಸಮೀಪದ ಕೃಷ್ಣಾನಗರ್ ಕ್ಯಾಂಪ್ನಲ್ಲಿ ಭೂಮಿಯನ್ನು ಖರೀದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ ಸಿಬಿಐ  ಅಧಿಕಾರಿಗಳು  ಕೃಷ್ಣಾನಗರ ಕ್ಯಾಂಪ್‌ಗೂ ಸಹ ಭೇಟಿ ನೀಡಿ  ವಿಶ್ವನಾಥರು ಖರೀದಿಸಿರುವ ಭೂಮಿಯ ಬೆಲೆಯ ಬಗ್ಗೆಯೂ ಸಹ ಪರಿಶೀಸಿದ್ದಾರೆ  ಎಂದು ತಿಳಿದು ಬಂದಿದೆ.
 ಇಂದು ಬೆಳ್ಳಂಬೆಳಗ್ಗೆ ವಿಶ್ವನಾಥ್ ಅವರ ಮನೆಗೆ ನಾಲ್ಕು ಜನ ಅಧಿಕಾರಿಗಳ ತಂಡ ಆಗಮಿಸಿ
ಮನೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಿಶ್ವನಾಥ ಮನೆಯಲ್ಲಿಲ್ಲದ ಕಾರಣ, ಅವರ ಸಹೋದರ ಮಹೇಶ್‌ ರನ್ನು ಸಿಬಿಐ ಅಧಿಕಾರಿಗಳು ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಕರೆತಂದು ಠಾಣೆಯಲ್ಲಿಯೇ ಸಿಬಿಐ ಅಧಿಕಾರಿಗಳು ವಿಶ್ವನಾಥ ಸಂಬಂಧಿತ ಮಾಹಿತಿಗಳನ್ನು ಸಂರ್ಗಹಿಸುತ್ತಿದ್ದಾರೆ. ಈ ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದ ಎನ್ನಲಾಗಿದ್ದು, ಪ್ರಕರಣದಲ್ಲಿ ವಿಶ್ವನಾಥ  ಪಾತ್ರವಿದ ಎಂಬ ಆರೋಪದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಬಿಐ ಮೂಲಗಳಿಂದ ತಿಳಿದುಬಂದಿದೆ.
WhatsApp Group Join Now
Telegram Group Join Now
Share This Article