ಗೃಹಲಕ್ಷ್ಮಿ ಹಣವನ್ನು ಮಕ್ಕಳ ಉನ್ನತ ಶಿಕ್ಷಣಕ್ಕೆ ಬಳಸಿ :ಬಾಬಾಸಾಹೇಬ ಪಾಟೀಲ 

Hasiru Kranti
ಗೃಹಲಕ್ಷ್ಮಿ ಹಣವನ್ನು ಮಕ್ಕಳ ಉನ್ನತ ಶಿಕ್ಷಣಕ್ಕೆ ಬಳಸಿ :ಬಾಬಾಸಾಹೇಬ ಪಾಟೀಲ 
WhatsApp Group Join Now
Telegram Group Join Now
ನೇಸರಗಿ. 01-  ರಾಜ್ಯದ ಜನತೆಗೆ  ಚುನಾವಣಾ ಪೂರ್ವ ಕಾಂಗ್ರೆಸ್ ಪಕ್ಷ ನೀಡಿದ ವಾಗ್ದಾನದಂತೆ  ಪಂಚ ಗ್ಯಾರಂಟಿಗಳ ಅನುಷ್ಠಾನವನ್ನು ಅಧಿಕಾರಕ್ಕೆ ಬಂದ 5 ತಿಂಗಳಲ್ಲಿ 5 ಗ್ಯಾರಂಟಿಗಳಾದ ಗೃಹಲಕ್ಷ್ಮಿ,   ಶಕ್ತಿ, ಯುವ ನಿಧಿ, ಭಾಗ್ಯ ಜ್ಯೋತಿ, ಅನ್ನ ಭಾಗ್ಯ  ಯೋಜನೆಗಳ ಫಲವನ್ನು ಪಡೆದು ತಮ್ಮ ಸಹೋದರರ,ಸಹೋದರಿಯರ, ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಿ ಅವರ ಬೆಳವಣಿಗೆಗೆ ಖರ್ಚು ಮಾಡಿ ಅವರ ಬೆಳವಣಿಗೆಗೆ ತಾವುಗಳು ದಾರಿದೀಪವಾಗಿ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
    ಅವರು ಮಂಗಳವಾರದಂದು  ಸಮೀಪದ ಮೇಕಲಮರಡಿ ಗ್ರಾಮದ   ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪಂಚ ಗ್ಯಾರಂಟಿಗಳ ಅನುಷ್ಠಾನ ಪಲಾನುಭವಿಗಳ ಕುಂದು ಕೊರತೆಗಳ ಸಭೆಯನ್ನು ಉದ್ದೇಸಿಸಿ ಮಾತನಾಡಿ 93%  ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದು ಅನೇಕ ಕ್ಷೇತ್ರಗಳಲ್ಲಿ ಖರ್ಚು ಮಾಡಿದ್ದೀರಿ ಮತ್ತು ಕೆಲವರು ಉಳಿತಾಯ ಮಾಡಿದ್ದೀರಿ ಆ ಹಣವನ್ನು ಸತ್ಕಾರ್ಯಗಳಿಗೆ ಬಳಸಿಕೊಂಡು  ಉತ್ತಮ ಜೀವನ ನಡೆಸಿ ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
     ಪಂಚ ಗ್ಯಾರಂಟಿ ಅನುಷ್ಠಾನ ಯೋಜನೆಯ ಬೈಲಹೊಂಗಲ ತಾಲೂಕಾ ಅಧ್ಯಕ್ಷ ಡಾ. ಮಹಾಂತೇಶ ಕಳ್ಳಿಬಡ್ಡಿ ಮಾತನಾಡಿ ಮೇಕಲಮರಡಿ ಗ್ರಾಮದಲ್ಲಿ  ಒಟ್ಟು 841 ಜನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದು ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿದ್ದು ಇದು ಇದು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರು.
     ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಂಜು ಜೂನ್ನೂರ್, ತಾಲೂಕಾ ಸಿ ಡಿ ಪಿ ಓ ಅರುಣಕುಮಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.
     ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ ಕಾಂಗ್ರೆಸ್ ಮಾತನಾಡಿ ಎರಡೂವರೆ  ವರ್ಷಗಳ ಹಿಂದೆ  ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರು, ಮಧ್ಯಮ ವರ್ಗದ ಜನರಿಗೆ ಪ್ರಯೋಜನ ಆಗಿದೆ ಎಂದರು.
    ಕಾರ್ಯಕ್ರಮದಲ್ಲಿ  ಗ್ರಾ ಪಂ ಅಧ್ಯಕ್ಷ ಶ್ರೀಮತಿ ಭಾರತಿ ತಿಗಡಿ, ಉಪಾಧ್ಯಕ್ಷ ಕಾಶಿಮ್ ಜಮಾದಾರ, ಭೀಮಸಿ ಹುಲಮನಿ, ಚಂದ್ರಯ್ಯ ಹಿರೇಮಠ, ರಾಜು ಹಣ್ಣಿಕೇರಿ, ಪಿ ಡಿ ಓ ಶ್ರೀಮತಿ ಸವಿತಾ ಹಾಲಹಳ್ಳಿ , ವೀರಭದ್ರಯ್ಯ ಹಿರೇಮಠ, ಮಹಾವೀರ ಹಣ್ಣಿಕೇರಿ, ಮಂಜುನಾಥ ಹುಲಮನಿ, ಸೇರಿದಂತೆ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕ ಸದಸ್ಯರು, ಗ್ರಾ ಪಂ ಸದಸ್ಯರು, ಕಾಂಗ್ರೆಸ್ ಮುಖಂಡರು, ಅನೇಕ ಪಂಚ ಗ್ಯಾರಂಟಿ ಪಲಾನುಭವಿಗಳು, ಮಹಿಳೆಯರು, ಕಾಂಗ್ರೆಸ್ ಕಾರ್ಯಕರ್ತರು, ಪಂಚಾಯತ ಸಿಬ್ಬಂದಿ ಪಂಚ ಗ್ಯಾರಂಟಿ ಅಧಿಕಾರಿಗಳು ಭಾಗವಹಿಸಿದ್ದರು. ಪತ್ರಕರ್ತ ಮಹಾಂತೇಶ Export ಕಾರ್ಯಕ್ರಮ ನಿರೂಪಿಸಿದರು.
WhatsApp Group Join Now
Telegram Group Join Now
Share This Article