ಕುಕನೂರು :ವ್ಯಾಪಾರಸ್ಥರಿಂದ ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಜಾಗೃತಿ ಅವಶ್ಯವಾಗಿ ಹೊಂದಿರಬೇಕು ಎಂದು ಯಲಬುರ್ಗಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಂಗಸ್ವಾಮಿ ಜೆ. ಹೇಳಿದರು.
ಅವರು ತಾಲ್ಲೂಕಿನ ಬಳಗೇರಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಯಲಬುರ್ಗಾ ತಾಲ್ಲೂಕ ಕಾನೂನು ಸೇವಾ ಸಮಿತಿ, ಯಲಬುರ್ಗಾ ನ್ಯಾಯವಾದಿಗ ಸಂಘ, ಕುಕನೂರು/ಯಲಬುರ್ಗಾ ಕಂದಾಯ ಇಲಾಖೆ, ತಾಲ್ಲೂಕ ಪಂಚಾಯತಿ, ಪೋಲಿಸ್ ಇಲಾಖೆ, ಅಭಿಯೋಜನಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಕೊಂಡ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಸಸಿ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗ್ರಾಹಕರು ಯಾವುದೇ ವಸ್ತುಗಳ ಖರೀದಿಗೂ ಮುನ್ನ ಅವುಗಳ ಸಾಧಕ, ಭಾದಕಗಳ ಬಗ್ಗೆ ಹಾಗೂ ದರ ಸೇರಿದಂತೆ ಅವುಗಳು ತಯಾರು ಮತ್ತು ನಿಗದಿತ ದಿನಾಂಕಗಳ ಬಗ್ಗೆ ಮಾಹಿತಿ ಪಡೆದು, ವಸ್ತುಗಳಿಗೆ ಕಡ್ಡಾಯವಾಗಿ ಅಂಗಡಿಗಳ ಹೆಸರಿನ ರಸೀದಿಗಳ ಮೇಲೆ ವಸ್ತುಗಳನ್ನು ಖರೀದಿಸಬೇಕು ಎಂದು ಹೇಳಿದರು.
ಪ್ಯಾಕೆಟ್ ಉತ್ಪನ್ನಗಳನ್ನು ಖರೀದಿಸುವಾಗ ಬಹಳ ಎಚ್ಚರಿಕೆ ಅಗತ್ಯವಾಗಿದ್ದು, ಮೇಲಿನ ಬಣ್ಣಗಳಿಗೆ ಮೋಸ ಹೋಗಬಾರದು, ಗ್ರಾಹಕರು ಪ್ಯಾಕೆಟ್ ಉತ್ಪನ್ನಗಳಿಗಿಂತ ನೈಸರ್ಗಿಕ ಉತ್ಪನ್ನಗಳನ್ನು ಖರೀದಿಸುವುದು ಸೂಕ್ತವಾದದ್ದು ಎಂದು ಸಲಹೆ ನೀಡಿದರು.
ಅಂಗವೈಕಲ್ಯತೆ ಹೊಂದಿದವರಿಗೆ ಕುಚೇಷ್ಟೆ ಮಾಡದೇ ಅವರ ಬಗ್ಗೆ ಸಮಾನ ಮನೋಭಾವ ಹೊಂದುವ ಮೂಲಕ ಅವರಿಗೆ ಇನ್ನೂ ಮುಂದೆ ಅಂಗವೀಕಲ ಎನ್ನುವ ಬದಲು ದಿವ್ಯಾಂಗರು ಎಂದು ಕರೆಯಬೇಕು ಎಂದು ತಿಳಿಸಿದರು.
ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಇಂದಿನ ಪೀಳಿಗೆಯವರಲ್ಲಿ ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದ್ದು, ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ತಲೆ ತಗ್ಗಿಸಿ ಮೊಬೈಲ್ ನೋಡದೇ ತಲೆ ತಗ್ಗಿಸಿ ಪುಸ್ತಕ ನೋಡಿದಲ್ಲಿ ಸಮಾಜ ನಿಮ್ಮನ್ನು ತಲೆ ಎತ್ತಿ ನೋಡುವಂತೆ ಪುಸ್ತಕ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಂತರ ವಕೀಲರ ಸಂಘದ ಉಪಾಧ್ಯಕ್ಷರಾದ ಎಮ್. ಎಸ್ ನಾಯ್ಕರ್ ಮಾತನಾಡಿ ಯಾವುದೇ ವಸ್ತುಗಳನ್ನು ತೆಗೆದುಕೊಳ್ಳಬೇಕಾದರೇ ಕಡ್ಡಾಯವಾಗಿ ಬಿಲ್ ಪಡೆದು ವಸ್ತುಗಳನ್ನು ಖರೀದಿಸಿ.
ನಿಮಗೆ ಕೊಟ್ಟ ವಸ್ತುಗಳ ಮೇಲೆ ಗ್ಯಾರೆಂಟಿ, ವಾರಂಟಿಯ ಬಗ್ಗೆ ಖಚಿತ ಪಡಿಸಿಕೊಂಡು ಬಿಲ್ ಪಡೆದು ಖರೀದಿಸಿ ಇದರಿಂದ ಯಾವುದೇ ಸಮಯದಲ್ಲಿ ಮಾಹಿತಿ ಒದಗಿಸಲು ಸಹಕಾರಿಯಾಗುತ್ತದೆ ಎಂದರು.
ರೈತರು ಕಡ್ಡಾಯವಾಗಿ ಬೆಳೆ ವಿಮೆ ತುಂಬಿದ ರಸೀದಿ, ಫೋಟೋಗಳನ್ನು ಇಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಬೆಳೆ ವಿಮೆ ತುಂಬಿದ ಹಣ ಬರುವುದಿಲ್ಲಾ, ನೀವು ಯಾವ ಇಲಾಖೆಗೆ ವಿಮೆ ತುಂಬಿರುತ್ತಿರಿ ಅದರ ರಸೀದಿ, ಫೋಟೋ ಇಟ್ಟುಕೊಳ್ಳಬೇಕು. ಬೆಳೆ ವಿಮೆ ಪರಿಹಾರ ಬರದೇ ಇದ್ದ ಸಮಯದಲ್ಲಿ ರೈತರು ಗ್ರಾಹಕರ ವೇದಿಕೆಗೆ ಹೋಗಲು ಅನೂಕೂಲವಾಗುತ್ತದೆ ಎಂದು ತೀಳಿಸಿದರು.
ಆಸ್ಪತ್ರೆ, ವಾಣಿಜ್ಯ ಮಳಿಗೆ ಸೇರಿದಂತೆ ಇತರೆಡೆ ರಸೀದ ಪಡೆದ ವ್ಯಾಪಾರ ನಡೆಸಬೇಕು ಅಂಗಡಿಗಳಲ್ಲಿ ಮೋಸವಾದಲ್ಲಿ, ನೀವು ಖರೀದಿಸಿದ ರಸೀದಿ ಇದ್ದಲ್ಲಿ ನಿಮಗೆ ಗ್ರಾಹಕರ ವೇದಿಕೆಯಿಂದ ತಮಗೆ ಪರಿಹಾರ ದೊರಕಲಿದೆ ಎಂದರು.
ನಂತರ ಮಲ್ಲನಗೌಡ್ರ ವಕೀಲರು ಮಾತನಿಡಿ ರೈತರಿಗೆ, ಸಾರ್ವಜನಿಕರಿಗೆ, ಗ್ರಾಹಕರಿಗೆ ಯಾವುದೇ ತೊಂದರೆಯಾದಲ್ಲಿ ಕಾನೂನು ವ್ಯವಸ್ಥೆಯ ಮೂಲಕ ನ್ಯಾಯ ಒದಗಿಸಲಾಗುವುದು.
ಕಾನೂನು ಬಗ್ಗೆ ತಿಳಿದುಕೊಂಡಾಗ 7600ಕಾನೂನುಗಳಿದ್ದು ಅದರ ಮಾಹಿತಿ ಮುಖ್ಯ.
ಸಮಾಜದಲ್ಲಿ ನಾವು ಬದಕಲು ಕಾನೂನು ಜ್ಞಾನ ಅವಶ್ಯಕತೆ ಇದೆ ಎಂದು ತಿಳಿಸಿದರು. ಸಮಾಜದಲ್ಲಿ ವಿಕಲಚೇತನರನ್ನು ಸಮಾನ ಭಾವನೆಯಿಂದ ಕಾಣಬೇಕು ಜೊತೆಗೆ ವಿದ್ಯಾರ್ಥಿಗಳು ಸಾಧನೆಯ ಬಗ್ಗೆ ಗುರಿ ಹೊಂದಿದವರಾಗಿರಬೇಕು ಇಲ್ಲಿನ ವಿದ್ಯಾರ್ಥಿಗಳು ನಾಗರಿಕರು ಪ್ರಜ್ಞಾವಂತರಾಗಿ ಜೀವನ ಸಾಗಿಸಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿಡಿಪಿಒ ಬೆಟದಪ್ಪ ಮಾಳೆಕೋಪ್ಪ ಮಾತನಾಡಿ ಗ್ರಾಹಕರು ಜಿಎಸ್ ಟಿ ಮೂಲಕ ವಸ್ತುಗಳನ್ನು ಖರೀದಿಸಬೇಕು ಅಂದಾಗ ಮಾತ್ರ ತಮಗೆ ವಸ್ತುಗಳ ನೈಜ ಬೆಲೆ ಹಾಗೂ ಅದರ ರೂಪ ತಿಳಿದುಕೊಳ್ಳುವ ಜೊತೆಗೆ ನಮಗೆ ಅದರಿಂದ ಆಗುವ ಅನೂಕೂಲ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದರು.
ವಿಕಲಚೇತನರಿಗೆ ಅಪಹಾಸ್ಯದಿಂದ ಕರೆಯುವ ಬದಲು ವಿಕಲಚೇತನರಿಗೆ ದಿವ್ಯಾಂಗರು ಎಂದು ಕರೆಯಬೇಕು ಎಂದು ಸರಕಾರ ಅಧಿಸೂಚನೆ ನೀಡಿದೆ. 1992ರಲ್ಲಿ ಸಮಾನತೆ ಹಾಗೂ ಉದ್ಯೋಗಗಳಲ್ಲಿ ಶೇ.5ರಷ್ಷು ಮೀಸಲಾತಿ ನೀಡಬೇಕು ಎಂದರು.
ಈ ವೇಳೆ ಸಹಾಯಕ ಸರಕಾರಿ ಅಭಿಯೋಜಕರಾದ ರವಿ ಕುಮಾರ ವಕೀಲರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೌರಮ್ಮ ಕುರ್ತಕೋಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಕೀಲರಾದ ಜಗದೀಶ ಹೂಗಾರ, ಮಂಗಳೂರು ತಹಶೀಲ್ದಾರ ಬಸವರಾಜ ಕೆ, ಗ್ರಾಮ ಪಂಚಾಯತಿ ಪಿಡಿಒ ಮಹೇಶಗೌಡ್, ಎಸ್ಎಸ್ಐ ವೆಂಕಟೇಶ, ಗ್ರಾಮ ಪಂಚಾಯತಿ ಸದಸ್ಯರಾದ ಹನುಮಕ್ಕ ಗೌಡ್ರ, ನಿಂಗಪ್ಪ ಮಾಳೇಕೊಪ್ಪ, ಶರಣಪ್ಪ ಕುಕನೂರು, ಪ್ರೌಢಶಾಲೆ ಮುಖ್ಯಶಿಕ್ಷಕರಾದ ವೀರಭದ್ರಪ್ಪ, ವಿಕಲಚೇತನರ ಸಂಯೋಜಕ ಈರಪ್ಪ ಕರೇಕುರಿ ಸೇರಿದಂತೆ ಸ್ಥಳೀಯ ಪ್ರೌಢಶಾಲೆ ವಿದ್ಯಾರ್ಥಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯ ಕರ್ತೆಯರು, ಗ್ರಾಮಸ್ಥರು ಹಿರಿಯರು, ಮುಖಂಡರು ಇದ್ದರು.
ಕಾರ್ಯಕ್ರಮದಲ್ಲಿ ಪಿಡಿಒ ಮಹೇಶಗೌಡ್ರ ಸ್ವಾಗತಿಸಿ ವಂದಿಸಿದರು.
ವ್ಯಾಪಾರಿಗಳಿಂದ ಕೊಂಡುಕೊಳ್ಳುವ ಗ್ರಾಹಕರಿಗೆ ಸರಕಾರ 1986ರಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆ ಅನುಷ್ಠಾನಗೊಳಿಸಿತು. ನಂತರ 2019ರಲ್ಲಿ ಅನೇಕ ತಿದ್ದುಪಡೆಯೊಂದಿಗೆ ಗ್ರಾಹಕನ ಹಿತ ಕಾಪಾಡಲು ಮತ್ತು ಗ್ರಾಹಕನ ಹಣಕ್ಕೆ ಮೌಲ್ಯ ಸಿಗಬೇಕು, ಮೋಸ, ವಂಚನೆ, ಅನ್ಯಾಯಗಳಿಗೆ ಕೊನೆ ಹಾಡಿ ಗ್ರಾಹಕನಿಗೆ ಆಗುವ ದಬ್ಬಾಳಿಕೆ ದೌರ್ಜನ್ಯ ನಿಲ್ಲಿಸುವ ಉದ್ದೇಶದಿಂದ ಭಾರತ ಸರಕಾರ ಮತ್ತು ಆಯಾ ರಾಜ್ಯ ಸರಕಾರಗಳು ಗ್ರಾಹಕನ ಹಿತ ರಕ್ಷಣೆ ಮಾಡಲು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಗ್ರಾಹಕರ ವೇದಿಕೆ ನಿರ್ಮಾಣ ಮಾಡಿದೆ ಎಂದರು.
ಗರಿಷ್ಠ 5ಲಕ್ಷ ರೂಪಾಯಿವರೆಗೆ ಯಾವುದೇ ರೀತಿಯ ಪ್ರಕರಣ ದಾಖಲಿಸಬೇಕಾದರೇ ಗ್ರಾಹಕರಿಗೆ ಯಾವುದೇ ಶುಲ್ಖವಿಲ್ಲಾ, ಯಾವುದೇ ಮಾರಾಟಗಾರನಿಂದ ತೊಂದರೆಯಾಗಿ 5ಲಕ್ಷಕ್ಕಿಂತ ಹೆಚ್ಚು ಪರಿಹಾರ ನಿರೀಕ್ಷೆ ಮಾಡುವದಿದ್ದರೇ 1ಕೋಟಿಯವರೆಗೆ ಪರಿಹಾರ ಬೇಕಾದರೇ ಅದರ ಕುರಿತು ರಾಜ್ಯಮಟ್ಟದ ಗ್ರಾಹಕರ ವೇದಿಕೆಯಲ್ಲಿ ವ್ಯಾಜ್ಯ ಹೂಡಬಹುದು ಎಂದು ಮನವರಿಕೆ ಮಾಡಿದರು.
ಯಾವುದೇ ವಸ್ತುಗಳನ್ನು ಎಮ್ ಆರ್ ಪಿ ಗಿಂತ ಹೆಚ್ಚಿನ ದರದಲ್ಲಿ ವ್ಯಾಪಾರಸ್ಥ ಗ್ರಾಹಕರಿಗೆ ಹಣ ವಸೂಲು ಮಾಡಿದಲ್ಲಿ ಗ್ರಾಹಕರ ವೇದಿಕೆಯಲ್ಲಿ ದೂರು ಸಲ್ಲಿಸಿ, ನಿಮಗೆ ಪರಿಹಾರ ಕಂಡುಕೊಳ್ಳಿ ಎಂದು ತಿಳಿಸಿದರು.


