ಮಹಾಲಿಂಗಪುರ ಪುರಸಭೆಗೆ ಬೇಟಿ ನೀಡಿ ಜನರ ಸಮಸ್ಯೆ ಸ್ಪಂದಿಸಿದ ಶಾಸಕ
ಮಹಾಲಿಂಗಪುರ : ನಿತ್ಯವೂ ಎಲ್ಲ ವಾರ್ಡಗಳಲ್ಲಿನ ಮೂಲ ಭೂತ ಸೌಕರ್ಯಗಳು ಎಲ್ಲರಿಗೂ ತಲುಪುತ್ತಿವೇಯೇ ಎಂದು ಪುರಸಭೆಯ ೨-೩ ಸಿಬ್ಬಂದಿಗಳನ್ನು ವಾರ್ಡಗಳಲ್ಲಿ ತಿರುಗಾಡಿಸಿ ಗಮನ ಹರಿಸಬೇಕು ಎಂದು ತೇರದಾಳ ಮತ ಕ್ಷೇತ್ರ ಶಾಸಕರಾದ ಸಿದ್ದು ಸವದಿ ಪುರಸಭೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.
ಬುಧವಾರ ಮುಂಜಾನೆ ಪುರಸಭೆಯಲ್ಲಿ ಎಲ್ಲ ಸಿಬ್ಬಂದಿಗಳ ಸಭೆ ಕರೆದು ಮಾತನಾಡಿದ ಅವರು ಪುರಸಭೆಯ ಎಲ್ಲ ಸಿಬ್ಬಂದಿಗಳು ನೀವು ನಾನು ಹೇಳಿದಾಗ ಮಾತ್ರ ನಿಮ್ಮ ಕೆಲಸಗಳನ್ನು ಮಾಡದೆ ನಿತ್ಯವು ನಿಮ್ಮ ನಿಮ್ಮ ಕರ್ತವ್ಯೆಗಳನ್ನು ಸರಿಯಾಗಿ ಮಾಡಿದರೆ ಸಾಕು ಪಟ್ಟಣ ಅಂದವಾಗಿ ಮತ್ತು ಸ್ವಚ್ಚವಾಗಿ ಕಾಣುವುದರಲ್ಲಿ ಯಾವ ಸಂದೇಹವಿಲ್ಲ. ಸಾರ್ವಜನಿಕರು ಇಲ್ಲಿ ಬಂದು ನಮಗೆ ನೀರು ಬಂದಿಲ್ಲ, ವಾರ್ಡಿನಲ್ಲಿ ವಿದ್ಯುತ ಇಲ್ಲ. ಗಟಾರ ಸ್ವಚ್ಚವಾಗಿಲ್ಲ ಎಂದು ಹೇಳುವ ಮೋದಲೆ ನೀವು ನಿತ್ಯವು ೨-೩ ವಾರ್ಡಗಳನ್ನು ತಿರುಗಾಡಿ ಅಲ್ಲಿನ ಗಟಾರ ಸ್ವಚ್ಚತೆ, ವಿದ್ಯುತ ದೀಪ, ನೀರೀನ ಸರಿಯಾದ ಪೂರೈಕೆಯಾಗುತ್ತಿದೆಯೇ, ಇಲ್ಲವಾದಲ್ಲಿ ಕೂಡಲೆ ಅವುಗಳನ್ನು ದುರಸ್ಥೀ ಮಾಡಿ ಸಾರ್ವಜನಿಕರಿಗೆ ಸರಿಯಾದ ಸಮಯದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಿಮ್ಮ ಕೆಲಸ, ಇದಕ್ಕೆ ತಪ್ಪಿದವರ ವಿರುದ್ದ ಕ್ರಮ ಜರುಗಿಸಲಾಗುವುದು.
ಅಲ್ಲದೆ ಒಂದು ವ?ಗಳ ಕಾಲ ಯಾವ ಯಾವ ಸಿಬ್ಬಂದಿಗಳು ಸರಿಯಾಗಿ ಚಾಚುತಪ್ಪದೆ ಕೆಲಸ ಮಾಡುತ್ತಾರೋ ಅಂತವರನ್ನು ಸನ್ಮಾನ ಮಾಡಿ ಗೌರವಿಸಿರಿ. ಮತ್ತು ೨೦ ವಾರ್ಡಿ ಮಹಿಳೆಯರು ಇಲ್ಲಿಗೆ ಬಂದು ಹೇಳಿದ ಹಾಗೆ ಕೂಡಲೇ ಅವರ ವಾರ್ಡಿಗೆ ಹೋಗಿ ಅವರಿಗೆ ನೀರಿನ ವ್ಯೆವಸ್ಥೆ ಮಾಡಿರಿ, ಅಲ್ಲದೆ ೨೪ * ೭ ದವರು ಅಲ್ಲಲ್ಲಿ ಪೈಪಗಳ ಅಳವಡಿಕೆ ಸಲುವಾಗಿ ರಸ್ತೆ ಅಗೆದು ಅಲ್ಲಿನ ನಮ್ಮ ಪೈಪಗಳನ್ನು ಕಟ್ಟ ಮಾಡಿದರೆ, ಅಥವಾ ಕೆಡಿಸಿದರೆ, ಮತ್ತು ಗುತ್ತಿಗೆದಾರರು ರಸ್ತೆ ಮತ್ತು ಇನ್ನಿತರ ಕಾiಗಾರಿಗಳನ್ನು ಮಾಡುವಾಗ ನಮ್ಮ ಪುರಸಭೆ ನೀರಿನ ಪೈಪ ಕೆಡಿಸಿದ್ದರೆ ಅವುಗಳನ್ನು ಅವರಿಂದೆ ರಿಪೇರಿ ಮಾಡಿಸಿರಿ ನಮ್ಮ ಪುರಸಭೆ ನೀರಿನ ಖರ್ಚಿನಲ್ಲಿ ಸಮಾನು ತಂದು ರಿಪೇರಿ ಮಾಡಿಸಕೂಡದೆ, ಅಲ್ಲದೆ ೧೦-೧೫ ಮನೆಗಳಿಗೆ ಒಂದುರಂತೆ ಮಾತ್ರ ಸಾರ್ವಜನಿಕ ನಳಗಳನ್ನು ಕೊಡಿರಿ, ಹೆಚ್ಚು ಸಾರ್ವಜನಿಕ ನಳಗಳ ಜೋಡನೆಯಿಂದ ಪುರಸಭೆಗೆ ನ?ವಾಗುತ್ತದೆ. ಸಾದ್ಯವಾದ? ಎಲ್ಲ ಕಡೆಗಳಲ್ಲಿ ಎಲ್.ಇ.ಡಿ ದೀಪಗಳನ್ನು ಬಳಸಿರಿ. ಒಮ್ಮಲೆ ಎಲ್ಲ ಕೆಲಸಗಳು ಆಗದಿದ್ದರು. ಹಂತಹಂತವಾಗಿ ಕೆಲಸ ಮಾಡಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಮುಖಂಡರಾದ, ಜಿ.ಎಸ್ ಗೊಂಬಿ, ಶಿವಾನಂದ ಅಂಗಡಿ, ಮಲ್ಲಪ್ಪ ದಲಾಲ,ಮಹೇಶ ಜಿಡ್ಡಿಮನಿ,ಬಸವರಾಜ ಮಡಿವಾಳ,ಮತ್ತು ಪುರಸಭೆಯ ಮುಖ್ಯಾಧಿಕಾರಿ ನಾಮದೇವ ಲಮಾಣಿ, ಎಸ್ ಎನ್ ಪಾಟೀಲ, ಪಿ ವೈ ಸೊನ್ನದ,ಚಿದಾನಂದ ಮಠಪತಿ, ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.


