ಹುನಗುಂದ; ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಪ್ರತಿ ವರ್ಷದಂತೆ ಈ ವರ್ಷವೂ ಅಕ್ಷರದವ್ವ ಸವಿತ್ರಿಬಾಯಿ ಪುಲೆ ೧೯೫ನೇ ಜಯಂತಿ ಅಂಗವಾಗಿ ಕೊಡಮಾಡುವ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ರಾಜ್ಯಮಟ್ಟದ ಪ್ರಶಸ್ತಿಗೆ ನಗರದ ವಿಮ ಪದವಿ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಗಿ ಡಾ. ನಾಗರತ್ನಾ ಅಶೋಕ ಬಾವಿಕಟ್ಟಿ ಆಯ್ಕೆಯಾಗಿದ್ದಾರೆ. ವಿಜಯಪುರದ ರಂಗಮಂದಿರದಲ್ಲಿ ೨೦೨೬ ಜನೇವರಿ ೩ರಂದು ನಡೆಯುವ ಸಮಾರಂಭದಲ್ಲಿ ಚೈತನ್ನಶೀಲ ಬರವಣಿಗೆಯಿಂದ ನಾಡಿನಾದ್ಯಂತ ಸಾಹಿತ್ಯ ಕ್ಷೇತ್ರಕ್ಕೆ ಹೆಸರಾದ ಡಾ. ನಾಗರತ್ನಾ ಬಾವಿಕಟ್ಟಿ ಅಕ್ಷರದವ್ವ ಪ್ರಶಸ್ತಿ ಪಡೆಲಿದ್ದಾರೆಂದು ಪ್ರಕಟಣೆ ತಿಳಿಸಿದೆ.


