ಹನೂರು,ಏಪ್ರಿಲ್ 10:: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ಜಾನುವಾರುಗಳಿಗೆ ಮೆವು ಸಿಗದೆ ತೊಂದರೆ ಪಡುವಂತಾಗಿದೆ ಈ ಕೂಡಲೆ ತಾಲ್ಲೂಕು ಆಡಳಿತ ಮಂಡಳಿಯು ಸಕಾಲಕ್ಕೆ ಮೆವುಗಳನ್ನು ಒದಗಿಸಿ ಎಲ್ಲಾ ಜಾನುವಾರುಗಳನ್ನು ಕಾಪಾಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಅಂಜಾದ್ ಖಾನ್ ತಿಳಿಸಿದರು .
ತಹಶಿಲ್ದಾರರ ಕಛೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ಗಳಾದ ಸೂಳೇರಿಪಾಳ್ಯ, ಹೂಗ್ಯಂ, ಮಾರ್ಟಳ್ಳಿ, ಅಜ್ಜೀಪುರ, ಮೀಣ್ಯಂ, ದಿನ್ನಹಳ್ಳಿ,ಪೊನ್ನಾಚಿ, ಕುರಟ್ಟಿ ಹೊಸೂರು, ಸೇರಿದಂತೆ ಇನ್ನು ಮುಂತಾದ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡನ್ನೆ ಹೆಚ್ಚಾಗಿ ಆಶ್ರಯಿಸಿರುವ ಜಾನುವಾರುಗಳಿಗೆ ಮಳೆಯಿಲ್ಲದೆ ಮೇವು ಸಿಗದ ಕಾರಣ ಪ್ರಾಣಿಗಳು ತುಂಬಾ ಸೊರಗಿವೆ ಅದ್ದರಿಂದ ಮೇಲ್ಕಂಡ ಪಂಚಾಯತಿಗಳಿಗೆ ತಾಲ್ಲೂಕು ಆಡಳಿತವು ಮೇವು ಒದಗಿಸುವ ಕಾರ್ಯವನ್ನು ಗೋ ಶಾಲೆಗಳ ನಿರ್ಮಾಣ ಮಾಡುವುದರ ಮೂಲಕ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹನೂರು ತಾಲೂಕಿನ ತಹಸೀಲ್ದಾರ್ ಗುರುಪ್ರಸಾದ್ ರಿಗೆ ಮನವಿ ಮಾಡಿದರು.
ಇದೇ ಸಮಯದಲ್ಲಿ ಹನೂರು ಘಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜು ಮಾತನಾಡಿ ಜಾನುವಾರುಗಳಿಗೆ ಮೇವು ಇಲ್ಲದೆ ತುಂಬಾ ಸೊರಗಿದಂತೆ ಕಾಣುತ್ತವೆ ಆದ್ದರಿಂದ ತಾವು ದಯಮಾಡಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೋಶಾಲೆಗಳನ್ನು ಪ್ರಾರಂಭಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಸದಸ್ಯರುಗಳು ಒಳಗೊಂಡಂತೆ ಗ್ರಾಮಸ್ಥರು ಹಾಜರಿದ್ದರು.