ಸಾರ್ವಜನಿಕರು ಪಂಚ ಗ್ಯಾರಂಟಿಯ ಸದುಪಯೋಗ ಪಡೆದುಕೊಳ್ಳಿ :ಬಾಬಾಸಾಹೇಬ ಪಾಟೀಲ 

Hasiru Kranti
ಸಾರ್ವಜನಿಕರು ಪಂಚ ಗ್ಯಾರಂಟಿಯ ಸದುಪಯೋಗ ಪಡೆದುಕೊಳ್ಳಿ :ಬಾಬಾಸಾಹೇಬ ಪಾಟೀಲ 
WhatsApp Group Join Now
Telegram Group Join Now
ನೇಸರಗಿ.ಕರ್ನಾಟಕ ರಾಜ್ಯದಲ್ಲಿ 2 ವರ್ಷ 7 ತಿಂಗಳ ತಿಂಗಳ ಹಿಂದೆ ಕಾಂಗ್ರೆಸ್  ಅಧಿಕಾರಕ್ಕೆ ಬಂದ ನಂತರ  ರಾಜ್ಯದ ಜನತೆಗೆ ನೀಡಿದ ಪಂಚ ಗ್ಯಾರಂಟಿಗಳ ಅನುಷ್ಠಾನವನ್ನು ಅಧಿಕಾರಕ್ಕೆ ಬಂದ 5 ತಿಂಗಳಲ್ಲಿ 5 ಗ್ಯಾರಂಟಿಗಳಾದ ಗೃಹಲಕ್ಷ್ಮಿ,   ಶಕ್ತಿ, ಯುವ ನಿಧಿ, ಭಾಗ್ಯ ಜ್ಯೋತಿ, ಅನ್ನ ಭಾಗ್ಯ  ಯೋಜನೆಗಳ ಫಲವನ್ನು ಪಡೆದು ತಮ್ಮ ಸಹೋದರರ, ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಿ ಅವರ ಬೆಳವಣಿಗೆಗೆ ಖರ್ಚು ಮಾಡಿ ಅವರ ಬೆಳವಣಿಗೆಗೆ ವಿನಿಯೋಗ ಮಾಡಿ, ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
    ಅವರು ಮಂಗಳವಾರದಂದು  ಗ್ರಾಮದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪಂಚ ಗ್ಯಾರಂಟಿಗಳ ಅನುಷ್ಠಾನ ಪಲಾನುಭವಿಗಳ ಕುಂದು ಕೊರತೆಗಳ ಸಭೆಯನ್ನು ಉದ್ದೇಸಿಸಿ ಮಾತನಾಡಿ ಆದಷ್ಟು ಮಹಿಳೆಯರು ಬಂಗಾರ, ಬೆಳ್ಳಿ, ಆಭರಣ ತೆಗೆದುಕೊಳ್ಳುವದಕ್ಕಿಂತ ಸಹೋದರರ, ಮಕ್ಕಳ ಶಿಕ್ಷಣಕ್ಕೆ, ಮಕ್ಕಳ ಉದ್ಯೋಗಕ್ಕೆ, ಸ್ವ ಉದ್ಯೋಗಕ್ಕೆ ಸದುಪಯೋಗ ಪಡಿಸಿಕೊಳ್ಳಿ, ಉಳಿದ 4% ಪಲಾನುಭವಿಗಳ ಪಂಚ ಗ್ಯಾರಂಟಿ ಒದಗಿಸಲು 50 ದಿನಗಳಲ್ಲಿ ಕಾರ್ಯ ಮಾಡಲಾಗುವದೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
     ಪಂಚ ಗ್ಯಾರಂಟಿ ಅನುಷ್ಠಾನ ಯೋಜನೆಯ ಬೈಲಹೊಂಗಲ ತಾಲೂಕಾ ಅಧ್ಯಕ್ಷ ಡಾ. ಮಹಾಂತೇಶ ಕಳ್ಳಿಬಡ್ಡಿ ಮಾತನಾಡಿ ನೇಸರಗಿ ಗ್ರಾಮದಲ್ಲಿ 1216 ಪಲಾನುಭವಿಗಳು  ಪಂಚಗ್ಯಾರಂಟಿ  ಯೋಜನೆಯ ಲಾಭ ಪಡೆಯುತ್ತಿದ್ದು, ಪಲಾನುಭವಿಗಳಿಗೆ  ಯಾವುದೇ ರೀತಿಯ ಸಮಸ್ಯೆ ಇದ್ದರೆ ಇಲ್ಲಿಯೇ ಇರುವ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹರಿಸಿಕೊಳ್ಳಿ, ಶಕ್ತಿ ಯೋಜನೆಯಡಿಯಲ್ಲಿ ಎಲ್ಲ ದೇವಸ್ಥಾನ  ನೋಡಿದ್ದೀರಾ, ಭಾಗ್ಯ ಜ್ಯೋತಿ ಫಲ, ಯುವ ನಿಧಿ,ಅನ್ನ ಭಾಗ್ಯ, ಗೃಹಲಕ್ಷ್ಮಿ ಯೋಜನೆ ಕಾಂಗ್ರೇಸ್ ಸರ್ಕಾರದ ಕೊಡುಗೆ ಆಗಿದೆ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುತಿದ್ದಾರೆ ಎಂದರು.
    ಪಂಚ ಗ್ಯಾರಂಟಿ ಯೋಜನೆಗಳ ಕುಳಿತು ತಾಲೂಕು ಅಧಿಕಾರಿ ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಂಜು ಜೂನ್ನೂರ್, ತಾಲೂಕಾ ಸಿ ಡಿ ಪಿ ಓ ಅರುಣಕುಮಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗೂ ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ ಕಾಂಗ್ರೆಸ್ ತಂದ ಯೋಜನೆಗಳಿಂದ ಇಂದು ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.
    ಕಾರ್ಯಕ್ರಮದಲ್ಲಿ ಗ್ರಾ ಪಂ ಅಧ್ಯಕ್ಷ ವೀರಭದ್ರ ಚೋಭಾರಿ, ಮಾಜಿ ಎ ಪಿ ಎಮ್ ಸಿ ಅಧ್ಯಕ್ಷ ಬರಮಣ್ಣ ಸತ್ತೇನ್ನವರ, ಬಸವರಾಜ ಚಿಕ್ಕನಗೌಡರ, ಕಾಶಿಮ್ ಜಮಾದಾರ,ನಿಂಗಪ್ಪ ತಳವಾರ,ಸುರೇಶ ಅಗಸಿಮನಿ, ನಜೀರ್ ಅಹಮ್ಮದ ತಹಶೀಲ್ದಾರ,ಚನಗೌಡ ಪಾಟೀಲ, ಮಹಾದೇವ ನಾಸಿ,ಯಮನಪ್ಪ ಪೂಜೇರಿ, ಸೋಮಪ್ಪ ಸತ್ತೇನ್ನವರ, ಪ್ರಕಾಶ ತೋಟಗಿ,ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕ ಸದಸ್ಯರು, ಗ್ರಾ ಪಂ ಸದಸ್ಯರು, ಕಾಂಗ್ರೆಸ್ ಮುಖಂಡರು, ಅನೇಕ ಪಂಚ ಗ್ಯಾರಂಟಿ ಪಲಾನುಭವಿಗಳು, ಮಹಿಳೆಯರು, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article