ಸತೀಶ ಜಾರಕಿಹೊಳಿ ಫೌಂಡೇಶ ಯುವಕರ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿದೆ : ರಾಹುಲ್ ಜಾರಕಿಹೊಳಿ

Hasiru Kranti
ಸತೀಶ ಜಾರಕಿಹೊಳಿ ಫೌಂಡೇಶ ಯುವಕರ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿದೆ : ರಾಹುಲ್ ಜಾರಕಿಹೊಳಿ
WhatsApp Group Join Now
Telegram Group Join Now
ಯಮಕನಮರಡಿ:- ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿವಹಿಸುವುದರಿಂದ ಭವಿಷ್ಯ ಉಜ್ವಲವಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.
ಹುಕ್ಕೇರಿ ತಾಲೂಕಿನ ಅಲದಾಳ ಗೇಸ್ಟ್ ಹೌಸ್ ನಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ ವತಿಯಿಂದ ಆಯೋಜಿಸಿದ್ದ ದಡ್ಡಿ ಮತ್ತು ಹುನ್ನೂರ ಮಾಸ್ತಿಹೊಳಿ ಕ್ಲಸ್ಟರ್ ಮಟ್ಟದಲ್ಲಿ ಬರುವ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರದರ್ಶನ ಕರ‍್ಯಕ್ರಮದಲ್ಲಿ ಮಾತನಾಡಿದರು.
ತಂದೆ ಸಚಿವರಾದ ಸತೀಶ ಜಾರಕಿಹೊಳಿ ಅವರು ಈ ಭಾಗದ  ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಸಾಗಬೇಕೆಂಬ ಉದ್ದೇಶದಿಂದ ಸತೀಶ ಜಾರಕಿಹೊಳಿ ಫೌಂಡೇಶನಿಂದ ಯುವಕರಿಗೆ ಉಚಿತ ಐಎಎಸ್, ಕೆಎಎಸ್, ಪೊಲೀಸ್, ಆರ್ಮಿ  ತರಬೇತಿ ಸೇರಿದಂತೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿದ್ದು, ಯುವಕರ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕ ದಯಾನಂದ ಪಾಟೀಲ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಎ.ಎಸ್.ಪದ್ಮಣ್ಣವರ, ಗೋವಿಂದ ದೀಕ್ಷಿತ, ಸಿ.ಆರ್.ಪಿ.ಎಸ್.ಎಚ್.ಬೆಟಗೇರಿ, ಮುಖಂಡರಾದ ಬಸವರಾಜ ದೇಸಾಯಿ, ಶರದ ಪ್ರಧಾನ, ಗಣಪತಿ ಕಾಂಬಳೆ, ಅಶೋಕ ತಳವಾರ, ಮಹೇಶ ಗುಮಚಿ, ರಾಮಚಂದ್ರ ಕಮ್ಮಾರ, ಶಿಕ್ಷಕರಾದ ಮಾರುತಿ ನಾರವೇಕರ್ ಹಾಗೂ ಈಶ್ವರ್ ಪಾಳೇಕರ, ಶಿಕ್ಷಕರು ವಿದ್ಯಾರ್ಥಿಗಳು ಈ ಭಾಗದ ಮುಖಂಡರು ಉಪಸ್ಥಿತರಿದ್ದರು. ಪ್ರಾಸ್ತಾವಿಕ ಎಂ.ಸಿ.ಪಾಟೀಲ ಹಾಗೂ ನಿರೂಪಣೆ ಮಹಾಂತೇಶ ಪೂಜೇರಿ ಮಾಡಿದರು.
ಪ್ರೌಢಶಾಲಾ ವಿಭಾಗದ ವಿಜೇತರು:-ದಡ್ಡಿಯ ಎಸ್.ಬಿ.ಎಚ್.ಎಸ್.ಶಾಲೆಯ ವಿದ್ಯಾರ್ಥಿ ಯಶು ಮಾಣಗಾಂವಕರ(ಪ್ರ),ನಾಗನೂರ.ಕೆ.ಎಂ. ಜಿ.ಎಚ್.ಎಸ್.ವಿದ್ಯಾರ್ಥಿ ಪ್ರತಿಕ್ಷಾ ಹಿರೇಮಠ(ದ್ವಿ), ಮಾಸ್ತಿಹೊಳಿ ಜಿ.ಎಚ್.ಎಸ್.ಎಚ್.ಶಾಲೆಯ ವಿದ್ಯಾರ್ಥಿ ಸಹನಾ ಕಮತಿ(ತೃ), ಅತ್ತಿಹಾಳ ಜಿ.ಎಚ್.ಎಸ್.ಶಾಲೆಯ ವಿದ್ಯಾರ್ಥಿ ಸಂದೇಶ ಕಾಂಬಳೆ(ನಾಲ್ಕು),ಮೋದಗಾ ಎಂ.ವಿ.ಶಾಲೆಯ ವಿದ್ಯಾರ್ಥಿ ಈಕಾ ಮುಲ್ಲಾ(ಐದು)ಸ್ಥಾನ ಪಡೆದ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗದ ವಿಜೇತರು:-ಶೆಟ್ಟಿಹಳ್ಳಿಯ ಎಂ.ಎಚ್.ಪಿ.ಎಸ್.ಶಾಲೆಯ ವಿದ್ಯಾರ್ಥಿ ಸಿದ್ದಿ ಕಳವಿಕಟ್ಟಿ(ಪ್ರ),ದಡ್ಡಿ ಕೆ.ಎಚ್.ಪಿ.ಎಸ್.ಶಾಲೆಯ ಸುರ‍್ಶನ ಮಗದುಮ್ಮ(ದ್ವಿ),ಮಣಗುತ್ತಿ ಎಂ.ಎಚ್.ಪಿ.ಎಸ್ ಶಾಲೆಯ ವಿದ್ಯಾರ್ಥಿ ಸೃಷ್ಟಿಕಾ ಜೀಪರಿಪಾಟೀಲ(ತೃ), ಕೋಟ ಎಂ.ಎಚ್.ಪಿ.ಎಸ್ ಶಾಲೆಯ ವಿದ್ಯಾರ್ಥಿ ಆರೋಹಿ ಪ್ರಧಾನ(ನಾಲ್ಕು),ಗುಡಗನಹಟ್ಟಿ ಪಿ.ಕೆ.ಪಿ.ಎಸ್.ಶಾಲೆಯ ವಿದ್ಯಾರ್ಥಿ ಸೌರ‍್ಯ ಹಳ್ಳೂರಿ(ಐದು)ನೆಯ ಸ್ಥಾನ ಪಡೆದ ಈ ಶಾಲೆಗಳು ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
WhatsApp Group Join Now
Telegram Group Join Now
Share This Article