ನೂತನ ಆಗ್ನಿ ಶಾಮಕ ವಾಹನಕ್ಕೆ ಚಾಲನೆ ನೀಡಿದ ಶಾಸಕ ಯಶವಂತರಾಯಗೌಡ ಪಾಟೀಲ

Hasiru Kranti
ನೂತನ ಆಗ್ನಿ ಶಾಮಕ ವಾಹನಕ್ಕೆ ಚಾಲನೆ ನೀಡಿದ ಶಾಸಕ ಯಶವಂತರಾಯಗೌಡ ಪಾಟೀಲ
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;
WhatsApp Group Join Now
Telegram Group Join Now

ಇಂಡಿ: ಕಳೇದ ಕೇಲಕವು ತಿಂಗಳಿಂದ ಹಲವಾರು ಬೆಂಕಿ ಅವಗಡಗಳು ಸಂಭವಿಸಿದ್ದು ಇದರಿಂದ ಅಪಾರ ಪ್ರಮಾಣದ ಕಬ್ಬು ಸುಟ್ಟ ಪ್ರಕರಣಗಳು ಸಾಕಷ್ಟು ಸಂಭವಿಸಿವೆ. ಆಗ್ನಿ ಶಾಮಕ ಠಾಣೆ ಇಂಡಿಯಲ್ಲಿ ಒಂದೇ ಇರುವುದರಿಂದ ಇಂಡಿ-ಚಡಚಣ ಭಾಗದ ಪ್ರದೇಶ ಹೆಚ್ಚಿದ್ದರಿಂದ ಹೆಚ್ಚಿನ ವಾಹನಗಳ ಅವಶ್ಯಕತೆ ಇತ್ತು. ಬೇಡಿಕೆಗೆ ಅನೂಗುಣವಾಗಿ ಈಗ ನೂತನ ವಾಹನ ನೀಡಿದ್ದಾರೆ ಇದಕ್ಕೆ ಸಹಕರಿಸಿದ ಸಚಿವರಿಗೆ ಮುಖ್ಯಮಂತ್ರಿಗಳಿಗೆ ಅಭಿನಂದಿಸುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ನೂತನ ಆಗ್ನಿ ಶಾಮಕ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರು ವರ್ಷ ಪೂರ್ತಿ ರಾತ್ರಿ ಹಗಲು ಎನ್ನದೆ ಬೆಳೆದ ಬೆಳೆ ಕೈಗೆ ಬರುತ್ತದೆ ಎನ್ನುವಾಗಲಿ ಆಕಸ್ಮಿಕವಾಗಿ ಬೆಂಕಿ ತಗುಲಿದರೆ ಏನು ಮಾಡಲು ಸಾಧ್ಯ ಇದರಿಂದ ಸಾಕಷ್ಟು ಪ್ರಮಾಣದ ಹಾನಿ ಸಂಭವಿಸಿ ರೈತರು ಸಾಕಷ್ಟ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ವಿಶಾದ ವ್ಯಕ್ತ ಪಡಿಸಿದ ಅವರು ಈಗ ಇದ್ದ ವಾಹನಗಳಿಂದ ಒಂದೇ ಸಮಯದಲ್ಲಿ ಆಗ್ನಿ ಅವಗಡ ಸಂಭವಿಸಿದ್ದಲ್ಲಿ ಆಗ್ನಿ ಶಾಮಕ ಸಿಬ್ಬಂದಿಗಳಿಗೆ ಏನು ತೊಚದಂತಾಗಿ ಗೊಂದಲವಾಗುತ್ತಿತ್ತು. ಈಗ ತ್ವರಿತವಾಗಿ ಆಗ್ನಿ ನಂದಿಸಲು ನೂತನ ವಾಹನ ನಿಡಿದ್ದದ್ದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಸಂದರ್ಭದಲ್ಲಿ ಇಂಡಿ ಬ್ಲಾಕ್ ಕಾಮಗ್ರೇಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಕಾಮೇಶ ಉಕಲಿ, ಮಲ್ಲನಗೌಡ ಪಾಟೀಲ, ಜೀತಪ್ಪ ಕಲ್ಯಾಣಿ, ಸತ್ಯಪ ಕವಲಗಿ, ನಿವೃತ ಶಿಕ್ಷಕ ಹಿಟ್ನಳ್ಳಿ, ಜೋತಗೊಂಡ, ಧರ್ಮರಾಜ ವಾಲಿಕಾರ, ಮಹಿಬುಬ ಅರಬ, ಮಹೇಶ ಹೊನ್ನಬಿಂದಗಿ, ಪ್ರಭುಗೌಡ ಬಿರಾದಾರ, ಪರಶು ಹತ್ತರಕಿ ಸೇರಿದಂತೆ ಆಗ್ನಿ ಶಾಮಕ ಸಿಬ್ಬಂದಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article