ಮೂಡಲಗಿ : ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರು ದೇಶಕ್ಕೆ ನೀಡಿದಂತ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳು ಅಪಾರವಾಗಿದ್ದು, ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವಾಗಿ ಆಚರಿಸುತ್ತಿದ್ದೇವೆ ಎಂದು ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ್ ಅಡಿಹುಡಿ ಹೇಳಿದರು.
ಮೂಡಲಗಿ ಪಟ್ಟಣದ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಸಭಾ ಭವನದಲ್ಲಿ ಭಾರತ ಸರ್ಕಾರದ ಮೈಭಾರತ ಕೇಂದ್ರ ಬೆಳಗಾವಿ ಹಾಗೂ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಮೂಡಲಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಅಂಗವಾಗಿ ಉತ್ತಮ ಆಡಳಿತದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಹೆಸರು ಅಜರಾಮರ ಎಂದು ಬಣ್ಣಿಸಿದರು. ಬಿಜೆಪಿ ಅರಬಾವಿ ಮಂಡಲದ ಅಧ್ಯಕ್ಷರಾದ ಮಹಾದೇವ ಶೇಕ್ಕಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮೂಡಲಗಿ ತಾಲೂಕಾ ಪ್ರಾದೇಶಿಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಪತ್ತಾರ ಮಾತನಾಡಿ, ರಾಜಕೀಯ ಕ್ಷೇತ್ರದ ದ್ರುವತಾರೆಯಾದ ಅಟಲ್ ಬಿಹಾರಿ ವಾಜಪೇಯಿಯವರು ಕೇವಲ ಮುತ್ಸದ್ದಿ ರಾಜಕಾರಣಿಯ? ಆಗಿರದೆ ಅಪ್ರತಿಮ ವಾಗ್ಮಿ ಹಾಗೂ ಅದ್ಭುತ ಕವಿಯಾಗಿದ್ದರು. ಇಂದಿಗೂ ಆಟಜೀಯವರ ’ಮೇರಿ ಇಕ್ಯಾವನ್ ಕವಿತಾಯೇ’ ಬಹಳ ಪ್ರಸಿದ್ಧ ವಾದ ಕೃತಿಯಾಗಿದೆ. ಅವರ ಸುವರ್ಣ ಚತು?ಥ ರಸ್ತೆ ಯೋಜನೆ, ಸರ್ವ ಶಿಕ್ಷಣ ಅಭಿಯಾನ ಮತ್ತು ಕಾರ್ಗಿಲ್ ವಿಜಯ ದೇಶಕ್ಕೆ ನೀಡಿದ ಕೊಡುಗೆಗಳಾಗಿವೆ ಎಂದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿ ಮಾತನಾಡಿ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಗಳಿಸಿದ್ದ ಅಟಲ್ ಬಿಹಾರಿ ವಾಜಪೇಯಿಯವರು, ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಾಗಿ ಕಾರ್ಯ ನಿರ್ವಹಿಸಿ ನಂತರ ಭಾರತೀಯ ಜನತಾ ಪಕ್ಷದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದರು. ಅವರ ಜೀವನದ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವು ನಡೆಯುತ್ತಿರುವ ಕ್ಷೇತ್ರದ ಮೂಲಕ ಸಮಾಜ ಸೇವೆ ಸಲ್ಲಿಸಬೇಕೆಂದರು.
ಮೂಡಲಗಿ ಗವಿತೋಟ ಶಾಲೆಯ ಶಿಕ್ಷಕರಾದ ಸಂತೋ? ಪಾಟೀಲ್ ಮಾತನಾಡಿ ಪೊಖ್ರಾನ್ ಅಣು ಪರೀಕ್ಷೆ ನಡೆಸುವುದರ ಮೂಲಕ ಭಾರತ ದೇಶವನ್ನು ಪರಮಾಣು ಶಕ್ತಿ ಹೊಂದಿದ ರಾ?ವಾನ್ನಾಗಿ ಮಾಡಿ, ಅಮೆರಿಕದಂತ ಬಲಾಢ್ಯ ರಾ?ಗಳು ಭಾರತ ದೇಶದತ್ತ ತಿರುಗಿ ನೋಡುವಂತಾಗಿ ಮಾಡಿದ ಕೀರ್ತಿ ಭಾರತ ರತ್ನ ಪುರಸ್ಕೃತ ಅಟಲ್ ಜೀಯವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಆಡಳಿತ ಅಧಿಕಾರಿ ಮಹಂತೇಶ್ ಕೋಟವಾಗಿ, ಪಾಂಡುರಂಗ ಮಹೇಂದ್ರಕರ್, ಸಾಹಿತ್ಯ ರತ್ನ ಮಹಾರಾಜ್ ಸಿದ್ದು ಹಳ್ಳೂರ, ಮಂಜುನಾಥ್ ರೇಳೇಕರ್ ಹಾಗೂ ಕಾರ್ಯಕರ್ತರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸುಭಾಸ್ ಗೊಡ್ಯಾಗೋಳರವರು ನಿರೂಪಿಸಿ, ವಂದಿಸಿದರು.
ಅಜಾತಶತ್ರು ಅಟಲ್ಜೀ ಯವರ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳು ಅಪಾರ : ಲಕ್ಷ್ಮಣ್ ಅಡಿಹುಡಿ


