ಗಂಗಾವತಿ: ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿರುವ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗಾಲಿ ಜನಾರ್ದನರೆಡ್ಡಿ ಹೇಳಿದರು.
ಕಾಲೇಜಿಗೆ ಶುಕ್ರವಾರ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕುಡಿಯುವ ನೀರಿನ ಸೌಕರ್ಯ, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗುವುದು. ಜಿಲ್ಲೆಯಲ್ಲಿ ಇರುವ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಎಸ್‌ಕೆಎನ್‌ಜಿ ಕಾಲೇಜು ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿದ್ದು, ಅವರ ಆಶೋತ್ತರಗಳಿಗೆ ಸ್ಪಂದಿಸಲಾಗುವುದು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ನೂತನ ಸದಸ್ಯರನ್ನು ಕಾಲೇಜಿನ ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ ಸ್ವಾಗತಿಸಿದರು. ಬೋಧಕ-ಬೋಧಕೇತರ ಸಿಬ್ಬಂದಿ ಅತಿಥಿಗಳನ್ನು ಗೌರವಿಸಿದರು.
ಈ ವೇಳೆ ಮುಖಂಡರಾದ ಯಮನೂರಪ್ಪ ಚೌಡ್ಕಿ, ಡಿ.ಕೆ. ಅಗೋಲಿ, ಚಂದ್ರು ಹೇರೂರು, ಯಮನೂರಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಸೋಮಶೇಖರ ಕಂಪ್ಲಿ, ವನಜಾಕ್ಷಿ ಬಸವರಾಜ ಹಿರೂರು, ರಮೇಶ್ ಹೊಸಮನಿ ಜಂತಕಲ್, ರವಿ ಯಲಬುರ್ತಿ, ದೀಪಕ್ ಬಾಂಟ್ಯಾ, ವೀರೇಶ್ ಬಲಕುಂದಿ, ರಾಜೇಶ್ ಬಸವನದುರ್ಗ, ರಾಘು ವೆಂಕಟಗಿರಿ, ಆನಂದಗೌಡ, ಆಸೀಫ್ ಬಿಚ್ಚುಗತ್ತಿ, ಸುಧಾ ಮಂಜುನಾಥ ಬಸಾಪಟ್ಟಣ, ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೃಷ್ಣ, ಕನ್ನಡ ವಿಭಾಗದ ಮುಖ್ಯಸ್ಥರಾದ ಮುಮ್ತಾಜ್ ಬೇಗಂ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಅಕ್ಕಿ ಮಾರುತಿ, ರಾಜ್ಯಶಾಸ್ತ್ರ ವಿಭಾಗದ ಮಂಜುನಾಥ ಕೆ.ಎಚ್, ನಿರ್ವಹಣಾಶಾಸ್ತ್ರದ ಅನಿಲ್, ಅನಿತಾ, ಅಶ್ರಫ್, ದೈಹಿಕ ಶಿಕ್ಷಣದ ಅನಿಲ್, ಕನ್ನಡ ವಿಭಾಗದ ಪವನ್‌ಕುಮಾರ್ ಗುಂಡೂರು, ಶಾಮಿದ್ ಸಾಬ್, ಪ್ರತಿಭಾ, ವೀರೇಶ್, ದುರ್ಗೇಶ್ ಸೇರಿದಂತೆ ಇತರರು ಇದ್ದರು.


