ಹುನಗುಂದ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪರಮ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಹಾಕಿಕೊಂಡ ಅನೇಕ ಕಾರ್ಯಕ್ರಮಗಳಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣ ಕೂಡ ಒಂದು ಕಾರ್ಯಕ್ರಮವಾಗಿದೆ ಎಂದು ತಾಲೂಕಾ ಯೋಜನಾಧಕಾರಿ ಸಂತೋಷ ಹೇಳಿದರು.
ಸಮೀಪದ ನಾಗೂರ ಗ್ರಾಮದ ಕಡು ಬಡವರು ಹಾಗೂ ನಿರ್ಗತಿಕರಾದ ನೀಲಮ್ಮ ಸಿಂಗಾಡಿ ಅವರ ಮನೆ ಸಂಪೂರ್ಣ ಬಿದ್ದು ಹೋಗಿರುವುದನ್ನ ಧರ್ಮಸ್ಥಳ ಸಂಸ್ಥೆ ಗಮನಿಸಿ ಅವರಿಗೆ ಹೊಸ ಮನೆ ನಿರ್ಮಾಣ ಮಾಡಿಕೊಡುವ ಉದ್ದೇಶದಿಂದ ಭೂಮಿ ಪೂಜೆಯನ್ನು ನೆವೇರಿಸಲಾಯಿತು ಎಂದರು. ಈ ಸಂದರ್ಭದಲ್ಲಿ ಗ್ರಾಮದ ಗಣ್ಯ ಸಂಗಪ್ಪ ಹೊಸೂರು, ಬಸವರಾಜ್ ನರಗುಂದ, ಅಮರಗೌಡ ಪಾಟೀಲ್, ಬಸಟ್ಟೇಪ್ಪ ಶಿಂಗಾಡಿ, ಶೌರ್ಯ ಘಟಕದ ಅಧ್ಯಕ್ಷ ಈರಣ್ಣ ಬಡಿಗೇರ್, ಸೇವಾ ಪ್ರತಿನಿಧಿಯಾದ ಮಂಜುಳಾ ಗುಣಕಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸುಮಂಗಲಾ, ವಲಯದ ಮೇಲ್ವಿಚಾರಕ ಅರುಣಕುಮಾರ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.


