ಅರಳಿದ ಹೂ ಹೇಗೆ ಸಂತೋಷ ನೀಡುತ್ತದೆ, ಹಾಗೆ ಮನುಷ್ಯನಿರಬೇಕು : ಯೋಗಿನಿ ಅಕ್ಕ
ಕೊಪ್ಪಳ: ಮನುಷ್ಯ ಮಾನಸಿಕ ಈತನು ಚೆನ್ನಾಗಿ ಇಟ್ಟುಕೊಳ್ಳಬೇಕು ಅರಳಿದ ಹೂ ಹೇಗೆ ಸಂತೋಷ ನೀಡುತ್ತದೆ, ಹಾಗೆ
ಮನುಷ್ಯ ಸದಾ ಅರಳಿದ ಹೂವಾಗಿರಬೇಕು ಎಂದು ಈಶ್ವರೀಯ ವಿವಿಯ ಯೋಗಿನಿ ಅಕ್ಕನವರು ಅಭಿಪ್ರಾಯ ಪಟ್ಟರು.
ಅವರು ನಗರದ ನಂದಿನಗರದ ಶ್ರೀ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆಯ 22 ನೇ ವರ್ಷದ ಶಾಲಾ ವಾರ್ಷಿಕೋತ್ಸವ
ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನು ಇಂದು ರೋಟಿ, ಕಪಡಾ, ಮಕಾನ್ ಎಲ್ಲವನ್ನೂ ಗಳಿಸಿಕೊಂಡು ಹಾಯಾಗಿ ಇದಿನಿ ಅನಿಸಿದರೂ ಏಙ್ನೋ
ಕಳೆದುಕೊಂಡ ಹಾಗೆ ಭಾಸವಾಗುತ್ತಿರುವದಕ್ಕೆ ಕಾರಣ, ಅವರಿಗೆ ಮಾನಸಿಕ ನೆಮ್ಮದಿ ಇಲ್ಲ, ಕಾರಣ ಆಧ್ಯಾತ್ಮಿಕ ಜೀವನ
ಶೈಲಿಯನ್ನು ಮನುಷ್ಯ ಅಳವಡಿಸಿಕೊಳ್ಳಬೇಕಿದೆ, ಆತ್ಮ ಪರಮಾತ್ಮ ಆದಾಗ ಬದುಕು ಸಾರ್ಥಕವಾಗುತ್ತದೆ. ಒಳ್ಳೆಯ
ಕೆಲಸಗಳನ್ನು ಮಾಡುತ್ತ ಉತ್ತಮ ಶಿಕ್ಷಣ ಪಡೆದು ನಮ್ಮ ನೆನಪು ಉಳಿಯುವ ಹಾಗೆ ಬದುಕಬೇಕು ಎಂದರು.
ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನು ಆಡಿದ ಸಂಸ್ಥೆಯ ಮುಖ್ಯಸ್ಥ ಸುರೇಶ ಕುಂಬಾರ ಅವರು, ಈ ವರ್ಷ
ನಂದೀಶ್ವರ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಾಧಿಸಿ ವಿವಿಧ ವೃತ್ತಿ ಮಾಡುತ್ತಿದ್ದು, ಅವರನ್ನೇ ಅತಿಥಿಗಳನ್ನಾಗಿ ಕರೆಸಿ
ಅವರ ಅನಿಸಿಕೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ವಾರ್ಷಿಕೋತ್ಸವವನ್ನು ವಿಶೇಷ ಮಾಡಲಾಗಿದೆ, ಇದು
ಶಾಲೆಯ ನಿಜವಾದ ಸಾಧನೆ ಎಂದ ಅವರು, ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕದೊಂದಿಗೆ ಸಕಾರಾತ್ಮಕ ಉತ್ತಮ ಶಿಕ್ಷಣ
ನೀಡುತ್ತಿದ್ದೇವೆ ಎಂದರು.

ವೇದಿಕೆಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ವಿವಿಧ ಸರಕಾರಿ, ಖಾಸಗಿ, ಸ್ವಂತ ಉದ್ಯೋಗ ಮಾಡುತ್ತಿರುವ ಶಿಕ್ಷಕಿ
ಅನಿತಾ ಮಂಜುನಾಥ ಪಲ್ಲೇದ, ಸಿವಿಲ್ ಇಂಜಿನಿಯರ್ ಸೈಯದಗ ಅಲ್ತಾಫ್ ಹುಸೇನ್, ಆರೋಗ್ಯ ನಿರೀಕ್ಷಕ ಅಭಿಷೇಕ
ಕುಂಬಾರ, ಪೋಸ್ಟ್ ಆಫೀಸ್ ಉದ್ಯೋಗಿ ತೇಜಸ್ವಿನಿ ಬೆಲ್ಲದ್, ಮೆಕಾನಿಕಲ್ ಇಂಜಿನಿಯರ್ ಪ್ರವೀಣಕುಮಾರ,
ಕಂಪ್ಯೂಟರ್ ತರಬೇತುದಾರರಾದ ತೇಜಸ್ವಿನಿ ದಾಸರ, ಸುಖಪ್ರಧ ಮೆಡಿಕಲ್ ನ ಹನುಮೇಶ ಗುರಿಕಾರ, ಸಬಿಯಾ
ಸಿರಾಜ್ ಶೇಖ್, ರವಿ ಜೆ., ಆಶಾ ಕವಲೂರ, ಸಭಾ ಅಡ್ಡೆವಾಲೆ, ಸಮೀರ್ ಇದ್ದರು. ಕುಮಾರಿ ಸ್ಪಂದನಾ ಕುಂಬಾರ
ಪ್ರಾರ್ಥಿಸಿದರು, ಕುಮಾರಿ ವಿದ್ಯಾಶ್ರೀ ಸ್ವಾಗತಿಸಿದರು, ವಾರ್ಷಿಕ ವರದಿಯನ್ನು ರಂಜಾನ್ ಅಂಜಲ್ ವಾಚಿಸಿದರು,
ಸಂಸ್ಥೆಯ ಸಂಸ್ಥಾಪಕರಾದ ಶಿವಪ್ಪ ಶೆಟ್ಟರ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು.
ಕಾರ್ಯಕ್ರಮದ ಸಂಯೋಜನೆಯನ್ನು ಶಿಕ್ಷಕಿಯರಾದ ಲತಾ ಗಡ್ಡದ, ವಿದ್ಯಾಶ್ರೀ ಹಿರೇಮನಿ, ಲಕ್ಷ್ಮೀ ಪಾಟೀಲ್, ಜಯಶ್ರೀ
ಶಿವಾಜಿ, ಕವಿತಾ ಕುಂಬಾರ, ಮೇಘನಾ ಕುಂಬಾರ ಮಾಡಿದರು.


