ಘಟಪ್ರಭಾ. ದಿ. ಮಧುಕರ ದೇಶಪಾಂಡೆ ಅವರ ದಾನಧರ್ಮ, ಪರಿಸರ ಪ್ರೇಮ ಪರೋಪಕಾರಿ ಗುಣಗಳು ಎಲ್ಲರಿಗೂ ಆದರ್ಶ ಎಂದು
ಮಾಜಿ ಸಚಿವ ಆರ್ ಎಮ. ಪಾಟೀಲ ಹೇಳಿದರು.
ಅವರು ಇತ್ತಿಚ್ಚೆಗೆ ನಿಧನರಾದ ಮಲ್ಲಾಪುರ ಪಿ ಜಿ ಘಟಪ್ರಭಾದ ಇನಾಮದಾರ ಆಗಿದ್ದ ದಿವಂಗತ ಮಧುಕರ ದೇಶಪಾಂಡೆ ಇನಾಮದಾರ ಅವರ ಮನೆಗೆ ಬೇಟಿ ನೀಡಿ ವೈಕುಂಠ ಸಮಾರೋಧನೆ ಕಾರ್ಯಕ್ರಮದಲ್ಲಿ ಮಾತನಾಡಿ ದಿವಂಗತರ ದಾನಧರ್ಮ ಪರಿಸರ ಪ್ರೇಮ, ರೋಪಕಾರಿ ಗುಣಗಳು ಎಲ್ಲರಿಗೂ ಆದರ್ಶವಾಗಿವೆ ಅವರ ಹೆಸರಿನಲ್ಲಿ ಘಟಪ್ರಭಾದ ಪ್ರತಿಯೊಂದು ಮನೆಯವರು ಒಂದೊಂದು ಗಿಡವನ್ನು ನೆಟ್ಟು ಅದನ್ನು ಬೆಳೆಸುವ ದೇವರೇ ದೇಶಪಾಂಡೆ ಅವರಿಗೆ ಸಲ್ಲಿಸುವದೆ ಶೃದ್ಧಾಂಜಲಿ ಎಂದು ಮಾಜಿ ಸಚಿವರು ಮತ್ತು ಬರ್ಡ್ಸ್ ತುಕ್ಕಾನಟ್ಟಿ ಸಂಸ್ಥೆಯ ಅಧ್ಯಕ್ಷರಾದ ಆರ್ ಎಂ ಪಾಟೀಲ ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯರಾದ ಸುಭಾಷ್ ದಡ್ಡೀಕರ, ಸುರೇಶ್ ಪಾಟೀಲ,ರಾಮಣ್ಣ ಹುಕ್ಕೇರಿ, ಶ್ರೀಕಾಂತ ವಿ ಮಹಾಜನ, ರಮೇಶ್ ತುಕ್ಕಾನಟ್ಟಿ ಗಂಗಾಧರ ಬಡಕುಂದ್ರಿ, ಮುತ್ತಣ್ಣ ಹತ್ತರವಾಟ, ಶ್ರೀಕಾಂತ ಕುಲಕರ್ಣಿ ಮುಂತಾದವರು ಮಾತನಾಡಿ ದೇಶಪಾಂಡೆ ಅವರು ಊರಿಗೆ ಮಾಡಿದ ಉಪಕಾರವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ರಾಮಚಂದ್ರ ದೇಶಪಾಂಡೆ, (ಅರುಣ್) ಮರಳೀಧರ ಜತ್ಕರ, ಸಂತೋಷ ಕುಲಕರ್ಣಿ, ಪ್ರಕಾಶ್ ಕುಲಕರ್ಣಿ, ಪ್ರವೀಣ್ ಮಟಗಾರ, ವೀರಭದ್ರ ಖಾನಾಪುರೆ, ರಮೇಶ್ ಕಬಾಡಗಿ, ಬಸವರಾಜ ಬೆಳ್ಳಣ್ಣವರ, ಬಸವರಾಜ ಕಾಡದವರ ಸೇರಿದಂತೆ, ಘಟಪ್ರಭಾ, ಮುನ್ಯಾಳ ಗೋಕಾಕ ಇಚಲಕರಂಜಿ, ಬೆಳಗಾವಿ, ಹುಕ್ಕೇರಿ, ಪಾಶ್ಚಾಪುರ, ಕೊಲ್ಲಾಪುರ, ಗಡಹಿಂಗಲಜ ಸೇರಿದಂತೆ ನಾನಾ ಭಾಗಗಳಿಂದ ನೂರಾರು ದೇಶಪಾಂಡೆ ಇನಾಮದಾರ ಅವರ ಅಭಿಮಾನಿಗಳು ಭಾಗವಹಿಸಿ ಶೃದ್ಧಾಂಜಲಿ ಸಲ್ಲಿಸಿದರು.


