“ಭೌತಿಕ- ಶಾರೀರಿಕವಾಗಿ ಮಕ್ಕಳ ಬೆಳವಣಿಗೆಯಲ್ಲಿ ಕ್ರೀಡೆಗಳು ಮಹತ್ತರವಾಗಿವೆ”

Abushama Hawaldar
“ಭೌತಿಕ- ಶಾರೀರಿಕವಾಗಿ ಮಕ್ಕಳ ಬೆಳವಣಿಗೆಯಲ್ಲಿ ಕ್ರೀಡೆಗಳು ಮಹತ್ತರವಾಗಿವೆ”
WhatsApp Group Join Now
Telegram Group Join Now

ಇಂಡಿ: ಭೌತಿಕವಾಗಿ ಶಾರೀರಿಕವಾಗಿ ಮಕ್ಕಳ ಬೆಳವಣಿಗೆಯಲ್ಲಿ ಕ್ರೀಡೆಗಳು ಮಹತ್ತರವಾಗಿದೆ. ಆ ನಿಟ್ಟಿನಲ್ಲಿ ಒಳ್ಳೆಯ ಗುಣಮಟ್ಟದ ಶಿಕ್ಷÀಣದ ಜೊತೆಗೆ ಪ್ರತಿಯೊಂದು ಮಗುವನ್ನು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಶಿಕ್ಷಕರು ಪ್ರೇರೆಪಿಸುವುದು ಅತಿ ಅವಶ್ಯವಾಗಿದೆ ಎಂದು ಅಬ್ದುಲ ರೆಹಮಾನ ಬಾಗವಾನ ಹೇಳಿದರು.

ಅವರು ನಗದರ ಎಸ್.ಜಿ.ಬಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಡ ಶಾಲೆಯ ೯ನೇ ವಾರ್ಷಿಕ ಕ್ರೀಡಾ ಕೂಟಾ ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಮಾತನಾಡಿದರು.
ಇಂದಿನ ದಿನಮಾನಗಳ ಶಿಕ್ಷಣಕ್ಕೆ ಎಷ್ಟು  ಒತ್ತು ನಿಡುತ್ತೆವೆ ಹಾಗಿ ಕ್ರೀಡೆಗಳಿಗೂ ನೀಡಬೇಕಾಗಿದೆ. ಕಾರಣ ಕ್ರೀಡೆಗಳು ಮನೋರಂಜನೆ ನಿಡುವುದಲ್ಲದೆ ದೈಹಿಕವಾಗಿ ಆರೋಗ್ಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಮಕ್ಕಳ ಕ್ರೀಡಾ ಮನೋಭಾವನೆ ಬೆಳೆಸುತ್ತದೆ. ಆದ್ದರಿಂದ ಆಟದ ಜೊತೆಯಲ್ಲಿ ಪಾಠ ಮಾಡುವುದರಿಂದ ಸದೃಡವಾದ ದೇಹ, ಸದೃಡವಾದ ಮನಸ್ಸು ಹೊಂದಲು ಸಾದ್ಯ ಎಂದರು.

ಮುಖ್ಯಗುರು ರಾಜೇಂದ್ರ ಪವಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಪುರಸಭೆ ಸದಸ್ಯ ಜೈನುದ್ದಿನ ಬಾಗವಾನ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆ ಮೇಲೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬುಶಾಮಾ ಹವಾಲ್ದಾರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಸದ್ದಾಮಹುಸೇನ ಜಮಾದಾರ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನಕಾರ್ಯದರ್ಶಿ ರಾಜಕುಮಾರ ಚಾಬುಕಸವಾರ, ಮಾಜಿ ಸೈನಿಕರಾದ ಮಹೀಬುಬು ಬಳಗಾನೂರ, ಖಲೀಲ ಇಂಡಿಕರ, ಮಾಜಿ ಸೈನಿಕರಾದ ತೌಫಿಕ್ ಯಾಳಗಿ, ರಜಾಕಸಾಬ ಬಾಗವಾನ, ಶಿವಲಿಂಗಪ್ಪ ಓಂಕಾರಿ, ಹಣಮಂತ ಹದಗಲ್ಲ, ಶಕೀಲಅಹ್ಮದ ಹುಮನಾಬಾದ, ಅಲ್ಪಾಪ ರೂಗಿ ಸೇರಿದಂತೆ ಅನೇಕರು ಇದ್ದರು. ಶಿಕ್ಷಕಿ ಶಾಕೀರಾ ನಿರೂಪಿಸಿದರು. ಶಿಕ್ಷಕ ಈರಣ್ಣಾ ವಂದಿಸಿದರು.

WhatsApp Group Join Now
Telegram Group Join Now
Share This Article