ಚನ್ನಮ್ಮನ ಕಿತ್ತೂರು ಡಿ 26.,:- ಚನ್ನಮ್ಮನ ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ತೃತೀಯ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ
ಬಿಡುಗಡೆ ಸಮಾರಂಭವು ಬುಧುವಾರ ರಾಜಗುರು ಸಂಸ್ಥಾ ನ ಕಲ್ಮಠದ ಶ್ರೀ ಶಂಕರ ಚಂ ದರಗಿ ಸಭಾ ಭವನದಲ್ಲಿ ಅತ್ಯಂತ
ಅರ್ಥಪೂರ್ಣವಾಗಿ ಜರುಗಿತು .
ಕಾ ರ್ಯ ಕ್ರಮದ ಅಧ್ಯ ಕ್ಷತೆ ವಹಿಸಿದ್ದ ಕಸಾಪ ತಾಲೂಕಾ ಅಧ್ಯಕ್ಷರಾದ ಡಾ . ಎಸ್. ಬಿ. ದಳವಾಯಿ ಅವರು ಪ್ರಾಸ್ತಾವಿಕವಾ ಗಿ
ಮಾತನಾಡಿ, ಹಾಲಿ ಪದಾಧಿಕಾರಿಗಳ ಅವಧಿಯಲ್ಲಿಯೇ ಮತ್ತೊಂ ದು ಸಾಹಿತ್ಯ ಸಮ್ಮೇಳನ ಆಯೋಜಿಸುವ ಬಗ್ಗೆ ಚರ್ಚೆ
ನಡೆದಿದ್ದು , ಗ್ರಾಮೀಣ ನೆಲೆಯಲ್ಲಿ ಸಾಹಿತ್ಯವನ್ನು ನಿರಂತರವಾಗಿ ಜೀವಂತವಾಗಿರಿಸುವ ಕಾರ್ಯ ಕಸಾಪದಿಂದ
ನಡೆಯಬೇಕು ಎಂದು ಅಭಿಪ್ರಾ ಯಪಟ್ಟರು .
ಬೆಳಗಾ ವಿ ಜಿಲ್ಲಾ ಕಸಾಪ ಪ್ರತಿನಿಧಿ ಡಾ . ಜಗದೀಶ ಹಾರುಗೊಪ್ಪ ಅವರು ಮಾತನಾಡಿ, ಈ ಭಾಗದಲ್ಲಿರು ವ ಅನೇ ಕ
ಪ್ರತಿಭಾ ವಂ ತ ಸಾ ಹಿತಿಗಳು ಮತ್ತು ಕವಿಗಳು ಸಮಾಜದ ಗಮನಕ್ಕೆ ಬಾರದಿರುವುದು ವಿಷಾದನೀಯ. ಅಂತಹ
ಮರೆಮಾ ಚಿದಪ್ರತಿಭೆಗಳನ್ನು ಮುನ್ನಲೆಗೆ ತರುವ ಮಹತ್ವದ ಕೆಲಸವನ್ನು ಕಿತ್ತೂರು ಕಸಾಪ ಮಾಡುತ್ತಿದೆ ಎಂದು ಶ್ಲಾಘಿಸಿದ
ಅವರು ಈ ಭಾ ಗದ ಅನೇಕ ಸಾಹಿತಿಗಳು ಮೂಲತಃ ಕೃಷಿಕರಾಗಿರುವುದರಿಂ ದ, ರೈತರ ಬದುಕಿಗೆ ಸಾಹಿತ್ಯದ ಮೂಲಕ
ಚಿಂ ತನೆ ನೀಡುವ ಉದ್ದೇಶದಿಂದ ಈ ಸಮ್ಮೇಳನದಲ್ಲಿ ಕೃಷಿ ಚಿಂತನೆ ಕುರಿತ ವಿಶೇಷ ಸಂವಾ ದವನ್ನು ಆಯೋಜಿಸಲಾಗಿದೆ.
ಬೆಂಗಳೂರಿನ ಖ್ಯಾತ ಚಿಂತಕ ಡಾ . ಬಿ. ಎಂ .ನಾಗಭೂ ಷಣ ಅವರು ಈ ಸಂವಾದದಲ್ಲಿ ಮಾ ತನಾ ಡಲಿದ್ದಾರೆ ಎಂದು
ತಿಳಿಸಿದರು .
ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾ ಸ್ವಾಮಿಗಳು ಆಶೀರ್ವಚನ ನೀಡುತ್ತಾ , ಕಿತ್ತೂರು
ತಾಲೂಕಾದ ನಂತರ ಮೂರನೇಯ ಸಾಹಿತ್ಯ ಸಮ್ಮೇಳನವು ಶರಣರ ವಚನಗಳು ಹರಿದಾ ಡಿದ ಅನು ಭವ ಮಂ ಟಪದಂ ತಹ
ಪವಿತ್ರ ಸ್ಥಳದಲ್ಲಿ ನಡೆಯುತ್ತಿರುವುದು ವಿಶೇಷ ಎಂದರು . ಸಾಹಿತ್ಯವು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯನ್ನು
ಹೊಂದಿದ್ದು , ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು .
ಸಮ್ಮೇ ಳನವು ಸಾಹಿತ್ಯ , ಸಂಸ್ಕೃತಿ ಮತ್ತು ಕೃಷಿ ಚಿಂತನೆಯ ಸಂಗಮವಾ ಗಿರಲಿದ್ದು , ಗ್ರಾಮೀಣ ಪ್ರತಿಭೆಗಳಿಗೆ
ವೇದಿಕೆಯಾಗುವುದರ ಜೊತೆಗೆ ಕನ್ನಡ ಸಾಹಿತ್ಯಕ್ಕೆ ಹೊಸ ಚೈತನ್ಯ ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು .
ಈ ಸಂ ದರ್ಭ ದಲ್ಲಿ ನಿವೃತ್ತ ಶಿಕ್ಷಕ ಎಂ. ಎಸ್. ಕಲ್ಮಠ, ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಕಳಸಣ್ಣವರ,
ನವೋದಯ ತರಬೇತಿದಾರರ ಸಂಘದ ಅಧ್ಯಕ್ಷ ಶಿವಾನಂದ ಮಾವಿನಕೊಪ್ಪ, ಸದಸ್ಯರಾದ ಕುಮಾರ ಪರದೇಶಿ, ಕ್ಯುರೇಟರ್
ರಾಘವೇಂದ್ರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು .
ಕಾ ರ್ಯ ಕ್ರಮದ ನಿರೂ ಪಣೆಯನ್ನು ಶಿಕ್ಷಕ ವಿವೇಕ ಕುರಗುಂದ ಅವರು ನಿಭಾಯಿಸಿದರೆ, ಗೌರವ ಕೋಶಾಧ್ಯಕ್ಷ ಮಹೇಶ್ವರ
ಹೊಂಗಲ ಅವರು ವ ದನಾರ್ಪಣೆ ಮಾಡಿದರು .
ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ತೃತೀಯ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ


